ಅನ್ನ ಕೊಡುವ ಭಾಷೆ ಕನ್ನಡ ಹೃದಯದ ಭಾಷೆಯಾಗಲಿ: ಕೃಷ್ಣೇಗೌಡ

| Published : Nov 02 2024, 01:19 AM IST / Updated: Nov 02 2024, 01:20 AM IST

ಸಾರಾಂಶ

ನವೆಂಬರ್‌ ಕನ್ನಡಿಗರಾಗದೆ ಮನೆಯ ಜೊತೆ ಹೊರಪ್ರಪಂಚದಲ್ಲಿ ವ್ಯಾವಹಾರಿಕ ಭಾಷೆಯಾಗಬೇಕಿದೆ. ಸಂಸ್ಕೃತಿ, ಸಂಸ್ಕಾರವನ್ನು ಬೀರುವ ಸ್ವಾಭಿಮಾನಿಗಳ ಭಾಷೆ ನಮ್ಮದು. ಪ್ರಪಂಚದಲ್ಲಿ 7 ಸಾವಿರ ಭಾಷೆಯಲ್ಲಿ ಈಗ 4 ಸಾವಿರ ಭಾಷೆಗಳು ಹಾಡು ಭಾಷೆಯಾಗಿ ಉಳಿದಿವೆ. ವಿಶ್ವದ 30 ಭಾಷೆಯಲ್ಲಿ ಕನ್ನಡವೂ ಒಂದಾಗಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಕರುನಾಡಿನಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುವ ಮುನ್ನ ಎಚ್ಚೆತ್ತು ಕನ್ನಡ ಭಾಷೆ ಉಳಿಸಿ ಹೃದಯದ ಭಾಷೆಯಾಗಲು ಜಾಗೃತಿ ಮೂಡಿಸಬೇಕು ಎಂದು ಕೆಪಿಎಸ್ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ತಿಳಿಸಿದರು.

ಪಟ್ಟಣದ ಕೆಪಿಎಸ್ ಶಾಲಾ ವರಣದಲ್ಲಿ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಭಾಷೆ ಕೇವಲ ಸಮೂಹ ಸಂಪರ್ಕ ಭಾಷೆಯಲ್ಲ. ಎಲ್ಲರನ್ನು ಸೌಹಾರ್ದತೆಯಿಂದ ಬೆಸೆಯುವ ಸಾಧನವಾಗಿದೆ ಎಂದರು.

ನವೆಂಬರ್‌ ಕನ್ನಡಿಗರಾಗದೆ ಮನೆಯ ಜೊತೆ ಹೊರಪ್ರಪಂಚದಲ್ಲಿ ವ್ಯಾವಹಾರಿಕ ಭಾಷೆಯಾಗಬೇಕಿದೆ. ಸಂಸ್ಕೃತಿ, ಸಂಸ್ಕಾರವನ್ನು ಬೀರುವ ಸ್ವಾಭಿಮಾನಿಗಳ ಭಾಷೆ ನಮ್ಮದು. ಪ್ರಪಂಚದಲ್ಲಿ 7 ಸಾವಿರ ಭಾಷೆಯಲ್ಲಿ ಈಗ 4 ಸಾವಿರ ಭಾಷೆಗಳು ಹಾಡು ಭಾಷೆಯಾಗಿ ಉಳಿದಿವೆ. ವಿಶ್ವದ 30 ಭಾಷೆಯಲ್ಲಿ ಕನ್ನಡವೂ ಒಂದಾಗಿದೆ ಎಂದರು.

ಪ್ರಾಂಶುಪಾಲ ದೊರೆಸ್ವಾಮಿ, ಉಪಪ್ರಾಂಶುಪಾಲ ಪಿ.ಚಲುವನಾರಾಯಣಸ್ವಾಮಿ ಮಾತನಾಡಿದರು. ಗಣ್ಯರು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಕನ್ನಡ ಪ್ರೇಮ ಮೆರೆದರು. ರಾಷ್ಟ್ರಧ್ವಜ ಹಾಗೂ ಕನ್ನಡ ಬಾವುಟ ಧ್ವಜಾರೋಹಣ ನೆರವೇರಿಸಿದರು.

ಈ ವೇಳೆ ಶಿಕ್ಷಕರಾದ ದಿನೇಶ್‌ಬಾಬು, ಮುಖ್ಯಶಿಕ್ಷಕರಾದ ಮಮತಾ, ಭಾರತಿ, ಬೋಧಕ ವೃಂದದವರಾದ ಕುಮಾರಸ್ವಾಮಿ, ನಾಗೇಂದ್ರ, ಎಸ್.ಎಂ.ಬಸವರಾಜು, ಬಿ.ಎನ್. ಪರಶಿವಮೂರ್ತಿ, ರಾಗಿಣಿ, ಸುರೇಶ್, ರಮ್ಯ, ನಂದಿನಿ, ಎನ್‌ಸಿಸಿ ಕೆಡೆಟ್‌ಗಳು ಮತ್ತಿತರರಿದ್ದರು.