ಅಳ್ನಾವರ: ಭಾರತೀಯ ಮೌಲ್ಯ, ಸಂಸ್ಕಾರ ಮತ್ತು ಚಿಂತನೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳೋಣ ಎಂದು ಧಾರ್ಮಿಕ ಚಿಂತಕ ಸುಧಾಕರ ಶೆಟ್ಟಿ ಹೇಳಿದರು.
ಪಟ್ಟಣದ ಉಮಾಭವನದಲ್ಲಿ ಭಾನುವಾರ ಹಿಂದೂ ಏಕತಾ ವೇದಿಕೆ ಆಯೋಜಿಸಿದ್ದ ನಾರಿ ಪ್ರಬೋಧನ ಕಾರ್ಯಕ್ರಮದಲ್ಲಿ ಸನಾತನ ಸಂಸ್ಕಾರಗಳು ಹಾಗೂ ಪಾಲನೆ ವಿಷಯದಲ್ಲಿ ಮಾತನಾಡಿದರು.ನಮ್ಮ ಪದ್ಧತಿ, ಆಚರಣೆಗಳು ಕೇವಲ ಅಲಂಕಾರಕ್ಕಾಗಿ ಬಳಸಬೇಡಿ. ಬದಲಿಗೆ ಅದರಲ್ಲಿರುವ ವೈಜಾನಿಕ ಚಿಂತನೆಗಳನ್ನು ತಿಳಿದುಕೊಳ್ಳುವ ಮೂಲಕ ಧರ್ಮಪಾಲನೆ ಮಾಡಿ. ಅಂದಾಗ ಮಾತ್ರ ನಮ್ಮ ನಾಡು ಮತ್ತು ಇಲ್ಲಿನ ಸಂಸ್ಕೃತಿ ಉಳಿಯಲು ಸಾಧ್ಯ. ಈ ದೇಶದ ಪ್ರತಿಯೊಂದು ಪ್ರದೇಶಕ್ಕೂ ತನ್ನದೆ ಆಚಾರ-ವಿಚಾರ, ಆಹಾರ ಪದ್ಧತಿ, ಜೀವನ ಶೈಲಿಗಳಿವೆ. ಇಲ್ಲಿನ ದೇವಸ್ಥಾನಗಳು ವೈಜ್ಞಾನಿಕ ಚಿಂತನೆಯ ಕೇಂದ್ರಗಳಾಗಿ ಅಕ್ಷರ ದಾಸೋಹಗಳಾಗಿ ಕಾರ್ಯ ನಿರ್ವಹಿಸುತ್ತವೆ. ನಾವು ಮಕ್ಕಳಿಗೆ ಅಕ್ಷರ ಜ್ಞಾನಕೊಡಿಸುತ್ತಿದ್ದೇವೆ. ಆದರೆ, ಸಂಸ್ಕಾರವನ್ನು ಕೊಡುತ್ತಿಲ್ಲ. ಇದರಿಂದ ಸಮಾಜದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ದ್ವಿಗುಣವಾಗುತ್ತಿರುವುದು ಖೇದಕರ ಸಂಗತಿ,ಕುಟುಂಬವೇ ಸಂಸ್ಕಾರದ ಮೊದಲ ಪಾಠಶಾಲೆ. ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡುವ ಜವಾಬ್ದಾರಿ ಪೋಷಕರ ಮೇಲಿದೆ. ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರಿದರೂ, ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಮರೆಯಬಾರದು. ಆಧುನಿಕತೆಯನ್ನು ಸ್ವೀಕರಿಸುತ್ತಲೇ ನಮ್ಮ ಪರಂಪರೆ, ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಹಿಂದೂ ಜನಜಾಗೃತಿ ಸಮಿತಿಯ ಭವ್ಯಾ ಗೌಡ ಲವ್ ಜಿಹಾದ ವಿಷಯದ ಕುರಿತು ಮಾತನಾಡಿ, ಭಯೋತ್ಪಾದನೆಗಿಂತಲು ದೊಡ್ಡ ಪ್ರಮಾಣದಲ್ಲಿ ಲವ್ ಜಿಹಾದ ಬೆಳೆಯುತ್ತಿದೆ. ಅನ್ಯಕೋಮಿನ ಯುವಕರು ಹಿಂದೂ ಯುವತಿಯರನ್ನು ಪ್ರೀತಿಯನ್ನು ಗುರಿಯಾಗಿರಿಸಿಕೊಂಡು ಅತ್ಯಾಚಾರ ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಪ್ರತಿ ೧೪ ನಿಮಿಷಕ್ಕೊಂದು ದೌರ್ಜನ್ಯ ಮತ್ತು ೨೪ ಸೆಂಕೆಂಡಿಗೊಂದು ಅತ್ಯಾಚಾರಗಳು ದಾಖಲಾಗುತ್ತಿವೆ, ರಾಷ್ಟ್ರೀಯ ತನಿಖಾದಳ ಹೇಳುವಂತೆ ಶಾಹಿನ್ ಗ್ಯಾಂಗ್ ಮೂಲಕ ಜಿಹಾದಿ ಕಾರ್ಯಗಳು ದೇಶದ ಉದ್ದಗಲಕ್ಕೂ ನಡೆಯುತ್ತಿವೆ. ಇದರಿಂದ ಹಿಂದೂ ಯುವತಿಯರು ಜಾಗೃತರಾಗಿರಬೇಕು. ಸ್ತ್ರೀಯರ ಮೇಲೆ ಎಲ್ಲಿ ಅಶ್ಲೀಲ ವರ್ತನೆಗಳು ನಡೆಯುತ್ತವೆಯೋ ಅಂತಹವರಿಗೆ ಅಲ್ಲೆ ಶಿಕ್ಷೆ ನೀಡುವ ಕಾರ್ಯಕ್ಕೆ ಮಹಿಳೆಯರು ಮುಂದಾಗಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಹಿಂದೂ ನಾರಿ ಹಾಗೂ ಕೌಟುಂಬಿಕ ಸಂಬಂಧಂಗಳು ವಿಷಯದಲ್ಲಿ ನಿಪ್ಪಾಣಿಯ ಸತ್ಯಪ್ರಮೋದೇಂದ್ರ ಸರಸ್ವತಿ ಸ್ವಾಮೀಜಿ ಉಪನ್ಯಾಸ ನೀಡಿದರು. ಸಾಂಸ್ಕೃತಿಕ ಉಡುಗೆ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಕ್ತಾರರು ಮತ್ತು ಸ್ವಾಮೀಜಿಯವರೊಂದಿಗೆ ಸಾಮಾಜಿಕ ಚಿಂತನಾ ಚರ್ಚೆಗಳು ಜರುಗಿದವು
ಈ ವೇಳೆ ಮಹಾದೇವ ಸಾಗರೇಕರ್, ಚಂದ್ರಹಾಸ್ ಕಡಕೋಳ, ಉದಯ್ ಶಿಬ್ರಿಕೇರಿ, ಪಾಂಡುರಂಗ ರೇವಣಕರ, ಸಾಧನಾ ಗಾವಡೆ, ರಾಜು ಕರ್ಲೆಕರ್, ನಾಗರತ್ನ ಹಿರೇಮಠ, ಸುಮಾ ಸೊಪ್ಪಿ, ಯಲ್ಲುಬಾಯಿ ಕಾಕತ್ಕರ, ಜಯಶ್ರೀ ಸೊಪ್ಪಿ, ಕವಿತಾ ರಾಂಡೇವಾಡಿ, ಪೂರ್ಣಿಮಾ ಮುತ್ನಾಳ್ ಇದ್ದರು.