ಸಂಘಟನೆಗಳು ಸಹಾಯ ಮಾಡಲಿ

| Published : Sep 21 2024, 01:59 AM IST

ಸಾರಾಂಶ

ಸಮಾಜದ ಕೆಳಸ್ತರದಲ್ಲಿರುವ ಬಡವರಿಗೆ ಶೈಕ್ಷಣಿಕ ಹಾಗೂ ಆರ್ಥಿಕ ಸೌಲಭ್ಯಗಳನ್ನು ದೊರಕಿಸಲು ಸಂಘಟಿತ ಸಂಘಟನೆಗಳ ಅವಶ್ಯಕತೆ ಇದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಹೇಳಿದರು.

ಬಾಗಲಕೋಟೆ: ಸಮಾಜದ ಕೆಳಸ್ತರದಲ್ಲಿರುವ ಬಡವರಿಗೆ ಶೈಕ್ಷಣಿಕ ಹಾಗೂ ಆರ್ಥಿಕ ಸೌಲಭ್ಯಗಳನ್ನು ದೊರಕಿಸಲು ಸಂಘಟಿತ ಸಂಘಟನೆಗಳ ಅವಶ್ಯಕತೆ ಇದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಹೇಳಿದರು.

ನಗರದಲ್ಲಿ ಟಿಎಂ ಭಗವತಿ, ಆರ್.ಎಚ್.ಕಮತರ, ಶಾಂತಾ ಸಿಂಧೂರ ಹಾಗೂ ಎಂ.ಎಸ್.ಸಿಂಧೂರ ಅವರ ಸ್ಮರಣಾರ್ಥ ಪಂಚಮಸಾಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜಾತ್ಯತೀತವಾಗಿ ಬಡವರಿಗೆ ದಾಸೋಹ ಮೂಲಕ ಶಿಕ್ಷಣ ನೀಡುತ್ತಿರುವ ವಿರಕ್ತ ಲಿಂಗಾ0ುತ ಮಠಗಳನ್ನು ಸ್ಮರಿಸಿ ಈ ದಿಸೆಯಲ್ಲಿ ಸರಕಾರದ ಪ್ರಯತ್ನ ಫಲಕಾರಿಯಾಗದಿರುವುದಕ್ಕೆ ವಿಷಾದಿಸಿ ಸಾಮಾಜಿಕ ಸಂಘಟನೆಗಳು ಬಡವರಿಗೆ ಆರ್ಥಿಕ ನೆರವಿಗಾಗಿ ಹಣ ಕೂಡಿಟ್ಟು ಸಕಾಲದಲ್ಲಿ ಸಹಾಯ ಮಾಡಲು ಮುಂದೆ ಬರಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿ ಮಾಜಿ ಸಚಿವ ಎಸ್.ಆರ್.ಪಾಟೀಲ ಅವರು ಎಲ್ಲ ಸಮಾಜಗಳೊಂದಿಗೆ ಸೌಹಾರ್ದ ಸಂಬಂಧ ಹೊಂದಿ ಶಾಂತಿ0ುುತ ಸಹಬಾಳ್ವೆ ಮಾಡುತ್ತಿರುವ ಪಂಚಮಸಾಲಿ ಸಮಾಜ ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಲು ಸಮಾಜದ ರಾಜಕೀ0ು ನಾಯಕರು ಪಕ್ಷ ಬೇಧ ಮರೆತು ಸಹಾಯಮಾಡಬೇಕೆಂದರು.

ಅತಿಥಿಗಳಾಗಿ ಮಾತನಾಡಿದ ಜಿ.ಎನ್.ಪಾಟೀಲ ಅವರು ಒಕ್ಕಲುತನವನ್ನೇ ಅವಲಂಭಿಸಿ ಬದುಕು ಸಾಗಿಸುತ್ತಿರುವ ಪಂಚಮಸಾಲಿ ಸಮಾಜ ಬಸವಣ್ಣನವರಲ್ಲಿ ನಂಬಿಕೆ ಇಟ್ಟಿದ್ದು ಭಾವೈಕ್ಯತೆಗೆ ಮಾದರಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಪಿ.ನಾಡಗೌಡ ಅವರು ಮಾತನಾಡಿ, ಸಮಾಜದ ಪ್ರೋತ್ಸಾಹ ದಿಂದ ಪ್ರತಿಭೆಗಳು ಹೊರಹೊಮ್ಮಿ ಒಳ್ಳೆಯ ಸ್ಥಾನ ಮಾನ ಹೊಂದಿ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಪಂಚಮಸಾಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಶ್ರೀಶೈಲ ಕರಿಶಂಕರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಎಂ.ಸಿಂಧೂರ ಸ್ವಾಗತಿಸಿದರು. ಸದಾಶಿವ ಸಿಂಧೂರ ವಂದಿಸಿದರು. ಹುಚ್ಛೇಶ ಲಾಯದಗುಂದಿ ನೀರೂಪಿಸಿದರು.