ನ್ಯಾಯಾಲಯದ ಕಲಾಪದಲ್ಲಿ ಕಿರಿಯ ವಕೀಲರು ಸಕ್ರಿಯವಾಗಿ ಭಾಗವಹಿಸುವುದರಿಂದ ಹಲವು ಕಾನೂನುಗಳ ವೃತ್ತಿಪರ ಮತ್ತು ನೈತಿಕ ಲಾಭಗಳು ದೊರೆಯುತ್ತವೆ. ನ್ಯಾಯಾಂಗ ವ್ಯವಸ್ಥೆಯ ಗುಣಮಟ್ಟ ಹೆಚ್ಚಿಸುವಂತೆ ಪ್ರಭಾವ ಬೆಳೆಸುತ್ತದೆ ಎಂದು ಹಿರಿಯ ವಕೀಲ ಜಿ.ಐ. ಸಜ್ಜನಗೌಡ್ರ ಹೇಳಿದರು.
ಶಿಗ್ಗಾಂವಿ: ನ್ಯಾಯಾಲಯದ ಕಲಾಪದಲ್ಲಿ ಕಿರಿಯ ವಕೀಲರು ಸಕ್ರಿಯವಾಗಿ ಭಾಗವಹಿಸುವುದರಿಂದ ಹಲವು ಕಾನೂನುಗಳ ವೃತ್ತಿಪರ ಮತ್ತು ನೈತಿಕ ಲಾಭಗಳು ದೊರೆಯುತ್ತವೆ. ನ್ಯಾಯಾಂಗ ವ್ಯವಸ್ಥೆಯ ಗುಣಮಟ್ಟ ಹೆಚ್ಚಿಸುವಂತೆ ಪ್ರಭಾವ ಬೆಳೆಸುತ್ತದೆ ಎಂದು ಹಿರಿಯ ವಕೀಲ ಜಿ.ಐ. ಸಜ್ಜನಗೌಡ್ರ ಹೇಳಿದರು.
ಪಟ್ಟಣದಲ್ಲಿ ನ್ಯಾಯವಾದಿಗಳ ಸಂಘದ ವತಿಯಿಂದ ಆಯೋಜಿಸಲಾಗಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ನಂಬಿಕೆ ಹೆಚ್ಚಿಸಲು ಕಾನೂನು ಪರಿಣತರಾಗುವುದು ಅವಶ್ಯ. ತಮ್ಮ ಗ್ರಾಹಕರ ಪ್ರಕರಣಗಳು ವಿಚಾರಣೆಗೆ ಬಂದಾಗ ಅನಗತ್ಯ ಗೈರಾಗದೆ ವೃತ್ತಿಯ ಪ್ರವೃತ್ತಿ ಎತ್ತಿ ಹಿಡಿಯುವುದರಿಂದ ಸಾರ್ವಜನಿಕರ ಸಮಯ ಮತ್ತು ಹಣ ಉಳಿಯುತ್ತದೆ ಎಂದು ಹೇಳಿದರು.ಹಿರಿಯ ವಕೀಲ ಎಫ್.ಎಸ್. ಕೋಣನವರ ಮಾತನಾಡಿ, ನ್ಯಾಯವಾದಿಗಳ ವೃತ್ತಿಯಲ್ಲಿನ ನೈತಿಕ ನಡವಳಿಕೆಯ ಮಾರ್ಗಸೂಚಿಗಳು ಗ್ರಾಹಕರ ವಿಶ್ವಾಸ ಮತ್ತು ನ್ಯಾಯ ವ್ಯವಸ್ಥೆಯ ಸಮಗ್ರತೆಯನ್ನು ರಕ್ಷಿಸುತ್ತದೆ. ನ್ಯಾಯವಾದಿಗಳು ನ್ಯಾಯಾಲಯದ ಗೌರವ, ಗ್ರಾಹಕರ ರಹಸ್ಯಗಳ ರಕ್ಷಣೆ, ಸತ್ಯ ಮತ್ತು ನ್ಯಾಯಪೂರ್ವಕ ನಡವಳಿಕೆಯನ್ನು ಪಾಲಿಸಬೇಕು ಮತ್ತು ವಕೀಲರು ಸಾಮಾಜಿಕ ಜವಾಬ್ದಾರಿ ಹೊತ್ತು ನ್ಯಾಯ ರಕ್ಷಕರಾಗಿರಬೇಕು ಎಂದು ಹೇಳಿದರು.
ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಕೆ. ತಾಳಿಕೋಟೆ ಕಾರ್ಯಕ್ರಮ ಉದ್ಘಾಟಿಸಿದರು. ನ್ಯಾಯವಾದಿಗಳ ಸಂಘದಲ್ಲಿ ೨೫ ವರ್ಷ ವಕೀಲ ವೃತ್ತಿ ಪೂರೈಸಿದ ಎಸ್.ಬಿ. ಲಕ್ಕಣ್ಣವರ್, ಜಿ.ಎನ್. ಎಲಿಗಾರ್, ಸಿ.ಎಫ್. ಅಂಗಡಿ ಅವರನ್ನು ಸನ್ಮಾನಿಸಲಾಯಿತು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಬಿ. ಲಕ್ಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ದಿವಾಣಿ ನ್ಯಾಯಾಧೀಶ ಸುನೀಲ್ ತಳವಾರ್, ಸಿವಿಲ್ ನ್ಯಾಯಾಧೀಶೆ ಅಶ್ವಿನಿ ಚಂದ್ರಕಾಂತ, ಸಹಾಯಕ ಸರ್ಕಾರಿ ಅಭಿಯೋಜಕ ನಿಂಗಪ್ಪ ಮಲ್ನಾಡ, ಮೀರಾಬಾಯಿ, ಕಾರ್ಯದರ್ಶಿ ವಿವೇಕ್ ರಾಮಗೇರಿ, ವಕೀಲರಾದ ಎಂ.ಎಚ್. ಬೆಂಡಿಗೇರಿ, ಎಸ್.ಎಂ. ಕಮ್ಮಾರ, ಎನ್.ಎನ್. ಪಾಟೀಲ, ಎಸ್.ಕೆ. ಅಕ್ಕಿ, ಪಿ.ಐ. ಬಡಿಗೇರ, ಸಲೀಂ ಫರೋಖಿ, ಎಂ.ಎಂ. ಕಾರಡಗಿ, ಬಿ.ಜಿ. ಕೂಲಿ, ಜಿ.ಎ. ಹಿರೇಮಠ, ಬಿ.ಎಂ. ಸುಂಕದ, ರಾಮಚಂದ್ರ ಸಂಶಿ, ವಸಂತಾ ಬಾಗೂರ, ಮಹೇಶ ವಿಜಾಪುರ ಇತರರಿದ್ದರು.