ಕನ್ನಡಿಗರು ಸ್ವಾಭಿಮಾನದಿಂದ ಹೋರಾಟ ಮಾಡುವಂತಾಗಲಿ: ಡಾ. ಸಂತೋಷ ಮೋಟಗಿ

| Published : Dec 17 2024, 01:03 AM IST

ಕನ್ನಡಿಗರು ಸ್ವಾಭಿಮಾನದಿಂದ ಹೋರಾಟ ಮಾಡುವಂತಾಗಲಿ: ಡಾ. ಸಂತೋಷ ಮೋಟಗಿ
Share this Article
  • FB
  • TW
  • Linkdin
  • Email

ಸಾರಾಂಶ

ನಾಡ-ನುಡಿಯ ವಿಚಾರ ಬಂದಾಗ ಪ್ರತಿಯೊಬ್ಬ ಕನ್ನಡಿಗರು ಸ್ವಾಭಿಮಾನದಿಂದ ಹೋರಾಟ ಮಾಡಬೇಕು ಎಂದು ವೈದ್ಯ ಡಾ. ಸಂತೋಷ ಮೋಟಗಿ ಹೇಳಿದರು.

ರಾಣಿಬೆನ್ನೂರು: ನಾಡ-ನುಡಿಯ ವಿಚಾರ ಬಂದಾಗ ಪ್ರತಿಯೊಬ್ಬ ಕನ್ನಡಿಗರು ಸ್ವಾಭಿಮಾನದಿಂದ ಹೋರಾಟ ಮಾಡಬೇಕು ಎಂದು ವೈದ್ಯ ಡಾ. ಸಂತೋಷ ಮೋಟಗಿ ಹೇಳಿದರು.

ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ವೀರ ವನಿತೆ ಒನಕೆ ಓಬವ್ವ ಜಯಂತ್ಯುತ್ಸವದಲ್ಲಿ ಮಾತನಾಡಿದರು.ನೆರೆಯ ರಾಜ್ಯಗಳ ಗಡಿಯಲ್ಲಿರುವ ಕನ್ನಡಿಗರು ಆತಂಕದಲ್ಲಿದ್ದು, ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದರು.

ಸಂಘಟನೆಯ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಹಾವೇರಿ ಜಿಲ್ಲಾಧ್ಯಕ್ಷ ರಾಮು ತಳವಾರ ಮಾತನಾಡಿ, ಸದ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಮಹತ್ತರವಾದ ಕಾರ್ಯಗಳು ಬೆಳಗಾವಿಯ ಸುವರ್ಣಸೌಧಕ್ಕೆ ಸ್ಥಳಾಂತಗೊಳ್ಳುವ ಅಗತ್ಯವಿದೆ. ಸದ್ಯ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಅಗತ್ಯವಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳು ಅನಗತ್ಯ ಕಾಲಹರಣ ಮಾಡುತ್ತಿರುವುದು ಖಂಡನೀಯ ಎಂದರು.

ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಎಂ.ಕೆ. ತಿಮ್ಮಾಪುರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷರನ್ನಾಗಿ ನಾಗರಾಜ ಯರಬಾಳ, ಉಪಾಧ್ಯಕ್ಷರನ್ನಾಗಿ ಸುರೇಶ ಅಡ್ಡಂಗಡಿ, ರೈತ ಘಟಕದ ಅಧ್ಯಕ್ಷರಾಗಿ ರಾಮನಗೌಡ ಸಿದ್ದಪ್ಪಳವರ, ಮಹಿಳಾ ಘಟಕದ ಅಧ್ಯಕ್ಷರಾಗಿ ಸುನಂದಾ ಪುಲಿಕಟ್ಟಿ, ಉಪಾಧ್ಯಕ್ಷರಾಗಿ ಲಲಿತ ಬ್ಯಾಡಗಿ, ಕಾರ್ಮಿಕ ಘಟಕದ ಅಧ್ಯಕ್ಷರಾಗಿ ನಿಂಗಪ್ಪ ವಾಸನದ ಉರ್ಫ ಮಾಸ್ತಿ ಅವರನ್ನು ನೇಮಕ ಮಾಡಲಾಯಿತು.

ಸುಮಾ ಪುರದ, ಗೌರಮ್ಮ ಕುಲಕರ್ಣಿ, ಶಿವಪ್ಪ ಬಳಲ್ಕೊಪ್ಪ, ಮಂಜುನಾಥ ದಾನಪ್ಪನವರ, ವೀರೇಶ ಹಡಪದ, ಜಯದೇವ ಹುಲಿಗಿನಮಳೆಮಠ, ನಾಗಮ್ಮ ಹೊಳೆಬಸಪ್ಪಗೌಡ್ರ ಮತ್ತಿತರರು ಉಪಸ್ಥಿತರಿದ್ದರು.