ಸುತ್ತೂರು ಜಾತ್ರೆಯನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ

| Published : Jan 17 2025, 12:46 AM IST

ಸಾರಾಂಶ

ಚಾಮರಾಜನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಆವರಣದಲ್ಲಿ ಜಾತ್ರಾ ಮಹೋತ್ಸವದ ಪ್ರಚಾರ ರಥಯಾತ್ರೆಗೆ ವಿರಕ್ತ ಮಠದ ಚನ್ನಬಸವಸ್ವಾಮೀಜಿ ಚಾಲನೆ ನೀಡಿದರು.

ಚಾಮರಾಜನಗರ: ಮೈಸೂರು ಜಿಲ್ಲೆಯ ಸುತ್ತೂರು ಕ್ಷೇತ್ರದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಮಹೋತ್ಸವು ಜ.೨೬ ರಿಂದ ೩೧ ರವರಗೆ ೬ ದಿನಗಳ ಕಾಲ ನಡೆಯಲಿದ್ದು ಈ ಜಾತ್ರೆಯನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದು ನಗರದ ವಿರಕ್ತ ಮಠದ ಚನ್ನಬಸವಸ್ವಾಮೀಜಿ ಹೇಳಿದರು.

ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಆವರಣದಲ್ಲಿ ಜಾತ್ರಾ ಮಹೋತ್ಸವದ ಪ್ರಚಾರ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಜಾತ್ಯಾತೀತವಾಗಿ ನಡೆಯುವ ಈ ಸುತ್ತೂರು ಜಾತ್ರಾ ಮಹೋತ್ಸವಕ್ಕೆ ನಾಡಿನ ನಾನಾ ಭಾಗಗಳಿಂದ ಸಾರ್ವಜನಿಕರು ಹಾಗೂ ಭಕ್ತರು ಆಗಮಿಸಲಿದ್ದಾರೆ ತಾಲೂಕಿನ ಜನರು ಹಾಗೂ ಮಠದ ಭಕ್ತರು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮನವಿ ಮಾಡಿದರು.ಜಾತ್ರೆಯಲ್ಲಿ ಸಾಮೂಹಿಕ ವಿವಾಹ, ಭಜನಾ ಮೇಳ, ವಸ್ತು ಪ್ರದರ್ಶನ, ಕೃಷಿಮೇಳ, ದನಗಳ ಜಾತ್ರೆ, ಸಾಂಸ್ಕೃತಿಕ ಮೇಳ, ದೇಶಿ ಆಟಗಳು, ದೋಣಿವಿಹಾರ, ಚಿತ್ರಕಲೆ, ರಂಗೋಲಿ, ಗಾಳಿಪಟ, ಸೋಬಾನೆ ಪದ, ಛಾಯಾಚತ್ರ ಸ್ಪರ್ಧೆಗಳು, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಕೃಷಿಮೇಳ ಹಾಗೂ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕಗಳು, ರಥೋತ್ಸವ, ತೆಪ್ಪೋತ್ಸವ ನಡೆಯುತ್ತವೆ ಎಂದರು.ಈ ಸಂದರ್ಭದಲ್ಲಿ ವೀರಶೈವ ಲಿಂಗಾಯಿತ ಮಹಾಸಭಾದ ಜಿಲ್ಲಾಧ್ಯಕ್ಷ ಮೂಡ್ಲುಪರ ನಂದೀಶ್ ಮತ್ತು ಪದಾಧಿಕಾರಿಗಳು, ಮುಖಂಡರಾದ ಆರ್.ಎಂ. ಸ್ವಾಮಿ, ಬಿ.ಕೆ. ರವಿಕುಮಾರ್, ಹೆಚ್. ಎಸ್. ಬಸವರಾಜು, ನಾಗಮಲ್ಲಪ್ಪ, ಉಮೇಶ್, ಆರ್.ವಿ.ಮಹದೇವಸ್ವಾಮಿ, ಪುಟ್ಟಮಲ್ಲಪ್ಪ, ಮಹದೇವಸ್ವಾಮಿ, ರಾಮಸಮುದ್ರ ಬಾಬು, ದೊರೆಸ್ವಾಮಿ, ಪುರುಷೋತ್ತಮ್, ಬಸವರಾಜು, ರತ್ನಮ್ಮ, ಭಾಗ್ಯ, ಸಿದ್ದರಾಜು, ಲಿಂಗರಾಜು, ಗುರು, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಇದ್ದರು.