ಕರ್ನಾಟಕದಲ್ಲೂ ಎನ್‌ಇಪಿ ಶಿಕ್ಷಣ ಜಾರಿಯಾಗಲಿ: ಎಸ್.ವಿ. ಸಂಕನೂರ

| Published : Mar 07 2024, 01:49 AM IST

ಕರ್ನಾಟಕದಲ್ಲೂ ಎನ್‌ಇಪಿ ಶಿಕ್ಷಣ ಜಾರಿಯಾಗಲಿ: ಎಸ್.ವಿ. ಸಂಕನೂರ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ ನಗರದ ಬಿ.ವ್ಹಿ.ವ್ಹಿ. ಸಂಘದ ಪಾಲಿಟೇಕ್ನಿಕ್ ಕಾಲೇಜು ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷದಿಂದ ಹಮ್ಮಿಕೊಂಡಿದ್ದ ಯುವ ಮತದಾರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಎಸ್.ವಿ. ಸಂಕನೂರ, 21ನೇ ಶತಮಾನಕ್ಕೆ ಬೇಕಾಗುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) ಕರ್ನಾಟಕದಲ್ಲೂ ಜಾರಿ ಅಗತ್ಯವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

21ನೇ ಶತಮಾನಕ್ಕೆ ಬೇಕಾಗುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) ಕರ್ನಾಟಕದಲ್ಲೂ ಜಾರಿ ಅಗತ್ಯವಾಗಿದ್ದು, ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ಮೋದಿ ಮತ್ತೆ ಪ್ರಧಾನಿ ಆಗೋದು ಅವಶ್ಯಕವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.

ನಗರದ ಬಿ.ವ್ಹಿ.ವ್ಹಿ. ಸಂಘದ ಪಾಲಿಟೇಕ್ನಿಕ್ ಕಾಲೇಜು ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷದಿಂದ ಹಮ್ಮಿಕೊಂಡಿದ್ದ ಯುವ ಮತದಾರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತದಲ್ಲಿ 3 ಶಿಕ್ಷಣ ನೀತಿಗಳು ಜಾರಿಗೆ ಬಂದಿವೆ. ಅವುಗಳಲ್ಲಿ 1968ರಲ್ಲಿ ಇಂದಿರಾ ಗಾಂಧಿ ಮೊದಲ, 1986ರಲ್ಲಿ ರಾಜೀವ ಗಾಂಧಿ ಎರಡನೇ ಶಿಕ್ಷಣ ನೀತಿ ಜಾರಿಗೆ ತಂದಿದ್ದರು. 34 ವರ್ಷಗಳ ಬಳಿಕೆ ಪ್ರಧಾನಿ ನರೇಂದ್ರ ಮೋದಿಯವರು 21 ಶತಮಾನಕ್ಕೆ ಬೇಕಾಗುವ ಭವ್ಯ ಭಾರತ ನಿರ್ಮಾಣಕ್ಕೆ ಅಗತ್ಯವಾದ ವಿದ್ಯಾರ್ಥಿಗಳಲ್ಲಿ ಕೌಶಲ ಬೆಳೆಸುವ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) ಜಾರಿಗೆ ತಂದಿದ್ದಾರೆ. ಆದರೆ ಕರ್ನಾಟಕ ಸರ್ಕಾರ ತನ್ನದೆ ನೀತಿ ಜಾರಿ ಮಾಡಲು ಹೊರಟಿರುವುದು ಸರಿಯಲ್ಲ, ದೇಶದ ಉತ್ತಮ ಭವಿಷ್ಯಕ್ಕಾಗಿ ಎನ್.ಇ.ಪಿ ಅಗತ್ಯವಾಗಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಹನುಮಂತ ನಿರಾಣಿ, ಕೇಂದ್ರ ಸರ್ಕಾರದ ಸಾಧನೆಗಳನ್ನು ಯುವ ಮತದಾರರಿಗೆ ತಿಳಿಸುವ ಕಾರ್ಯಕ್ರಮ ಇದಾಗಿದ್ದು, ದೇಶದ ಅಭಿವೃದ್ಧಿಯೇ ನಮ್ಮ ಮೂಲ ಧ್ಯೇಯ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾಜಿ ಶಾಸಕಡಾ.ವೀರಣ್ಣ ಚರಂತಿಮಠ, ಮುಂದಿನ 50 ವರ್ಷಗಳ ವಿಜನ್ ಇಟ್ಟುಕೊಂಡು ಯುವಸಮುದಾಯಕ್ಕೆ ಬೇಕಾಗುವ ಶಿಕ್ಷಣ, ಉದ್ಯೋಗದೂರದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಬೆಳಗಾವಿ ಪ್ರಭಾರಿ ಬಸವರಾಜ ಯಂಕಂಚಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಮಲ್ಲಯ್ಯ ಮೂಗನೂರಮಠ, ಜಿಲ್ಲಾ ಮಾಧ್ಯಮ ವಕ್ತಾರ ಸತ್ಯನಾರಾಯಣ ಹೆಮಾದ್ರಿ, ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಮಲ್ಲಿಕಾರ್ಜುನ ಕಾಂಬಳೆ, ಚುನಾವಣೆ ವಿಸ್ತಾರಕ ಹರೀಶ್ ಮಲ್ಲಾರಿ, ಶ್ರೀಧರ ನಾಗರಬೆಟ್ಟ ಇತರರು ಉಪಸ್ಥಿತರಿದ್ದರು. ನಂತರ ಯುವ ಮತದಾರರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ದೇಶದ ಅಭಿವೃದ್ಧಿ ಕುರಿತು ಚರ್ಚಿಸಲಾಯಿತು.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿ, ನರೇಂದ್ರ ಮೋದಿ ಮೊತ್ತಮ್ಮೆ ಪ್ರಧಾನಿಯಾಗುವುದು ನಿಶ್ಚಿತ. 2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ವಿಶ್ವದ ಶಕ್ತಿಯಾಗಿ ತಲೆಎತ್ತಲಿದೆ.

- ಡಾ.ವೀರಣ್ಣ ಚರಮತಿಮಠ, ಮಾಜಿ ಶಾಸಕ