ವನ್ಯಜೀವಿಗಳ ಸಂರಕ್ಷಣೆಗೆ ಎಲ್ಲರೂ ಸಹಕರಿಸಿ: ರೇವಣಸಿದ್ದಯ್ಯ ಸಲಹೆ

| Published : Oct 08 2023, 12:00 AM IST

ವನ್ಯಜೀವಿಗಳ ಸಂರಕ್ಷಣೆಗೆ ಎಲ್ಲರೂ ಸಹಕರಿಸಿ: ರೇವಣಸಿದ್ದಯ್ಯ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

69ನೇ ವನ್ಯಜೀವಿ ಸಪ್ತಾಹ– 2023
ಕನ್ನಡಪ್ರಭ ವಾರ್ತೆ ಶಿಕಾರಿಪುರ ವನ್ಯಜೀವಿಗಳ ಸಂರಕ್ಷಣೆ ಕೇವಲ ಇಲಾಖೆ ಜವಾಬ್ದಾರಿ ಮಾತ್ರವಲ್ಲ. ಪ್ರಕೃತಿಯಲ್ಲಿನ ಅಸಮತೋಲನ ಹೋಗಲಾಡಿಸಲು ಸಮಾಜದಲ್ಲಿನ ಪ್ರತಿಯೊಬ್ಬರೂ ಇಲಾಖೆ ಜತೆ ಸಹಕರಿಸಿದಾಗ ಮಾತ್ರ ಪ್ರಕೃತಿ ಜತೆಗೆ ವನ್ಯಜೀವಿಗಳನ್ನು ಸಂರಕ್ಷಿಸಲು ಸಾಧ್ಯ ಎಂದು ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಬಿ. ಹಿರೇಮಠ್ ಹೇಳಿದರು. ಪಟ್ಟಣದ ಕುಮದ್ವತಿ ಸಭಾಂಗಣದಲ್ಲಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಕುಮದ್ವತಿ ಪ್ರಥಮ ದರ್ಜೆ ಕಾಲೇಜು, ಅರಣ್ಯ ಇಲಾಖೆ ಮತ್ತು ರೋಟರಿ ಕದಂಬ ಶಿಕಾರಿಪುರ ವತಿಯಿಂದ ಶನಿವಾರ ನಡೆದ 69ನೇ ವನ್ಯಜೀವಿ ಸಪ್ತಾಹ– 2023 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಕೃತಿಯ ಸಮತೋಲನಕ್ಕೆ ಪ್ರಾಣಿ, ಪಕ್ಷಿ, ಅರಣ್ಯ, ಸಸ್ಯ, ಗಿಡ, ಮರಗಳು ಪ್ರತಿಯೊಂದು ಅನಿವಾರ್ಯವಾಗಿವೆ. ಎಲ್ಲ ಪ್ರಾಣಿ- ಪಕ್ಷಿಗಳು ಸ್ಥಳದಲ್ಲಿಯೇ ಸ್ವತಂತ್ರವಾಗಿ ಬದುಕುವಂತೆ ನೋಡಿಕೊಳ್ಳುವುದು ವನ್ಯಜೀವಿ ಸಪ್ತಾಹ ವಿಶೇಷವಾಗಿದೆ. ಭಾರತದಂತಹ ದೇಶದಲ್ಲಿ ಮಾತ್ರ ವನ್ಯಜೀವಿಗಳನ್ನು ಬೆಳೆಸುವ ನೈಸರ್ಗಿಕ ಪ್ರದೇಶವಿದೆ ಎಂದು ತಿಳಿಸಿದರು. ಸಂಸ್ಥೆ ಆಡಳಿತ ಮಂಡಳಿ ಪ್ರತಿನಿಧಿ, ಪ್ರಾಚಾರ್ಯ ಡಾ.ಶಿವಕುಮಾರ್ ಜಿ.ಎಸ್. ಮಾತನಾಡಿ, ಆಧುನಿಕ ಜೀವನಶೈಲಿಯಿಂದ ಕೊರೋನಾದಂಥ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಪರಿಸರ ಸಂರಕ್ಷಣೆಗೆ ಪ್ರಾಚೀನ ಕಾಲದಲ್ಲಿ ನಾಗಪೂಜೆ, ಗಿಡ, ಮರ, ಊರದೇವತೆ ಎಂದು ಪೂಜಿಸುವ ಮೂಲಕ ಪರಿಸರದಲ್ಲಿ ದೈವವನ್ನು ಕಾಣುತ್ತಿದ್ದರು ಎಂದು ತಿಳಿಸಿದರು. ಅರಣ್ಯಾಧಿಕಾರಿ ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಿಕ್ಷಣಾರ್ಥಿಗಳಿಗೆ ಏರ್ಪಡಿಸಿದ್ದ ‘ಚಿತ್ರ ಬರೆಯುವ ಸ್ಪರ್ಧೆ’ಯಲ್ಲಿ ಪ್ರಥಮ ಬಹುಮಾನವನ್ನು ಗೌರಿ ಬಿ., ಪ್ರಿಯದರ್ಶಿನಿ ಎ.ಎಸ್., ದ್ವಿತೀಯ ಬಹುಮಾನವನ್ನು ಭರತ್ ಎಂ.ಎಲ್., ಚಂದನ, ತೃತೀಯ ಬಹುಮಾನವನ್ನು ನಿಶಾ ಪಡೆದರು. ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ‘ಪ್ರಬಂಧ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ತೇಜಸ್ವಿನಿ ಎಸ್.ಎಂ. (ಪ್ರಥಮ ಬಿ.ಎಸ್ಸಿ), ದ್ವಿತೀಯ ಬಹುಮಾನ ಭಾವನಾ ಆರ್. (ಪ್ರಥಮ ಬಿ.ಎಸ್ಸಿ), ತೃತೀಯ ಬಹುಮಾನ ಮೆಹೆತ್ ತಾಜ್ (ಪ್ರಥಮ ಬಿ.ಎಸ್ಸಿ) ಮತ್ತು ವರ್ಷಾಬಾಯಿ (ಪ್ರಥಮ ಬಿ.ಎಸ್ಸಿ), ಚತುರ್ಥ ಬಹುಮಾನವನ್ನು ರೇಖಾ (ಪ್ರಥಮ ಬಿ,ಎಸ್ಸಿ) ಪಡೆದರು. ‘ಸ್ಲೋಗನ್ ಬರೆಯುವ ಸ್ಪರ್ಧೆಯಲ್ಲಿ’ ಪ್ರಥಮ ಬಹುಮಾನವನ್ನು ನಿಶಾ ಎ. ದೊಡ್ಮನಿ (ಪ್ರಥಮ ಬಿ.ಎಸ್ಸಿ), ನಯನಾ ಬಿ. ದ್ವಿತೀಯ ಬಹುಮಾನ, ಸೃಷ್ಠಿ ಟಿ. ತೃತೀಯ ಬಹುಮಾನ ಪಡೆದರು. ಅರಣ್ಯ ಇಲಾಖೆಯಿಂದ ‘ವನ್ಯಜೀವಿ ಸಪ್ತಾಹ ಕುರಿತ ಭಿತ್ತಿಚಿತ್ರಗಳನ್ನು ಗಣ್ಯರು ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಹಾಗೂ ರೋಟರಿ ಕದಂಬ ಶಿಕಾರಿಪುರ ಅಧ್ಯಕ್ಷ ಶಿವಕುಮಾರ್ ಎಂ.ಬಿ. ವಹಿಸಿದ್ದರು. ರೋಟರಿ ಕ್ಲಬ್‌ ನಿಕಟಪೂರ್ವ ಅಧ್ಯಕ್ಷ ರಘು, ರೋ.ಶಿವಮೂರ್ತಿ, ಅರಣ್ಯಾಧಿಕಾರಿ ಅಮಿತ್, ಪ್ರಾಚಾರ್ಯ ಡಾ. ಜಿ.ಆರ್. ಹೆಗಡೆ, ಆಡಳಿತ ಸಮನ್ವಯ ಅಧಿಕಾರಿ ಕುಬೇರಪ್ಪ, ಸಂಸ್ಥೆ ಪ್ರಾಚಾರ್ಯರು, ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಕ್ಷತಾ, ಪೂರ್ಣಿಮಾ ಪ್ರಾರ್ಥಿಸಿದರು. ಹನಿವಾ ಸ್ವಾಗತಿಸಿ, ವರ್ಷಿತಾ ನಿರೂಪಿಸಿ, ಕೀರ್ತಿ ವಂದಿಸಿದರು. - - - -7ಕೆ.ಎಸ್‌.ಕೆ.ಪಿ1: ಶಿಕಾರಿಪುರದ ಕುಮದ್ವತಿ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ನಡೆದ ವನ್ಯಜೀವಿ ಸಪ್ತಾಹ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ದೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.