ಪ್ರತಿಯೊಬ್ಬರೂ ಕನ್ನಡವನ್ನು ವಿಶ್ವದಾದ್ಯಂತ ಪಸರಿಸಲು ಕೈಜೋಡಿಸಿ

| Published : Nov 04 2024, 12:27 AM IST

ಪ್ರತಿಯೊಬ್ಬರೂ ಕನ್ನಡವನ್ನು ವಿಶ್ವದಾದ್ಯಂತ ಪಸರಿಸಲು ಕೈಜೋಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಕೇವಲ ಭಾಷೆಯಲ್ಲ ನಮ್ಮೆಲ್ಲರ ಉಸಿರಾಗಿದೆ. ಕನ್ನಡವನ್ನು ವಿಶ್ವದಾದ್ಯಂತ ಪಸರಿಸಲು ನಾವೆಲ್ಲರೂ ಕೈಜೋಡಿಸಬೇಕೆಂದು ಮುಖ್ಯ ಶಿಕ್ಷಕ ಟಿ.ಕೆ. ಪಟ್ಟಾಭಿರಾಮು ತಿಳಿಸಿದರು.

ತಿಪಟೂರು: ಕನ್ನಡ ಕೇವಲ ಭಾಷೆಯಲ್ಲ ನಮ್ಮೆಲ್ಲರ ಉಸಿರಾಗಿದೆ. ಕನ್ನಡವನ್ನು ವಿಶ್ವದಾದ್ಯಂತ ಪಸರಿಸಲು ನಾವೆಲ್ಲರೂ ಕೈಜೋಡಿಸಬೇಕೆಂದು ಮುಖ್ಯ ಶಿಕ್ಷಕ ಟಿ.ಕೆ. ಪಟ್ಟಾಭಿರಾಮು ತಿಳಿಸಿದರು.

ತಾಲೂಕಿನ ಕರಡಾಳು ಸಂತೆ ಮೈದಾನದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾವೆಲ್ಲರೂ ಅನ್ಯ ಭಾಷೆಯನ್ನು ಗೌರವಿಸುತ್ತಾ ಕನ್ನಡತನವನ್ನ ಪ್ರೀತಿಸಿ, ಕಲಿಸಿ, ಬಳಸಿ, ಬೆಳೆಸಬೇಕಿದೆ. ಕನ್ನಡ ಭಾಷೆಯ ಬಗ್ಗೆ ಹೆಚ್ಚು ಅಭಿಮಾನ ಬೆಳೆಸಿಕೊಂಡು ಇತರ ಭಾಷೆಯನ್ನು ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕೆಂದರು. ಎಸ್‌ಡಿಎಂಸಿ ಅಧ್ಯಕ್ಷ ಕೆ.ಎಲ್. ಗೋಪಿ ಮಾತನಾಡಿ, ಯುವ ಜನತೆ ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿದ್ದು ಕನ್ನಡ ಭಾಷೆ ಮಾತನಾಡುವುದು ನಮಗೆ ಗೌರವ ತರುವುದಿಲ್ಲ ಎಂದುಕೊಂಡಿದ್ದಾರೆ. ಆದರೆ ನಮ್ಮ ತಾಯಿ ಭಾಷೆಯನ್ನ ಮಾತನಾಡಲು ಓದಲು, ಬರೆಯಲು ಹೆಮ್ಮೆ ಪಡಬೇಕು. ಇದು ನಮ್ಮ ತಾಯಿ ನುಡಿ ನಮ್ಮೆಲ್ಲರ ಜೀವನಾಡಿಯಾಗಿದೆ ಎಂದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕನ್ನಡ ನಾಡು-ನುಡಿ ಬಗ್ಗೆ ಗೀತ ಗಾಯನ ನಡೆಯಿತು. ಎಸ್‌ಡಿಎಂಸಿ ಸಂಘದ ಉಪಾಧ್ಯಕ್ಷೆ ಭಾಗ್ಯ, ಸದಸ್ಯರಾದ ರಾಣಿ, ಚೈತನ್ಯ, ಅಮೃತ, ಸತ್ಯಕುಮಾರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿರೂಪಾಕ್ಷ, ಸದಸ್ಯ ಪೃಥ್ವಿ, ಸಹ ಶಿಕ್ಷಕಿ ಕನ್ಯಾಕುಮಾರಿ ಇದ್ದರು.