ಸಾರಾಂಶ
- ಬಿ.ಪಿ.ಹರೀಶ, ಜಿ.ಎಂ.ಸಿದ್ದೇಶ್ವರ ವಿರುದ್ಧ ಮಾಡಾಳ್ ಮಲ್ಲಿಕಾರ್ಜುನ ವಾಗ್ದಾಳಿ
- - - ಕನ್ನಡಪ್ರಭ ವಾರ್ತೆ ದಾವಣಗೆರೆಬಿಜೆಪಿ ವರಿಷ್ಠ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ನಾಯಕರ ವಿರುದ್ಧ ಮಾನಸಿಕ ಅಸ್ವಸ್ಥರಂತೆ ಹರಿಹರ ಶಾಸಕ ಬಿ.ಪಿ. ಹರೀಶ ಹೇಳಿಕೆ ನೀಡುತ್ತಿದ್ದಾರೆ. ಅವರು ತಾವು ಜೂನಿಯರ್ ಯತ್ನಾಳ್ ಅಂತಾ ಸಾಬೀತುಪಡಿಸಲು ಹೊರಟಿದ್ದಾರೆ, ಈ ಭ್ರಮೆಯಿಂದ ಹೊರಬನ್ನಿ ಎಂದು ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ ವ್ಯಂಗ್ಯವಾಡಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಚೇಲಾನಂತೆ ವರ್ತಿಸುತ್ತಿರುವ ಹರೀಶ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಎಷ್ಟು ಲೀಡ್ ಕೊಡಿಸಿದ್ದಾರೆ? ಅಲ್ಲಿ ಬಿಜೆಪಿ ಶಾಸಕ, ಜೆಡಿಎಸ್ ಮಾಜಿ ಶಾಸಕರು ಒಟ್ಟಾಗಿ ಹೋದರೂ ಕಾಂಗ್ರೆಸ್ ಅಭ್ಯರ್ಥಿಗೆ ಹೆಚ್ಚು ಮತ ಹೋಗಿದ್ದು ಹೇಗೆ ಎಂದರು.ಕಾಂಗ್ರೆಸ್ಸಿನ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರ ಕುಟುಂಬದ ಋಣ ತೀರಿಸುವ ಕೆಲಸ ಮಾಡಿದ್ದಾರೆ ಎಂದೆಲ್ಲಾ ಆರೋಪ ಮಾಡುತ್ತಿದ್ದಾರೆ. ನಮ್ಮನ್ನು ಕೇಳಿ ಮಾಡಾಳ್ ಮಲ್ಲಿಕಾರ್ಜುನಗೆ ಪಕ್ಷಕ್ಕೆ ವಾಪಸ್ ಸೇರ್ಪಡೆ ಮಾಡಿಕೊಳ್ಳಬೇಕಿತ್ತು ಅಂದಿದ್ದಾರೆ. ಹೈಕಮಾಂಡ್ ಆದೇಶದಂತೆ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನನ್ನನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಚನ್ನಗಿರಿ ಕ್ಷೇತ್ರದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾವೇ ಎಂಬ ಮಾತನ್ನು ನಾವು ಆಡುವುದಿಲ್ಲ. ಆದರೆ, ಅಲ್ಲಿ ಪಕ್ಷಕ್ಕೆ ನಮ್ಮ ಕೊಡುಗೆ ಅಪಾರವಾಗಿದೆ ಎನ್ನುತ್ತೇವೆ. 2004ರಲ್ಲಿ ನಮ್ಮ ಕುಟುಂಬ ಬಿಜೆಪಿ ಜೊತೆಗಿತ್ತು. ಆನಂತರ ಕೆಲ ದುಷ್ಟರಿಂದ ತೊಂದರೆಯಾಯಿತು. ದುಷ್ಟರನ್ನು ಸದೆ ಬಡಿಯಲು ನಾನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದೆ. ಪಕ್ಷದಲ್ಲಿ, ಕ್ಷೇತ್ರದಲ್ಲಿ ನಾವು ತುಂಬಾ ಬೆಳೆಯುತ್ತಿದ್ದೇವೆಂಬ ಕಾರಣಕ್ಕೆ ಹೊಟ್ಟೆ ಕಿಚ್ಚು, ದುರಂಹಕಾರದ ಪರಮಾವಧಿಯಿಂದ ನಮ್ಮ ವಿರುದ್ಧ ಸಂಚು ಮಾಡಿದ್ದವರು ಇದೇ ಸಿದ್ದೇಶ್ವರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 3-4 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಹಣ ಕೊಟ್ಟು, ಬಿಜೆಪಿ ಸೋಲಿಗೆ ಕಾರಣರಾದವರೆ ಇಪ್ಪತ್ತು ವರ್ಷ ಸಂಸದರಾಗಿದ್ದವರು. ಈ ಬಗ್ಗೆ ಕೇಳಿದರೆ ತಾವು ಒಬ್ಬರಿಗೆ ಸಾಲ ಕೊಟ್ಟಿದ್ದೇವೆಂದರೂ, ಉಳಿದವರಿಗೆಲ್ಲಾ ಕೊಟ್ಟಿದ್ದು ಏನೆನ್ನಬೇಕು? ಬಿಜೆಪಿ ಸೋಲಿಗೆ ಕಾರಣ ಯಾರೆಂಬುದಕ್ಕೆ ಇಷ್ಟು ಸಾಕಲ್ಲವೇ? ಸಮಯ ಬಂದಾಗ ಎಲ್ಲವನ್ನೂ ದಾಖಲೆಗಳ ಸಮೇತ ಮುಂದಿಡುತ್ತೇವೆ ಎಂದರು.ಮುಖಂಡರಾದ ಚಂದ್ರಶೇಖರ ಪೂಜಾರ, ಪ್ರವೀಣ ಜಾಧವ್, ರಾಜು ವೀರಣ್ಣ, ಮಂಜು, ಸುಮಂತ್, ಸುಣಿಗೆರೆ ಕುಮಾರ, ಚಂದ್ರು, ಎಚ್.ಜಿ.ಮಲ್ಲಿಕಾರ್ಜುನ, ಪಟ್ಲಿ ನಾಗರಾಜ ಇತರರು ಇದ್ದರು.
- - -ಕೋಟ್ ದಾವಣಗೆರೆಯಲ್ಲಿ ಡಿ.10 ಮತ್ತು 11ರಂದು ಬಿಜೆಪಿ ರಾಜ್ಯದ ಮಾಜಿ ಸಚಿವರು, ಮಾಜಿ ಶಾಸಕರು, ಹಾಲಿ ಶಾಸಕರು, ನಾಯಕರ ಸಭೆ ನಡೆಸುತ್ತೇವೆ. ಸ್ಥಳ ಇನ್ನೂ ನಿಗದಿಯಾಗಿಲ್ಲ. ಎರಡೂ ದಿನಗಳ ಕಾಲ ಚರ್ಚಿಸಿ, ಪಕ್ಷದ ಪುನಶ್ಚೇತನಗೊಳಿಸುವ ಬಗ್ಗೆ, ಮಧ್ಯ ಕರ್ನಾಟಕದಲ್ಲಿ ರಾಜ್ಯ ಸಮಾವೇಶ ಆಯೋಜಿಸುವ ಬಗ್ಗೆ ಚರ್ಚಿಸುತ್ತೇವೆ. ಈಗಾಗಲೇ ಮೈಸೂರು, ಇತರೆಡೆ ಪಕ್ಷದ ಲ್ಲಿ ಎಲ್ಲವನ್ನೂ ಸರಿಪಡಿಸುವಂತೆ, ಪಕ್ಷದೊಳಗಿನ ಮಹಿಷಾಸುರರನ್ನು ಮರ್ಧಿಸುವಂತೆ ತಾಯಿಗೆ ಹರಕೆ ಹೊತ್ತು ಬಂದಿದ್ದೇವೆ
- ಮಾಡಾಳ ಮಲ್ಲಿಕಾರ್ಜುನ, ಬಿಜೆಪಿ ಮುಖಂಡ, ಚನ್ನಗಿರಿ ತಾಲೂಕು- - - -4ಕೆಡಿವಿಜಿ8.ಜೆಪಿಜಿ:
ದಾವಣಗೆರೆಯಲ್ಲಿ ಬುಧವಾರ ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.