ಮನಸ್ಪೂರ್ವಕವಾಗಿ ಸೇವೆ ಮಾಡಿದಾಗ ಜೀವನ ಅರ್ಥಪೂರ್ಣ ಹಾಗೂ ಸಾರ್ಥಕ ಆಗುತ್ತದೆ

ಯಲಬುರ್ಗಾ: ಪ್ರತಿಯೊಬ್ಬರೂ ಶಾಲೆ ಮತ್ತು ಸಮಾಜದ ಸಹಕಾರದಿಂದ ಉತ್ತಮ ಸ್ಥಿತಿಯಲ್ಲಿದ್ದೇವೆ. ನಮ್ಮನ್ನು ರೂಪಿಸಿದ ಶಾಲೆ ಮತ್ತು ಸಮಾಜಕ್ಕೆ ಋಣ ತೀರಿಸುವ ಕಾರ್ಯ ಮಾಡಬೇಕು ಎಂದು ನಿವೃತ್ತ ಉಪನಿರ್ದೇಶಕ ಎಂ.ಎ. ರಡ್ಡೇರ್ ಹೇಳಿದರು.

ತಾಲೂಕಿನ ವಣಗೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಲಬುರ್ಗಾ-ಕುಕನೂರು ತಾಲೂಕಿನ ವಿಶ್ವಬಂಧು ಸೇವಾ ಗುರುಬಳಗದಿಂದ ಹಮ್ಮಿಕೊಂಡಿದ್ದ ೨೫ನೇ ಗೋಡೆ ಬರಹ ಸೇವೆ ಹಾಗೂ ಗೋಡೆ ಬರಹ ಸೇವಾ ಕಾರ್ಯದ ರಜತ ಮಹೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಮನಸ್ಪೂರ್ವಕವಾಗಿ ಸೇವೆ ಮಾಡಿದಾಗ ಜೀವನ ಅರ್ಥಪೂರ್ಣ ಹಾಗೂ ಸಾರ್ಥಕ ಆಗುತ್ತದೆ. ರಜೆ ಅವಧಿಯಲ್ಲಿ ಮಾಡುತ್ತಿರುವ ವಿಶ್ವಬಂಧು ಸೇವಾ ಗುರುಬಳಗದ ಸೇವಾ ಕಾರ್ಯಗಳು ಮಾದರಿ ಮತ್ತು ಮತ್ತೊಬ್ಬರಿಗೆ ಪ್ರೇರಣೆಯಾಗಿವೆ ಎಂದರು.

ವೈದ್ಯ ಡಾ.ಶಿವನಗೌಡ ಪಾಟೀಲ್ ಮಾತನಾಡಿದರು.

ವಿಶ್ವಬಂಧು ಸೇವಾ ಗುರುಬಳಗದ ಮುಖ್ಯಸ್ಥ ಸಿದ್ದಲಿಂಗಪ್ಪ ಶ್ಯಾಗೋಟಿ, ಎಸ್ಡಿಎಂಸಿ ಅಧ್ಯಕ್ಷ ಶರಣಪ್ಪ ಕರಿಗಾರ, ನಿವೃತ್ತ ಮುಖ್ಯಶಿಕ್ಷಕ ಈಶಪ್ಪ ತಳವಾರ್, ಸಂದೀಪ ಈಳಿಗೇರ, ಜಯಶ್ರೀ ಬೂದಿಹಾಳ, ಸಂಗಮೇಶ ಅಬ್ಬಿಗೇರಿ, ಶಿವಪ್ಪ ಉಪ್ಪಾರ, ಶರಣು ಕುರ್ನಾಳ, ಗುರುಪಾದಗೌಡ ಸೂಡಿ, ಬಸವರಾಜ ಮೆಣಸಗಿ, ಅಕ್ಕಮಹಾದೇವಿ ಹಿರೇಮಠ, ಶ್ರೀದೇವಿ ಕುಲಕರ್ಣಿ, ಶಾಂತಾ ಜಂತ್ಲಿ, ಶಿವಕುಮಾರ ಹೊಂಬಳ, ಪ್ರಭಯ್ಯ ಬಳಗೇರಿಮಠ, ಮಂಜುನಾಥಯ್ಯ ತೆಗ್ಗಿನಮನಿ, ಮಂಜುನಾಥ ಮನ್ನಾಪುರ, ಹುಸೇನ್‌ಸಾಬ್ ಬಾಗವಾನ್, ರಾಜಮಹ್ಮದ್ ಬಾಳಿಕಾಯಿ, ಮೆಹಬೂಬ ಬಾವಿಕಟ್ಟಿ, ಯಮನೂರಪ್ಪ ಹಾದಿಮನಿ, ಗವಿಸಿದ್ದಪ್ಪ, ಮೌನೇಶ, ಸಿದ್ದಯ್ಯ ಮಠದ, ದೊಡ್ಡಬಸನಗೌಡ, ಬಾಬುಸಾಬ ಗುಡಿಹಿಂದಲ್, ಬಸವರಾಜ ಉಪ್ಪೀನ ಹಾಗೂ ಗ್ರಾಮದ ಮುಖಂಡರು ಇತರರು ಇದ್ದರು.