ಗ್ರಾಮದ ರೈತ ಮಹಿಳೆ ಪ್ರಮೀಳಾ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದನ್ನು ಗುರುತಿಸಿ ಸನ್ಮಾನಿಸಲಾಯಿತು.

ಮಂಡ್ಯ: ರೈತ ಮಹಿಳೆಯರು ಗ್ರಾಮೀಣ ಪ್ರದೇಶದ ಸ್ಥಳೀಯ ಸಂಪನ್ಮೂಲ ಬಳಸಿ ಆದಾಯ ಉತ್ಪನ್ನ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಜಿಲ್ಲಾ ಮಹಿಳಾ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಕೆ.ಪಿ.ಅರುಣಾಕುಮಾರಿ ಕರೆ ನೀಡಿದರು. ತಾಲೂಕಿನ ಮಾರಗೌಡನಹಳ್ಳಿಯಲ್ಲಿ ಜಿಲ್ಲಾ ಮಹಿಳಾಭಿವೃದ್ಧಿ ಸಂಸ್ಥೆ ಏರ್ಪಡಿಸಿದ್ದ ರೈತ ಮಹಿಳೆಗೆ ಸನ್ಮಾನ ಹಾಗೂ ಮನರಂಜನೆಗಾಗಿ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಮನೆ ಕೆಲಸಕಷ್ಟೇ ಸೀಮಿತರಾಗದೆ ಆದಾಯ ಉತ್ಪನ್ನ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ ಜೊತೆಗೆ ದೈಹಿಕ, ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆಗಳಲ್ಲಿ ಭಾಗವಹಿಸುವುದು ಉತ್ತಮ ಎಂದರು. ಇದೇ ವೇಳೆ ಗ್ರಾಮದ ರೈತ ಮಹಿಳೆ ಪ್ರಮೀಳಾ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದನ್ನು ಗುರುತಿಸಿ ಸನ್ಮಾನಿಸಲಾಯಿತು. ನಂತರ ನಡೆದ ಕ್ರೀಡೆಗಳಲ್ಲಿ ಮಹಿಳೆಯರು ಆಸಕ್ತಿಯಿಂದ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಅಭಿವೃದ್ಧಿ ಸಂಸ್ಥೆ ಮಾರಗೌಡನಹಳ್ಳಿ ಘಟಕದ ಅಧ್ಯಕ್ಷೆ ಮಮತಾ, ಜ್ಞಾನವಿಕಾಸ ಕೇಂದ್ರದ ನಮ್ರತಾ, ಮುಖ್ಯ ಶಿಕ್ಷಕರಾದ ಎಚ್.ಎಂ.ಲೋಕೇಶ್, ಸಪ್ಲೈಗೌಡ, ಪುಷ್ಪ ಸಂಸ್ಥೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕ್ರೀಡೆ ವಿಜೇತರು:

ಒಂದುವರೆ ಆಟ - ಪ್ರಮೀಳಾ ಪ್ರಥಮ, ಪುಷ್ಪ ದ್ವಿತೀಯ, ವಿಜಯ ತೃತೀಯ, ಸಂಗ್ರಹ ಆಟ - ರಜಿನಿ ಪ್ರಥಮ, ಲಕ್ಷ್ಮಿ ದ್ವಿತೀಯ, ಶಶಿಕಲಾ ತೃತೀಯ, ನೆನಪಿನ ಶಕ್ತಿ ಆಟ - ರಂಜಿತಾ ಪ್ರಥಮ, ದಿವ್ಯ - ದ್ವಿತೀಯ, ಅನುಶ್ರೀ ತೃತೀಯ ಬಹುಮಾನ ಪಡೆದರು.