ಸಂಸ್ಕೃತಿ, ಪರಂಪರೆ ಉಳಿಸುವ ಕಾರ್ಯವಾಗಲಿ: ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು

| Published : Aug 22 2024, 12:54 AM IST

ಸಂಸ್ಕೃತಿ, ಪರಂಪರೆ ಉಳಿಸುವ ಕಾರ್ಯವಾಗಲಿ: ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು
Share this Article
  • FB
  • TW
  • Linkdin
  • Email

ಸಾರಾಂಶ

ರಾಣಿಬೆನ್ನೂರಿನ ಮ್ಯತ್ಯುಂಜಯ ನಗರದ ಚೆನ್ನೇಶ್ವರ ಮಠದ ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ನೂಲಹುಣ್ಣಿಮೆ ಹಾಗೂ ಜನಜಾಗೃತಿ ಧರ್ಮ ಸಮಾರಂಭ ನಡೆಯಿತು. ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಭಾಗವಹಿಸಿದ್ದರು.

ರಾಣಿಬೆನ್ನೂರು: ನಮ್ಮ ಧಾರ್ಮಿಕ ಆಚಾರ್ಯ ವಿಚಾರಗಳನ್ನು ವಿದೇಶಿಗರು ಕೂಡಾ ಅನುಸರಿಸುತ್ತಿದ್ದಾರೆ ಎಂದು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ನುಡಿದರು.

ಇಲ್ಲಿನ ಮ್ಯತ್ಯುಂಜಯ ನಗರದ ಚೆನ್ನೇಶ್ವರ ಮಠದ ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ನೂಲಹುಣ್ಣಿಮೆ ಹಾಗೂ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ನೂಲ ಹುಣ್ಣಿಮೆ ಸ್ತ್ರೀಯರನ್ನು ಸದಾ ಗೌರವ ಭಾವನೆಯಿಂದ ರಕ್ಷಿಸುವುದು. ಅನ್ಯ ಮಹಿಳೆಯರಲ್ಲಿ ತಾಯಿ ಹಾಗೂ ಸಹೋದರಿಯ ಸ್ಥಾನವನ್ನು ಕಂಡುಕೊಳ್ಳುತ್ತೇವೆ. ಹೀಗಾಗಿ ವಿದೇಶಿಗರು ನಮ್ಮ ಸಂಸ್ಕೃತಿಯನ್ನು ಗೌರವಿಸುತ್ತ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ಉಪನ್ಯಾಸಕ ಶಾಂತರಾಜ ಪಾಟೀಲ್ ಹೊನ್ನಾಳಿ ಮಾತನಾಡಿ, ಇಂದಿನ ದಿನಗಳಲ್ಲಿ ಜಾನಪದ ಸಂಗೀತ ಗೀತೆಗಳು, ಲಾವಣಿ ಪದಗಳು, ಸೋಬಾನ ಪದಗಳು ಮಾಯವಾಗುತ್ತವೆ. ಈ ನಿಟ್ಟಿನಲ್ಲಿ ನಮ್ಮ ಸಂಸ್ಕೃತಿ ಪರಂಪರೆ ಉಳಿಸುವಲ್ಲಿ ಪ್ರತಿಯೊಬ್ಬರೂ ಕಾರ್ಯ ನಿರ್ವಹಿಸಬೇಕು ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ತಾಲೂಕು ಅಧ್ಯಕ್ಷ ಕೆ.ಎಲ್. ಕೋರಧಾನ್ಯಮಠ, ಬಸವರಾಜಪ್ಪ ಪಟ್ಟಣಶೆಟ್ಟಿ, ಬಿ.ಎಸ್. ಸಣ್ಣಗೌಡರ, ಶಂಭುಲಿಂಗಯ್ಯ ಷಡಕ್ಷರಿಮಠ, ಫಕೀರೇಶ ಬಸ್ಮಾಂಗಿಮಠ ಅವರಿಗೆ ಶ್ರೀಗುರು ರಕ್ಷೆ ನೀಡಲಾಯಿತು.

ಬಸವರಾಜಪ್ಪ ಕುರುವತ್ತಿ, ಬಿದ್ದಾಡೆಪ್ಪ ಚಕ್ರಸಾಲಿ, ಎಸ್.ಜಿ. ಹಿರೇಮಠ, ನಿರ್ಮಲಾ, ಆರಾಧ್ಯಮಠ, ಮಲ್ಲೇಶ ಎಮ್ಮಿ, ಕವಿತಾ ಕೊಟ್ರೇಶ್, ಗಾಯತ್ರಮ್ಮ ಕುರುವತ್ತಿ, ಭಾಗ್ಯಶ್ರೀ ಗುಂಡಗಟ್ಟಿ, ಸುಮಂಗಲಾ ಪಾಟೀಲ, ಶಕುಂತಲಾ ಹಿರೇಮಠ, ವಿ.ವಿ. ಹರಪನಹಳ್ಳಿ, ನಿಂಗನಗೌಡ ಪಾಟೀಲ, ಉಮೇಶಣ್ಣ ಗುಂಡಗಟ್ಟಿ, ಸೋಮನಾಥ ಹಿರೇಮಠ, ಮೃತ್ಯುಂಜಯ ಪಾಟೀಲ, ರಾಜೇಂದ್ರಕುಮಾರ ತಿಳವಳ್ಳಿ, ಜಯಣ್ಣ ಚನ್ನಗೌಡರು, ಚಂದ್ರಶೇಖರ ಕುರುವತ್ತಿ, ಬಸವರಾಜ ಕುರುವತ್ತಿ, ಎಂ.ಕೆ. ಹಾಲಸಿದ್ದಯ್ಯ ಶಾಸ್ತ್ರಿಗಳು, ಕಸ್ತೂರಮ್ಮ ಪಾಟೀಲ ಹಾಗೂ ದಾನೇಶ್ವರಿ ಜಾಗ್ರತ ಅಕ್ಕನ ಬಳಗದ ಸದಸ್ಯರು ಉಪಸ್ಥಿತರಿದ್ದರು.