ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಮಾನಸಿಕ ನೆಮ್ಮದಿ ಹಾಗೂ ಸಮಾಜ ಪರಿವರ್ತನೆಗೆ ಕಾವ್ಯ ಸದಾ ಮಿಡಿಯಲಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯೆ ಡಾ. ಚಂದ್ರಕಲಾ ಬಿದರಿ ಹೇಳಿದರು.ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭಾನುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಲೇಖಕಿ-ಶಿಕ್ಷಕಿ ಅನುಪಮಾ ಜಿ ಅಪಗುಂಡೆ ಅವರ ರಚಿತ ಇನಿ ದನಿ ಹನಿಗವಿತೆಗಳ ಸಂಕಲನವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಮನಸ್ಸು ಕಟ್ಟುವ ಸಾಹಿತ್ಯದ ಕೃತಿಗಳು ಹೆಚ್ಚಾಗಿ ಬರಬೇಕು. ಸಾಹಿತ್ಯದೊಳಗೆ ಹನಿಗವಿತೆಗಳು ನಿರಂತರತೆ ಹೊಂದಿದ್ದು, ಆಯಾ ಕಾಲಘಟ್ಟಕ್ಕೆ ತಕ್ಕಂತೆ ವಿಸ್ತಾರ ಹೊಂದಬೆಕಾಗಿದೆ. ಇನಿ ದನಿ ಕೃತಿಯಲ್ಲಿ ಸಾಮಾಜಿಕ ಕಳಕಳಿ ತೋರುವ ಹನಿಗವಿತೆಗಳು ವಾಸ್ತವದಿಂದ ಮೂಡಿ ಬಂದಿವೆ ಎಂದರು.ಕೃತಿ ಪರಿಚಯಿಸಿದ ಹಿರಿಯ ಕಥೆಗಾರತಿ ಕಾವ್ಯಶ್ರೀ ಮಹಾಗಾಂವಕರ್, ಕಾವ್ಯ ಪ್ರೀತಿ, ಸಾಮಾಜಿಕ ಬದುಕನ್ನು ಚಿತ್ರಿಸುವ ಕೃತಿ ಮೌಲಿಕವಾಗಿದೆ. ವ್ಯಂಗ್ಯ, ವಿಡಂಬನೆಯ ಮೂಲಕ ಬದುಕಿನ ತಲ್ಲಣಗಳಿಗೆ ಸ್ಪಂದಿಸುವ ಕೃತಿ ಜೀವಪರವಾಗಿದೆ. ವ್ಯಕ್ತಿಯ ಮನೋಭಾವ ಅಕ್ಷರ ರೂಪಗಳಾದಾಗ ಕಾವ್ಯ ರಚನೆ ಪರಂಪರೆ ಬೆಳೆಯಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ನಾಡಿನ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ, ಹೊಸ ಪೀಳಿಗೆಯೂ ಸಹ ಚುಟುಕು ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಕನ್ನಡ ಭಾಷೆ, ನೆಲ ಜಲವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.ಕೃತಿ ಲೇಖಕಿ ಅನುಪಮಾ ಅಪಗುಂಡೆ, ಕರಾವಿಪ ಮಾಜಿ ರಾಜ್ಯಾಧ್ಯಕ್ಷ ಗಿರೀಶ ಕಡ್ಲೇವಾಡ, ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಹಾಗೂ ಕಿರಿಯ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮರೆಪ್ಪ ಎಂ ಬಸವಪಟ್ಟಣ ಮಾತನಾಡಿದರು. ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಎಸ್ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕಾರ್ಯದರ್ಶಿಗಳಾದ ಸಿದ್ಧಲಿಂಗ ಜಿ ಬಾಳಿ, ರಾಜೇಂದ್ರ ಮಾಡಬೂಳ ಇದ್ದರು.
ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ಜಿಪಂ ನ ಮಾಜಿ ಸದಸ್ಯ ಪ್ರೇಮಕುಮಾರ ರಾಠೋಡ, ರೇವಣಸಿದ್ದಪ್ಪ ಜೀವಣಗಿ, ಎ.ಕೆ. ರಾಮೇಶ್ವರ, ಡಾ. ಎಸ್.ಎ. ವಡ್ಡನಕೇರಿ, ವಿನೋದಕುಮಾರ ಜೆ.ಎಸ್., ಧರ್ಮರಾಜ ಜವಳಿ, ರಮಾನಂದ ಹಿರೇಜೇವರ್ಗಿ, ಸಂತೋಷ ಕುಡಳ್ಳಿ, ಪ್ರಭು ಫುಲಾರಿ, ರವೀಂದ್ರಕುಮಾರ ಭಂಟನಳ್ಳಿ, ಭೀಮರಾಯ ಹೇಮನೂರ, ವಿಶ್ವನಾಥ ಮಂಗಲಗಿ, ಆರ್ ಸಿ ಘಾಳೆ, ಸಿದ್ಧರಾಮ ರಾಜಮಾನೆ, ಚಂದ್ರಕಾಂತ ಸೂರನ್, ಪ್ರಮೋದ ಕಟ್ಟಿ, ಎಸ್ ಪಿ ಸುಳ್ಳದ, ಸಿ.ಎಸ್. ಮಾಲಿ ಪಾಟೀಲ, ದೇವೀಂದ್ರಪ್ಪ ಗಣಮುಖಿ, ಅಶೋಕ ದೊಡ್ಮನಿ, ಶಿವಲಿಂಗಪ್ಪ ಅಷ್ಟಗಿ ಇದ್ದರು.