ಪ್ರಸ್ತುತ ಸಾಮಾಜಿಕ ಜಾಗೃತಿ ಒಂದೆಡೆಯಾದರೆ ಧಾರ್ಮಿಕ ಜಾಗೃತಿ ಮತ್ತೊಂದೆಡೆ ಧಾರ್ಮಿಕ ಜಾಗೃತಿಯಿಂದ ನಮ್ಮ ಸಂಸ್ಕೃತಿ, ಪರಂಪರೆ ಉಳಿಯಲಿದೆ. ಇಲ್ಲವಾದರೆ ಅರಾಜಕತೆ ಉಂಟಾಗಲಿದೆ ಎಂದರು.

-------------

ಕನ್ನಡಪ್ರಭ ವಾರ್ತೆ ಸಾಲಿಗ್ರಾಮ

ನಮ್ಮ ಮುಂದಿನ ತಲೆಮಾರಿಗೆ ಧಾರ್ಮಿಕ ಪರಂಪರೆ ತಲುಪುವಂತಾಗಲು ಪ್ರತಿಯೊಬ್ಬರಲ್ಲೂ ಧಾರ್ಮಿಕ ಜಾಗೃತಿ ಮೂಡಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕಿ ಮಮತಾರಾವ್ ಹೇಳಿದರು.

ಪಟ್ಟಣದ ಶ್ರೀ ಕೃಷ್ಣ ಸಮುದಾಯ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ಸಾಮಾಜಿಕ ಜಾಗೃತಿ ಒಂದೆಡೆಯಾದರೆ ಧಾರ್ಮಿಕ ಜಾಗೃತಿ ಮತ್ತೊಂದೆಡೆ ಧಾರ್ಮಿಕ ಜಾಗೃತಿಯಿಂದ ನಮ್ಮ ಸಂಸ್ಕೃತಿ, ಪರಂಪರೆ ಉಳಿಯಲಿದೆ. ಇಲ್ಲವಾದರೆ ಅರಾಜಕತೆ ಉಂಟಾಗಲಿದೆ ಎಂದರು.

ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆಯಿಂದ ಪ್ರತಿ ವರ್ಷವೂ ಶ್ರೀ ಸತ್ಯನಾರಾಯಣಸ್ವಾಮಿ ಸಾಮೂಹಿಕವಾಗಿ ಆಚರಿಸುತ್ತಾ ಬಂದಿದ್ದೇವೆ. ಅಲ್ಲದೆ ನಾನಾ ಧಾರ್ಮಿಕ ಕಾರ್ಯಕ್ರಮಗಳೂ ನಿರಂತರವಾಗಿ ನಡೆಯುತ್ತಿವೆ ಎಂದರು.

ಪಟ್ಟಣದ ಶ್ರೀ ಬಾಷ್ಯಕಾರ ಸ್ವಾಮಿ ದೇವಾಲಯದ ಶ್ರೀದ್ವೈಯ ಸಿದ್ದಾಂತ ಪೀಠದ ಶ್ರೀ ಧನುರ್ದಾಸೆ ರಾಮಾನುಜ ಜೀಯರ್ ಸ್ವಾಮೀಜಿ ಆಶೀರ್ವಚನ ನೀಡಿದರು. ಪೂಜಾ ಕಾರ್ಯಕ್ರಮದಲ್ಲಿ ಇನ್ನೂರಕ್ಕೂ ಹೆಚ್ಚು ಮಂದಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ಭಕ್ತಿಭಾವ ಮೆರೆದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಉಮೇಶ್ ಪೂಜಾರಿ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಎಸ್.ಕೆ. ಮಧುಚಂದ್ರ, ಎಸ್.ಬಿ. ಶೇಖರ್, ಸಂಸ್ಥೆಯ ಮೇಲ್ವಿಚಾರಕಿ ಸಿ. ಹೇಮಲತಾ, ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಅಧ್ಯಕ್ಷ ಸತೀಶ್, ಸುರೇಶ್, ಮಂಜೇಗೌಡ, ಗವಿರಂಗೇಗೌಡ, ಬಸವರಾಜ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಹಾಗೂ ಸದಸ್ಯರು ಇದ್ದರು.