ಮೋದಿ ಶೀಘ್ರ ನಿವೃತ್ತಿಯಾಗಲಿ: ಡಾ. ಸುಬ್ರಹ್ಮಣ್ಯನ್‌ ಸ್ವಾಮಿ

| Published : Sep 15 2024, 01:51 AM IST

ಮೋದಿ ಶೀಘ್ರ ನಿವೃತ್ತಿಯಾಗಲಿ: ಡಾ. ಸುಬ್ರಹ್ಮಣ್ಯನ್‌ ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯಲ್ಲಿ ಪ್ರಧಾನಿ ಹುದ್ದೆಯನ್ನು ಯಾರು ಬೇಕಾದರೂ ಅಲಂಕರಿಸಬಹುದು. ಆದರೆ ಪ್ರಧಾನಿ ಹುದ್ದೆಗೆ ಹೆಸರು ಸೂಚಿಸಿದರೆ ತಾ ಮುಂದು ನಾ ಮುಂದು ಎಂದು ಹೆಸರು ಹಾಳು ಮಾಡುವ ಪ್ರಯತ್ನ ನಡೆಯಬಹುದು ಎಂದು ಬಿಜೆಪಿ ಮುಖಂಡ ಡಾ. ಸುಬ್ರಹ್ಮಣ್ಯನ್‌ ಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಪ್ರಧಾನಿ ನರೇಂದ್ರ ಮೋದಿ ಶೀಘ್ರ ನಿವೃತ್ತಿಯಾಗಬೇಕು. ದೀರ್ಘಾವಧಿ ಹುದ್ದೆಗಳು ಅವರಿಗೆ ನೀಡಬೇಕಾಗಿಲ್ಲ, ಎಲ್ಲರೂ ನಿವೃತ್ತಿಯಾಗಲೇಬೇಕು ಎಂದು ಬಿಜೆಪಿ ಮುಖಂಡ, ಕೇಂದ್ರ ಮಾಜಿ ಸಚಿವ ಡಾ. ಸುಬ್ರಹ್ಮಣ್ಯನ್‌ ಸ್ವಾಮಿ ಹೇಳಿದರು.

ಕಾರ್ಕಳದ ಪತ್ತೊಂಜಿಕಟ್ಟೆ ಶ್ರೀ ದತ್ತಾತ್ರೇಯ ಮೂಕಾಂಬಿಕಾ ದೇವಸ್ಥಾನಕ್ಕೆ ಶನಿವಾರ ಬೆಳಿಗ್ಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಬಿಜೆಪಿಯಲ್ಲಿ ಪ್ರಧಾನಿ ಹುದ್ದೆಯನ್ನು ಯಾರು ಬೇಕಾದರೂ ಅಲಂಕರಿಸಬಹುದು. ಆದರೆ ಪ್ರಧಾನಿ ಹುದ್ದೆಗೆ ಹೆಸರು ಸೂಚಿಸಿದರೆ ತಾ ಮುಂದು ನಾ ಮುಂದು ಎಂದು ಹೆಸರು ಹಾಳು ಮಾಡುವ ಪ್ರಯತ್ನ ನಡೆಯಬಹುದು ಎಂದರು.

ತಮಿಳುನಾಡಿನಲ್ಲಿನ ಕೆಲವು ದೇವಸ್ಥಾನಗಳನ್ನು ಸರ್ಕಾರದಿಂದ ಬಿಡಿಸಲಾಗಿದ್ದು, ಕರ್ನಾಟಕ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದಲ್ಲೂ ಸರ್ಕಾರದಿಂದ ದೇವಸ್ಥಾನಗಳನ್ನು ಮುಕ್ತಗೊಳಿಸಲಾಗುವುದು ಎಂದರು.

ರಾಮಸೇತು ಪಾರಂಪರಿಕ ಸ್ಮಾರಕವಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಬೇಕಾಗಿದೆ. ಪ್ರಧಾನಿ ಈ ವಿಚಾರದಲ್ಲಿ ಮಾತ್ರ ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದರು.-----ನಾಗಮಂಗಲ ಪ್ರಕರಣ: ಸುಪ್ರೀಂ ಕೋರ್ಟಲ್ಲಿ ಪ್ರಶ್ನಿಸಲು ಸಿದ್ಧಮಂಡ್ಯದ ನಾಗಮಂಗಲ ವಿಷಯ ಕುರಿತು ಮಾತನಾಡಿದ ಸುಬ್ರಹ್ಮಣ್ಯನ್‌ ಸ್ವಾಮಿ, ಮುಸ್ಲಿಮರು ಕಲ್ಲು ಎಸೆದಿದ್ದಾರೆ, ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದಾದರೆ, ಸೂಕ್ತ ದಾಖಲೆ ನೀಡಿದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಸಿದ್ಧ ಎಂದು ಹೇಳಿದರು.