ಚಿಕ್ಕಮಗಳೂರುಮಾತೃಭಾಷೆ ಕನ್ನಡ ಜೀವನದ ಅವಿಭಾಜ್ಯ ಅಂಗವಾಗಬೇಕು. ಪ್ರತಿನಿತ್ಯ ಕನ್ನಡವನ್ನು ಗೌರವಿಸುವ ಹಾಗೂ ಆರಾಧಿಸುವ ಸದ್ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಡಿವೈಎಸ್ಪಿ ನಾಗರಾಜ್ ಹೇಳಿದರು.
ಕನ್ನಡ ನಿತ್ಯೋತ್ಸವ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಮಾತೃಭಾಷೆ ಕನ್ನಡ ಜೀವನದ ಅವಿಭಾಜ್ಯ ಅಂಗವಾಗಬೇಕು. ಪ್ರತಿನಿತ್ಯ ಕನ್ನಡವನ್ನು ಗೌರವಿಸುವ ಹಾಗೂ ಆರಾಧಿಸುವ ಸದ್ಗುಣವನ್ನು ಮೈಗೂಡಿಸಿಕೊಳ್ಳಬೇಕು ಎಂದು ಡಿವೈಎಸ್ಪಿ ನಾಗರಾಜ್ ಹೇಳಿದರು.
ನಗರದ ಹುಲಿಕೆರೆ ದೇವೇಗೌಡರ ವೃತ್ತದ ಸಮೀಪ ಕನ್ನಡ ಸೇನೆಯಿಂದ ಆಯೋಜಿಸಿದ್ದ ಬುಧವಾರ ಕನ್ನಡ ನಿತ್ಯೋತ್ಸವ ಹಾಗೂ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಕನ್ನಡ ಭಾಷೆ ನಿತ್ಯೋತ್ಸವ ಆಗಬೇಕು. ಎಷ್ಟೇ ಪರಭಾಷೆ ಹಾವಳಿ ಹೆಚ್ಚಾದರೂ ಕನ್ನಡತನವನ್ನು ಮರೆಯಬಾರದು ಎಂದು ತಿಳಿಸಿದರು.
ಕನ್ನಡದ ಕಂಪನ್ನು ಪ್ರತಿಯೊಬ್ಬ ಕನ್ನಡಿಗನು ಅನುಭವಿಸುವ ಮೂಲಕ ಭಾಷೆಗೆ ಕೃತಜ್ಞನಾಗಿರಬೇಕು. ಪ್ರತಿ ಕನ್ನಡಿಗನ ಹೃದಯದಲ್ಲಿ ಭಾಷಾಭಿಮಾನ, ಗೌರವ ಹಾಗೂ ಸ್ವಾಭಿಮಾನದ ಛಲ ಮೂಡಿದಾಗ ಕನ್ನಡ ತಾನಾಗಿಯೇ ಮನ್ನಣೆ ಪಡೆದುಕೊಳ್ಳಲಿದೆ ಎಂದು ಹೇಳಿದರು.ಪಾಲಕರಿಗೆ ಎಷ್ಟರ ಮಟ್ಟಿಗೆ ಗೌರವಿಸುತ್ತೇವೆಯೋ, ಹಾಗೆಯೇ ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಯನ್ನು ತಾಯಿಯಂತೆ ಗೌರವಿಸುವುದು ಕನ್ನಡಿಗನ ಜವಾಬ್ದಾರಿ ಎಂದು ತಿಳಿಸಿದರು.
ಕನ್ನಡ ಸೇನೆ ಜಿಲ್ಲಾಧ್ಯಕ್ಷ ಪಿ.ಸಿ. ರಾಜೇಗೌಡ ಮಾತನಾಡಿ ಇಂದು ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಚಂದ್ರಶೇಖರ್ ಅಜಾದ್ ವೃತದಲ್ಲಿ ಹಮ್ಮಿಕೊಂಡಿದ್ದು ಈ ಅಂಗವಾಗಿ ಬೆಳಿಗ್ಗೆ ಸಂಘದ ಕಚೇರಿ ಸಮೀಪ ಕನ್ನಡ ಧ್ವಜಾರೋಹಣ ನೆರವೇರಿಸಿ ಅನಧಿಕೃತವಾಗಿ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.ವಿವಿಧ ಕಲಾತಂಡಗಳೊಂದಿಗೆ ಕನ್ನಡ ಸೇನೆ ಕಚೇರಿಯಿಂದ ಎಂಜಿ ರಸ್ತೆ ಮುಖಾಂತರ ಚಂದ್ರಶೇಖರ್ ಅಜಾದ್ ವೃತ್ತದಲ್ಲಿ ಸಮಾವೇಶಗೊಂಡು ವೇದಿಕೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕನ್ನಡ ಸೇನೆ ವಕ್ತಾರ ಹುಣಸೆ ಮಕ್ಕಿ ಲಕ್ಷ್ಮಣ್, ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಚೈತ್ರ ಗೌಡ, ನಗರಾಧ್ಯಕ್ಷ ಸತೀಶ್, ಮುಖಂಡರಾದ ಕಳವಾಸೆ ರವಿ, ಅನ್ವರ್, ಶಂಕರಗೌಡ, ಪಾಲಾಕ್ಷಿ, ಹರೀಶ್ ಉಪಸ್ಥಿತರಿದ್ದರು.