ಸಾರಾಂಶ
, ಪ್ರಸ್ತುತ ವರ್ಷ ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಅದರ ಸವಿನೆನಪಿನಲ್ಲಿ ಈ ವರ್ಷ ಅದ್ಧೂರಿಯಾಗಿ ಮುಂಡರಗಿ ಉತ್ಸವ ಆಚರಿಸೋಣ ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಮುಂಡರಗಿ
ನಾಡು-ನುಡಿಗಾಗಿ ಸೇವೆ ಸಲ್ಲಿಸಿದವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಮುಂಡರಗಿ ನಾಡ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರನ್ನು ಸ್ಮರಿಸುವುದು ಅವಶ್ಯವಾಗಿದ್ದು, ಪ್ರಸ್ತುತ ವರ್ಷ ಅನ್ನದಾನೀಶ್ವರ ವಿದ್ಯಾ ಸಮಿತಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಅದರ ಸವಿನೆನಪಿನಲ್ಲಿ ಈ ವರ್ಷ ಅದ್ಧೂರಿಯಾಗಿ ಮುಂಡರಗಿ ಉತ್ಸವ ಆಚರಿಸೋಣ ಎಂದು ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.ಸೋಮವಾರ ಬೆಳಗ್ಗೆ ಪಟ್ಟಣದ ಬೃಂದಾವಣ ವೃತ್ತದಲ್ಲಿ 14ನೇ ವರ್ಷದ ಮುಂಡರಗಿ ಉತ್ಸವ ಸಾಂಕೇತಿಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಒಂದು ಬಾರಿ ಅದ್ಧೂರಿಯಾಗಿ ಮುಂಡರಗಿ ಉತ್ಸವ ಮಾಡಿದ್ದು, ಮತ್ತೆ ಮಾಡಿಲ್ಲ. ಆದ್ದರಿಂದ ಈ ವರ್ಷ ನಮ್ಮ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಅದರ ಅಂಗವಾಗಿ ಈ ಬಾರಿ ಎಲ್ಲರೂ ಸೇರಿ ಮುಂಡರಗಿ ಉತ್ಸವ ಆಚರಿಸಬೇಕು. ಇದರಿಂದ ಈ ನಾಡಿಗಾಗಿ ತ್ಯಾಗ, ಬದಲಿದಾನ ಮಾಡಿದವರನ್ನು ಶ್ರಮಿಸುವುದರ ಜತೆಗೆ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.ಅಧ್ಯಕ್ಷ ವಹಿಸಿದ್ದ ವೈ.ಎನ್. ಗೌಡರ ಮಾತನಾಡಿ, ಈ ಹಿಂದೆ ಶ್ರೀಗಳ ಆಶೀರ್ವಾದ ಹಾಗೂ ಪಟ್ಟಣದ ಅನೇಕರ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಮಾದರಿಯಾಗುವಂತೆ ಉತ್ಸವ ಮಾಡಿ ಯಶಸ್ವಿಯಾಗಿದ್ದೇವೆ. ನಂತರದಲ್ಲಿ ಅನೇಕ ಬಾರಿ ಅದ್ಧೂರಿ ಮುಂಡರಗಿ ಉತ್ಸವ ಮಾಡಬೇಕೆಂದಾಗಲೆಲ್ಲ ಒಂದಿಲ್ಲೊಂದು ವಿಘ್ನಗಳು ಬರುತ್ತಲೇ ಇವೆ. ಪ್ರಸ್ತುತ ವರ್ಷ ಲೋಕಸಭ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಯಿತು. ಆದರೆ ಮುಂಡರಗಿ ಪೂಜ್ಯರು ನುಡಿದಂತೆ ಪ್ರಸ್ತುತ ವರ್ಷ ಜ.ಅ.ವಿದ್ಯಾ ಸಮಿತಿ ಶತಮಾನೋತ್ಸವದ ಸವಿ ನೆನಪಿನಲ್ಲಿ ನವಂಬರ್ ತಿಂಗಳಿನಲ್ಲಿ ಅದ್ಧೂರಿ ಮುಂಡರಗಿ ಉತ್ಸವಕ್ಕೆ ನಾವು ಈಗಿನಿಂದಲೇ ಸನ್ನದ್ದರಾಗಿ ತಯಾರಿ ಮಾಡಿಕೊಳ್ಳುತ್ತೇವೆ ಎಂದರು.
ಮುಂಡರಗಿ ಭೀಮರಾಯರ ವಂಶಸ್ಥರಾದ ವಿ.ಎಲ್. ನಾಡಗೌಡ್ರ ಮುಂಡರಗಿ ಉತ್ಸವದ ಸಾಂಕೇತಿಕವಾಗಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಕರಬಸಪ್ಪ ಹಂಚಿನಾಳ, ಎ.ಕೆ. ಬೆಲ್ಲದ, ಕಾಂತರಾಜ ಹಿರೇಮಠ, ವಿ.ಎಸ್. ಗಟ್ಟಿ, ಎಸ್.ಎಸ್. ಗಡ್ಡದ, ನಾಗೇಶ ಹುಬ್ಬಳ್ಳಿ, ಮದರಸಾಬ್ ಸಿಂಗನಮಲ್ಲಿ, ಎ.ವೈ. ನವಲಗುಂದ, ಬಿ.ಜಿ. ಜವಳಿ, ಶರಣಯ್ಯ ಹಿರೇಮಠ, ಪರಸುರಾಮ ಸವಣೂರು, ಸಿದ್ದಪ್ಪ ಮುದ್ಲಾಪೂರ, ಖಾಜಾಸಾಬ್ ಕಲಕೇರಿ, ಮಹಮ್ಮದ್ ರಫೀಕ್ ವಡ್ಡಟ್ಟಿ, ಆನಂದ ರಾಮೇನಹಳ್ಳಿ, ವೀರೇಶ ಮುತ್ತಿನಪೆಂಡಿಮಠ, ವೀರಣ್ಣ ಹುಲ್ಲೂರ, ವಿರೂಪಾಕ್ಷಪ್ಪ ಕುಂಬಾರ, ಸಿ.ಕೆ. ಗಣಪ್ಪನವರ, ಸಂತೋಷ ಮುರುಡಿ, ಎಚ್.ಬಿ. ವಡ್ಡಟ್ಟಿ, ಗೋವಿಂದರಾಜ ಹೆಗಡಾಳ, ಪ್ರಕಾಶ ಬೋಸ್ಲೆ, ಉಮೇಶ ಕೊರಡಕೇರಿ, ಶಿವಯ್ಯ, ನಾಗರಾಜ ಹೊಸಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವೈ.ಎಚ್. ಬಚನಳ್ಳಿ ಧ್ವಜಾರೋಹಣ ಕಾರ್ಯಕ್ರಮ ನಡೆಸಿಕೊಟ್ಟರು. ಬಸವರಾಜ ರಾಮೇನಹಳ್ಳಿ ನಿರೂಪಿಸಿದರು.