ಕನ್ನಡ ನಾಡು, ನುಡಿ ರಕ್ಷಣೆ ಮೊದಲ ಗುರಿಯಾಗಲಿ

| Published : Feb 15 2024, 01:37 AM IST

ಸಾರಾಂಶ

ಸುವರ್ಣ ಕರ್ನಾಟಕ ರಥಕ್ಕೆ ಅದ್ಧೂರಿ ಸ್ವಾಗತ ಮಾಡಲಾಗಿದ್ದು, ತಹಸೀಲ್ದಾರ್‌ ಸತೀಶ ಕೂಲಡಗಿ ಸೇರಿದಂತೆ ಇತರರಿದ್ದರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ಕರ್ನಾಟಕದಲ್ಲಿ ಹುಟ್ಟಿದ ಮತ್ತು ವಾಸಿಸುವ ಪ್ರತಿಯೊಬ್ಬರು ಕನ್ನಡ ಭಾಷೆಯನ್ನು ಗೌರವಿಸಲೇಬೇಕು ಹಾಗು ಕನ್ನಡ ನಾಡಿ ನುಡಿ, ಜಲ ಹಾಗೂ ಭಾಷೆಯ ರಕ್ಷಣೆಗೆ ಸದಾ ಮುಂದಾಗಬೇಕು ಎಂದು ತಹಸೀಲ್ದಾರ್‌ ಸತೀಶ ಕೂಲಡಗಿ ತಿಳಿಸಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ ಸುವರ್ಣ ಕರ್ನಾಟಕ ರಥ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂಥ ಸಂಪದ್ಭರಿತ ನಾಡಿನಲ್ಲಿ ಹುಟ್ಟಿದ ನಾವು ಅತ್ಯಂತ ಪುಣ್ಯವಂತರು. ಪ್ರತಿಯೊಬ್ಬ ಕನ್ನಡಿಗರು ಕನ್ನಡ ಭಾಷೆಯ ರಕ್ಷಣೆಗೆ ಮುಂದಾಗಬೇಕು ಎಂದರು.

ಸಮಾರಂಭ ಉದ್ದೇಶಿಸಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ.ವಿ.ಕೆ. ವಂಶಾಕೃತಮಠ ಮಾತನಾಡಿ, ಕನ್ನಡ ಭಾಷೆ ಇತಿಹಾಸ ತಿಳಿಸಿ ಮಾತನಾಡಲು, ಬರೆಯಲು ಹಾಗೂ ಒದಲು ಅತ್ಯಂತ ಸರಳವಾದ ಭಾಷೆ ಎಂದರೆ ಅದುವೆ ಕನ್ನಡ ಎಂದು ತಿಳಿಸಿದರು.

ತಾಪಂ ಅಧಿಕಾರಿ ಮುರಳೀಧರ ದೇಶಪಾಂಡೆ, ಇಳಕಲ್ಲ ನಗರಸಭೆ ಪೌರಾಯುಕ್ತ ಶ್ರೀನಿವಾಸ ಜಾಧವ, ಉಪ ತಹಸೀಲ್ದಾರ್‌ ಈಶ್ವರ ಗಡ್ಡಿ, ಇಳಕಲ್ಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹಾದೇವ ಕಂಬಾಗಿ, ಕನ್ನಡ ರಕ್ಷಣಾ ವೇದಿಕೆ ಅದ್ಯಕ್ಷ ಮಹಾಂತೇಶ ವಂಕಲಕುಂಟಿ, ಕನ್ನಡ ಸಾಹಿತ್ಯ ಪರಿಷತ್‌ ನಿಕಟಪೂರ್ವ ಅದ್ಯಕ್ಷ ಸಂಗಣ್ಣ ಗದ್ದಿ, ಇಳಕಲ್ಲ ತಾಲೂಕು ಜನಾಪದ ಅಧ್ಯಕ್ಷ ಮುತ್ತು ಬೀಳಗಿ ಹಾಗೂ ರಂಗಕರ್ಮಿ ಮಹಾಂತೇಶ ಗಜೇಂದ್ರಗಡ ಹಾಗೂ ಇತರರು ಉಪಸ್ಥಿತರಿದ್ದರು.