ಯುವಪೀಳಿಗೆಯಲ್ಲಿ ಸಕಾರಾತ್ಮಕ ಚಿಂತನೆಗಳು ಬೆಳೆಯಲಿ: ಪ್ರೊ.ಬಿ.ಡಿ.ಕುಂಬಾರ

| Published : Jan 13 2024, 01:31 AM IST

ಯುವಪೀಳಿಗೆಯಲ್ಲಿ ಸಕಾರಾತ್ಮಕ ಚಿಂತನೆಗಳು ಬೆಳೆಯಲಿ: ಪ್ರೊ.ಬಿ.ಡಿ.ಕುಂಬಾರ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲಿಯವರೆಗೆ ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲ್ಲವೋ, ನಿಮ್ಮ ಮನಸ್ಸಿಗೆ ಲಗಾಮು ಹಾಕಲು ಸಾಧ್ಯವಿಲ್ಲವೋ, ಅಲ್ಲಿಯವರೆಗೆ ನಿಮಗೆ ಯಶಸ್ಸು ಸಿಗುವುದಿಲ್ಲ. ಸ್ವಾಮಿ ವಿವೇಕಾನಂದರ ಸಂದೇಶದಂತೆ ನೀವು ನಡೆದರೆ ಯಶಸ್ಸು ಪಡೆಯಲು ಸಾಧ್ಯ ಈ ನಿಟ್ಟಿನಲ್ಲಿ ನೀವು ಅಂದುಕೊಂಡ ಗುರಿಯತ್ತ ಹಗಲಿರುಳು ಪರಿಶ್ರಮ ಪಡಿ, ನೀವು ನೀವಾಗಿಯೆ ಮುನ್ನಡೆದರೆ ವೀರ ಸನ್ಯಾಸಿಯ ಮಾರ್ಗ ಕಂಡುಕೊಳ್ಳಲು ಸಾಧ್ಯ.

ದಾವಣಗೆರೆ ವಿವಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ

ಕನ್ನಡಪ್ರಭ ವಾರ್ತೆ ದಾವಣಗೆರೆ

ಇಂದಿನ ಯುವ ಪೀಳಿಗೆಯಲ್ಲಿ ಸಕಾರಾತ್ಮಕ ಚಿಂತನೆ ಬದಲು ನಕಾರಾತ್ಮಕ ಚಿಂತನೆ ಬೆಳೆಯತ್ತಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಆಪ್ತ ಸಮಾಲೋಚನೆಗೆ ಒಳಪಡಿಸಿ ಕಾರಣ ಅರಿತು ಪರಿಹಾರ ಕಲ್ಪಿಸಬೇಕಿದೆ ಎಂದು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಹೇಳಿದರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಶುಕ್ರವಾರ ನಡೆದ ಸ್ವಾಮಿ ವಿವೇಕಾನಂದ 161ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಿ ಮಾತನಾಡಿ ಎಲ್ಲಿಯವರೆಗೆ ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲ್ಲವೋ, ನಿಮ್ಮ ಮನಸ್ಸಿಗೆ ಲಗಾಮು ಹಾಕಲು ಸಾಧ್ಯವಿಲ್ಲವೋ, ಅಲ್ಲಿಯವರೆಗೆ ನಿಮಗೆ ಯಶಸ್ಸು ಸಿಗುವುದಿಲ್ಲ. ಸ್ವಾಮಿ ವಿವೇಕಾನಂದರ ಸಂದೇಶದಂತೆ ನೀವು ನಡೆದರೆ ಯಶಸ್ಸು ಪಡೆಯಲು ಸಾಧ್ಯ ಈ ನಿಟ್ಟಿನಲ್ಲಿ ನೀವು ಅಂದುಕೊಂಡ ಗುರಿಯತ್ತ ಹಗಲಿರುಳು ಪರಿಶ್ರಮ ಪಡಿ, ನೀವು ನೀವಾಗಿಯೆ ಮುನ್ನಡೆದರೆ ವೀರ ಸನ್ಯಾಸಿಯ ಮಾರ್ಗ ಕಂಡುಕೊಳ್ಳಲು ಸಾಧ್ಯ ಎಂದರು.

ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಸ್ವಾಮಿ ಮಾತನಾಡಿ ಸ್ವಾಮಿ ವಿವೇಕಾನಂದರು ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಭಾರತದ ಸಂಸ್ಕೃತಿ, ಆಧ್ಯಾತ್ಮಕತೆ ವಿಶ್ವದ ಎಲ್ಲ ಸಂಸ್ಕೃತಿಗಿಂತಲೂ ಶ್ರೇಷ್ಠ ಎಂದು ಅವರ ಪಾಶ್ಚಿಮಾತ್ಯರ ನೆಲದಲ್ಲಿ ನಿಂತು ಹೇಳುವ ಧೈರ್ಯ ಮಾಡಿದ್ದರು. ಯುವ ಜನತೆ ಸ್ವಾಮಿ ವಿವೇಕಾನಂದ ಅವರ ಕುರಿತು ಅಧ್ಯಯನ ಮಾಡುವುದರಿಂದ ಮಾನಸಿಕವಾಗಿ ಸದೃಢರಾಗಿ, ಯಶಸ್ಸು ನಿಮ್ಮದಾಗಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕುಲಸಚಿವೆ (ಆಡಳಿತ) ಬಿ.ಬಿ. ಸರೋಜಾ, ಕುಲಸಚಿವ(ಪರೀಕ್ಷಾಂಗ) ಡಾ.ಸಿ.ಕೆ. ರಮೇಶ, ಹಣಕಾಸು ಅಧಿಕಾರಿ ಡಾ.ಆರ್.ಶಶಿಧರ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಅಭಿವೃದ್ದಿ ಘಟಕದ ಸಂಚಾಲಕ ಡಾ.ಪಿ.ನಾಗಭೂಷಣಗೌಡ ಇದ್ದರು.

.......