ಮಠಗಳು ವೈಚಾರಿಕ ಚಿಂತನೆ ಯುವಕರಿಗೆ ತಲುಪಿಸಲಿ

| Published : Sep 10 2025, 01:04 AM IST

ಸಾರಾಂಶ

ಮಠಗಳು ನಿಂತ ನೀರಾಗಬಾರದು. ಪ್ರಸ್ತುತ ಸಮಾಜಕ್ಕೆ ಬೇಕಾಂದತಹ ಹೊಸ ಹೊಸ ವಿಚಾರಗಳನ್ನು, ವೈಚಾರಿಕ ಚಿಂತನೆಯನ್ನು ಯುವ ಜನಾಂಗಕ್ಕೆ ತಲುಪಿಸಬೇಕು. ಸದ್ಯ ಸಮಾಜ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಬಗೆಗೆ ಜಾಗೃತಿಯನ್ನು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮೃದ್ಧ ಭಾರತದ ನಿರ್ಮಾಣಕ್ಕೆ ಪಣ ತೊಡಬೇಕಾಗಿದೆ ಎಂದು ಹುಲಕೋಟಿಯ ಜಿಸಿಟಿಎಂ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅರ್ಜುನ ಗೊಳಸಂಗಿ ಹೇಳಿದರು.

ನರಗುಂದ: ಮಠಗಳು ನಿಂತ ನೀರಾಗಬಾರದು. ಪ್ರಸ್ತುತ ಸಮಾಜಕ್ಕೆ ಬೇಕಾಂದತಹ ಹೊಸ ಹೊಸ ವಿಚಾರಗಳನ್ನು, ವೈಚಾರಿಕ ಚಿಂತನೆಯನ್ನು ಯುವ ಜನಾಂಗಕ್ಕೆ ತಲುಪಿಸಬೇಕು. ಸದ್ಯ ಸಮಾಜ ಎದುರಿಸುತ್ತಿರುವ ಸಮಸ್ಯೆ ಮತ್ತು ಸವಾಲುಗಳ ಬಗೆಗೆ ಜಾಗೃತಿಯನ್ನು ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮೃದ್ಧ ಭಾರತದ ನಿರ್ಮಾಣಕ್ಕೆ ಪಣ ತೊಡಬೇಕಾಗಿದೆ ಎಂದು ಹುಲಕೋಟಿಯ ಜಿಸಿಟಿಎಂ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅರ್ಜುನ ಗೊಳಸಂಗಿ ಹೇಳಿದರು.

ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ದೊರೆಸ್ವಾಮಿ ಜನಕಲ್ಯಾಣ ಮತ್ತು ಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರಾವಣ ಮಾಸದಲ್ಲಿ ನಡೆದ ಕನ್ನಡ ಸಾಲು ದೀಪಗಳು ವಿಶೇಷ ಉಪನ್ಯಾಸದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಶ್ರೀಮಠ ಕೇವಲ ಆಧ್ಯಾತ್ಮಕ್ಕೆ ಸೀಮಿತವಾಗಿರದೆ ಪ್ರತಿವರ್ಷ ಶ್ರಾವಣ ಮಾಸದಲ್ಲಿ ಸದಾ ನವೀನ ವಿಚಾರಗಳೊಂದಿಗೆ ವೈಚಾರಿಕ ಚಿಂತನೆಯನ್ನು ಮೂಡಿಸುತ್ತಿರುವುದು ಶ್ಲಾಘನೀಯವಾದುದು. ಆ ಹಿನ್ನೆಲೆಯಲ್ಲಿ ಪ್ರಸ್ತಕ ವರ್ಷ ಸಾಹಿತ್ಯ ಶ್ರಾವಣ ಶೀರ್ಷಿಕೆಯಡಿಯಲ್ಲಿ ಉಪನ್ಯಾಸದ ಮೂಲಕ ಯುವ ಸಮೂಹಕ್ಕೆ, ವಿದ್ಯಾರ್ಥಿಗಳಿಗೆ 30 ಕನ್ನಡ ಸಾಹಿತಿಗಳ ದರ್ಶನ ಮಾಡಿಸಿದೆ ಎಂದು ಹೇಳಿದರು. ಜಿಲ್ಲಾ ಶ್ರೇಷ್ಠ ಶಿಕ್ಷಕಿ ಪ್ರಶಸ್ತಿ ವಿಜೇತರಾದ ಚಂದ್ರಕಲಾ ನರಸಾಪೂರವರು ಮಾತನಾಡಿ, ಪ್ರತಿ ವಿದ್ಯಾರ್ಥಿಯು ವಿಭಿನ್ನ ವೇಗದಲ್ಲಿ ಕಲಿಯುತ್ತಾನೆ ಎಂಬುದನ್ನು ಅರ್ಥಮಾಡಿಕೊಂಡು, ಅವರಿಗೆ ತಾಳ್ಮೆಯಿಂದ ಮತ್ತು ಪ್ರೀತಿಯಿಂದ ಕಲಿಸುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ.ಶಿಕ್ಷಕರು ತಾವು ಕಲಿಸುವ ವಿಷಯದ ಬಗ್ಗೆ ಉತ್ತಮ ತಿಳುವಳಿಕೆ ಮತ್ತು ಆಳವಾದ ಜ್ಞಾನವನ್ನು ಹೊಂದಿ ಮಕ್ಕಳ ಆಳಕ್ಕಿಳಿದು ಪರಿಣಾಮಕಾರಿಯಾಗಿ ಪಾಠ ಮಾಡಿದರೆ ಮಾತ್ರ ವಿದ್ಯಾರ್ಥಿಗಳ ಮನಸ್ಸನ್ನು ಮುಟ್ಟಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ 2025ನೇ ಸಾಲಿನ ಶ್ರೇಷ್ಠ ವರ್ತಕ ಪ್ರಶಸ್ತಿ ಪಡೆದ ವರ್ತಕರಾದ ಸಂಗಣ್ಣ ಗೋವೇಶ್ವರ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು. ವೇದಿಕೆ ಮೇಲೆ ಪೂಜ್ಯ ಶಾಂತಲಿಂಗ ಶ್ರೀಗಳು, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಫ್‌. ಮಜ್ಜಗಿ, ಜನಪದ ವಿದ್ವಾಂಸ ಮಲ್ಲಯ್ಯಸ್ವಾಮಿ ತೋಟಗಂಟಿ, ನಿವೃತ್ತ ಶಿಕ್ಷಕ ಗಂಗಾದರ ಘಾಳಿ, ಹನಮಂತಪ್ಪ ಸುಣಗದ, ಪ್ರೋ. ಪ್ರಕಾಶ ಅಣ್ಣಿಗೇರಿ, ಶಿಕ್ಷಕ ಈರಯ್ಯ ನಾಗಲೋಟಿಮಠ, ಮುಖ್ಯಶಿಕ್ಷಕ ಎಸ್. ಎಸ್. ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಅಮರೇಶ ತೆಗ್ಗಿನಮನಿ ಸ್ವಾಗತಿಸಿದರು. ಪ್ರೊ. ಆರ್.ಬಿ. ಚಿನಿವಾಲರ ವಂದಿಸಿದರು.