ಸಂಘ ಸಂಸ್ಥೆಗಳು ಸಮಾಜಮುಖಿ ಕೆಲಸ ನಿರ್ವಹಿಸಲಿ: ಮೆಲ್ವಿನ್ ಡಿಸೋಜಾ

| Published : Mar 15 2024, 01:17 AM IST

ಸಂಘ ಸಂಸ್ಥೆಗಳು ಸಮಾಜಮುಖಿ ಕೆಲಸ ನಿರ್ವಹಿಸಲಿ: ಮೆಲ್ವಿನ್ ಡಿಸೋಜಾ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿಯಮೇಲೆ ಸಮಾಜದ ಋಣವಿದೆ. ಸಮಾಜದ ಋಣ ತೀರಿಸುವುದು ಪ್ರತಿ ಯೊಬ್ಬರ ಕರ್ತವ್ಯ. ಸಂಘ ಸಂಸ್ಥೆಗಳು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಲಯನ್ಸ್‌ ಜಿಲ್ಲಾ ಗವರ್ನರ್‌ ಮೆಲ್ವಿನ್‌ ಡಿಸೋಜಾ ಹೇಳಿದರು.

ಪಟ್ಟಣದಲ್ಲಿ ಲಯನ್ಸ್‌ ಸಂಸ್ಥೆಗೆ ಭೇಟಿ ಸಂದರ್ಧದಲ್ಲಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಸಮಾಜದಲ್ಲಿ ಬದುಕುತ್ತಿರುವ ಪ್ರತಿಯೊಬ್ಬ ವ್ಯಕ್ತಿಯಮೇಲೆ ಸಮಾಜದ ಋಣವಿದೆ. ಸಮಾಜದ ಋಣ ತೀರಿಸುವುದು ಪ್ರತಿ ಯೊಬ್ಬರ ಕರ್ತವ್ಯ. ಸಂಘ ಸಂಸ್ಥೆಗಳು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಲಯನ್ಸ್‌ ಜಿಲ್ಲಾ ಗವರ್ನರ್‌ ಮೆಲ್ವಿನ್‌ ಡಿಸೋಜಾ ಹೇಳಿದರು.ಪಟ್ಟಣದಲ್ಲಿ ಲಯನ್ಸ್‌ ಸಂಸ್ಥೆಗೆ ಬೇಟಿ ನೀಡಿದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು . ಸಮಾಜ ನಮಗೇನು ನೀಡಿತು ಎನ್ನುವುದು ಮುಖ್ಯವಲ್ಲ. ಸಮಾಜಕ್ಕೆ ನಾವೇನು ನೀಡಿದ್ದೇವೆ ಎಂಬುದು ಮುಖ್ಯ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರ ಜೊತೆಗೆ ಸಮಾಜದ ಋಣ ತೀರಿಸಬೇಕು. ಲಯನ್ಸ್‌ ಸಂಸ್ಥೆ ತನ್ನದೇ ಆದ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಾ ಬಂದಿದೆ. ಆರೋಗ್ಯ ಶಿಬಿರಗಳು, ಪರಿಸರ ಕಾರ್ಯಕ್ರಮಗಳು, ದಂತ ಚಕಿತ್ಸಾ ಶಿಬಿರ, ನೇತ್ರ ತಪಾಸಣಾ, ಶಸ್ತ್ರ ಚಿಕಿತ್ಸಾ ಶಿಬಿರ, ರಸ್ತೆ ನಾಮಫಲಕಗಳ ಅಳವಡಿಕೆ. ಶೈಕ್ಷಣಿಕ ಸೇರಿದಂತೆ ಹತ್ತುಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಶೃಂಗೇರಿ ಘಟಕದ ಅಧ್ಯಕ್ಷ ವಿವೇಕ್‌ ಬೇಗಾನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಲಾಗಿದೆ. ಮುಂದಿನ ದಿನಗಳಲ್ಲಿಯೂ ಕೆಲಸ ಮಾಡಲಾಗುತ್ತದೆ ಎಂದರು. ಲಯನ್ಸ್‌ ಸಂಸ್ಥೆ ಜಿಲ್ಲಾ ಘಟಕದ ವೋಜ್ವಾನ್‌ ಡಿಸೋಜಾ, ಸುಧಾಕರ ಶೆಟ್ಟಿ, ಉಮೇಶ್‌ ಪುದುವಾಳ್‌ ಮತ್ತಿತರರು ಇದ್ದರು.14 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದ ಶಾರದಾ ಕಂಫರ್ಟ್‌ ಸಭಾಂಗಣದಲ್ಲಿ ನಡೆದ ಲಯನ್ಸ್‌ ಸಂಸ್ಥೆ ಕಾರ್ಯಕ್ರಮದಲ್ಲಿ ಮೆಲ್ವಿನ್‌ ಡಿ ಸೋಝಾ ಮಾತನಾಡಿದರು.