ಮೂರು ಭಾರಿ ಶಾಸಕರಾಗಿರುವ ಪಿ.ಎಂ.ನರೇಂದ್ರಸ್ವಾಮಿ ಅವರು ಒಮ್ಮೆ ಸಚಿವರಾಗಿ, ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಅನುಭವ ಹಾಗೂ ಕ್ರಿಯಾಶೀಲತೆ ಹೊಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃತ್ವದ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗಬೇಕೆಂಬುವುದು ಮಳವಳ್ಳಿ ಜನತೆಯ ಆಶಯವಾಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಶಿಕ್ಷಣ, ಆರೋಗ್ಯ, ನೀರಾವರಿ ಕ್ಷೇತ್ರದಲ್ಲಿ ಮಾದರಿಯಾಗಿ ಅಭಿವೃದ್ಧಿ ಪಡಿಸಿರುವ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ಮಂತ್ರಿ ಸ್ಥಾನ ಸಿಗುವ ಮೂಲಕ ರಾಜ್ಯ ಮಟ್ಟದಲ್ಲಿಯೂ ಮತ್ತಷ್ಟು ಸೇವೆ ಮಾಡುವ ಅವಕಾಶ ಸಿಗುವಂತಾಗಲಿ ಎಂದು ಜಿಲ್ಲಾ ಪಂಂಚಾಯ್ತಿ ಮಾಜಿ ಸದಸ್ಯೆ ಸುಷ್ಮಾರಾಜು ತಿಳಿಸಿದರು.ಪಟ್ಟಣದ ಹೊರವಲಯದ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಹುಟ್ಟುಹಬ್ಬದ ಅಂಗವಾಗಿ ಯುವ ಮುಖಂಡ ಯುವರಾಜ್ ನರೇಂದ್ರಸ್ವಾಮಿ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿದ ವೇಳೆ ಮಾತನಾಡಿದ ಅವರು, ಶಾಸಕರು ಕ್ಷೇತ್ರದ ಅಭಿವೃದ್ಧಿಗಾಗಿ ದೂರದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದು ಅವರ ಕಾರ್ಯ ದಕ್ಷತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಶ್ಲಾಘಿಸಿದರು.
ಮೂರು ಭಾರಿ ಶಾಸಕರಾಗಿರುವ ಪಿ.ಎಂ.ನರೇಂದ್ರಸ್ವಾಮಿ ಅವರು ಒಮ್ಮೆ ಸಚಿವರಾಗಿ, ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಅನುಭವ ಹಾಗೂ ಕ್ರಿಯಾಶೀಲತೆ ಹೊಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃತ್ವದ ಸರ್ಕಾರದಲ್ಲಿ ಮಂತ್ರಿ ಸ್ಥಾನ ಸಿಗಬೇಕೆಂಬುವುದು ಮಳವಳ್ಳಿ ಜನತೆಯ ಆಶಯವಾಗಿದೆ ಎಂದರು.ತಾಪಂ ಉಪಾಧ್ಯಕ್ಷ ಸಿ.ಮಾರ್ಕಾಲು ಮಾಧು ಮಾತನಾಡಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿ ಇಟ್ಟಿದ್ದಾರೆ. ಎಲ್ಲಾ ಹೋಬಳಿಗಳ ನೀರಿನ ಸಮಸ್ಯೆ ಬಗೆಹರಿಸಿದ್ದಾರೆ. ಸರ್ಕಾರಿ ಶಾಲೆಗಳಿಗೆ ಮಲ್ಟಿಮೀಡಿಯಾ ಸ್ಥಾಪಿಸಿ ಖಾಸಗಿ ಶಾಲೆಗಳಿಗೆ ಪೈಪೊಟಿ ನೀಡುವ ನಿಟ್ಟಿನಿಲ್ಲಿ ವಿಶೇಷ ಕಲಿಕಾ ಸಾಮಗ್ರಿಗಳನ್ನು ಕಲ್ಪಿಸಿದ್ದಾರೆ ಎಂದರು.
ತಾಲೂಕು ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ರಕ್ಷ ಪರೀಕ್ಷೆ, ಸ್ಕ್ಯಾಂನಿಂಗ್, ಆಧುನಿಕ ಎಕ್ಸರೇ, ಸುಸರ್ಜಿತ ಅಪರೇಷನ್ ಸೆಂಟರ್ ಸೇರಿದಂತೆ ಹಲವು ಸೌಲಭ್ಯ ನೀಡಿದ್ದಾರೆ. ಮತದಾರರ ಋಣವನ್ನು ಪ್ರಾಮಾಣಿಕವಾಗಿ ತೀರಿಸುತ್ತಿರುವ ನರೇಂದ್ರಸ್ವಾಮಿ ಅವರಿಗೆ ದೇವರ ಆಯಸ್ಸು, ಆರೋಗ್ಯ ಲಭಿಸಿ ಮುಂದಿನ ಅತ್ಯುನ್ನತ ಅಧಿಕಾರ ಸಿಗಲಿ ಎಂದು ಆಶಿಸಿದರು.ನಂತರ ಶಾಸಕ ಹುಟ್ಟುಹಬ್ಬದ ಅಂಗವಾಗಿ ತಾಲೂಕು ಆಸ್ಪತ್ರೆ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು. ಪಟ್ಟಣದ ಅನಂತ್‌ರಾಂ ವೃತ್ತದಲ್ಲಿ ಕಾಂಗ್ರೆಸ್ ಮುಖಂಡರಿಂದ ಮಜ್ಜಿಗೆ ಪಾನಕ ವಿತರಿಸಲಾಯಿತು.
ಇದೇ ವೇಳೆ ಯುವ ಮುಖಂಡ ಯುವರಾಜ್ ನರೇಂದ್ರಸ್ವಾಮಿ, ಸಿ.ಪಿ.ರಾಜು, ದೊಡ್ಡಯ್ಯ, ಅರ್.ಎನ್.ವಿಶ್ವಾಸ್, ಕೃಷ್ಣೇಗೌಡ, ಲಿಂಗರಾಜು, ದೇವರಾಜು, ಅಂಬರೀಷ್, ಬಂಕ್ ಮಹದೇವು, ಲೀಂಗರಾಜು, ಶಾಂತರಾಜ್, ಚೇತನ್ ನಾಯಕ್, ಶಿಲ್ಪ ಮಹೇಶ್, ಸವಿತಾ, ಕುಮಾರಿ, ವಿಶ್ವ(ದಿಲೀಪ್), ಶ್ರೀಕಾಂತ್, ಬಸವರಾಜು, ಶಂಭು, ಮಹೇಶ್, ನಂಜುಂಡಸ್ವಾಮಿ, ರವಿ, ಸೇರಿದಂತೆ ಇತರರು ಇದ್ದರು.ನರೇಂದ್ರಸ್ವಾಮಿ ಅವರಿಗೆ ಮಂತ್ರಿಯಾಗುವ ಅವಕಾಶ ಸಿಗಲಿ: ಶುಭದಾಯಿನಿ
ಮಂಡ್ಯ:ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ರಾಜಕೀಯದಲ್ಲಿ ಉನ್ನತ ಸ್ಥಾನದೊಂದಿಗೆ ಮಂತ್ರಿಯಾಗುವ ಅವಕಾಶ ಸಿಗಲಿ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಚ್.ಬಿ.ಶುಭದಾಯಿನಿ ಅಭಿಪ್ರಾಯಿಸಿದರು.ನಗರದ ಸ್ವರ್ಣಸಂದ್ರದ ಪ್ರೇರಣ ವಿಶೇಷ ಚೇತನರ ಟ್ರಸ್ಟ್‌ನಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಅಂಧ ಮಕ್ಕಳಿಗೆ ಬೆಳಗಿನ ಉಪಾಹಾರ ಏರ್ಪಡಿಸಿ ಹಾಗೂ ಕೇಕ್ ಕತ್ತರಿಸುವ ಮೂಲಕ ಶಾಸಕ ನರೇಂದ್ರಸ್ವಾಮಿ ಹುಟ್ಟುಹಬ್ಬ ಆಚರಿಸಿ ಮಾತನಾಡಿದರು.ನರೇಂದ್ರಸ್ವಾಮಿ ಅವರು ಮತ್ತೊಮ್ಮೆ ಮಂತ್ರಿಯಾಗುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿ. ದೇವರು ಅವರ ಕುಟುಂಬಕ್ಕೆ ಆಶೀರ್ವದಿಸುವ ಮೂಲಕ ಹೆಚ್ಚಿನ ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.
ಈ ವೇಳೆ ಜಿಲ್ಲಾ ಮಹಿಳಾ ಮುಖಂಡರಾದ ಜ್ಯೋತಿ, ಶಕುಂತಲಾ, ನಾಗಮಣಿ, ರಾಧಾ, ಗುಣ, ಅನುರಾಧ, ವೀಣಾ, ಜಯಲಕ್ಷ್ಮಿ, ಶಶಿಕಲಾ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ನಿರ್ದೇಶಕ ಎಚ್.ಎಂ.ಉದಯ್ ಕುಮಾರ್, ಸೋಮಶೇಖರ್ ಇತರರು ಹಾಜರಿದ್ದರು.