ಸಾರಾಂಶ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಅಗತ್ಯಬಿದ್ದರೆ ಬೇರೆ ಭಾಷೆ ಕಲಿಯೋಣ. ಆದರೆ, ಕನ್ನಡ ಎಂಬ ಬೆಳಕು ನಂದಿ ಹೋಗದಂತೆ ಎಚ್ಚರ ವಹಿಸೋಣ ಎಂದು ಹಿರಿಯ ವಕೀಲ ಕೆ.ಪಿ.ಸುರೇಶ್ ಕುಮಾರ್ ತಿಳಿಸಿದರು.ಪಟ್ಟಣದ ಮೇದರಬೀದಿ ನ.ರಾ.ಪುರ-2 ಅಂಗನವಾಡಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿ, ಕನ್ನಡ ಎಂಬುದು ಕೇವಲ ಭಾಷೆಯಲ್ಲ. ನಮ್ಮ ನೆಲ, ನಮ್ಮ, ಗಾಳಿ, ನಮ್ಮ ಸಂಸ್ಕೃತಿ, ನಮ್ಮ ಉಸಿರು. ಕನ್ನಡವೇ ನಮ್ಮ ಆಹಾರ ಪದ್ದತಿ, ನಮ್ಮ ಸಂಸ್ಕಾರ ಗುರುತಿಸುತ್ತದೆ. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷ ತುಂಬಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪಪಂ ಅಧ್ಯಕ್ಷೆ ಜುಬೇದಾ ಮಾತನಾಡಿ, ಕನ್ನಡದಲ್ಲಿ ಮಾತನಾಡಲು ಮುಜುಗರ ಬೇಡ. ಕೆಲವರು ಇಂಗ್ಲೀಷನಲ್ಲಿ ಮಾತನಾಡಿದರೆ ಹೆಚ್ಚು ಗೌರವ ಎಂದು ತಿಳಿದಿದ್ದಾರೆ. ಉದ್ಯೋಗಕ್ಕೆ ಇಂಗ್ಲಿಷ್ ಅನಿವಾರ್ಯ ಇರಬಹುದು. ಆದರೆ, ನಿತ್ಯ ಕನ್ನಡ ಮಾತನಾಡಬೇಕು. ಸರ್ಕಾರಿ ಶಾಲೆಯಲ್ಲಿ ಕಲಿತವರಿಗೆ ಮಾತ್ರ ಉದ್ಯೋಗ ಎಂದು ಸರ್ಕಾರ ಕಾನೂನು ತರಬೇಕು ಎಂದು ಸಲಹೆ ನೀಡಿದರು. ಮೇದರ ಬೀದಿ ನ.ರಾ.ಪುರ - 2 ಅಂಗನವಾಡಿಗೆ ಪಟ್ಟಣ ಪಂಚಾಯಿತಿಯಿಂದ ಇಂಟರ್ ಲಾಕ್ ಹಾಕಲು ₹1 ಲಕ್ಷ ಮಂಜೂರು ಮಾಡಿದ್ದೇವೆ ಎಂದರು.ಸಿಡಿಪಿಒ ಇಲಾಖೆ ಮೇಲ್ವೀಚಾರಕಿ ಸಾವಿತ್ರಿ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹಿಳೆಯರ ಸುರಕ್ಷಿತೆಗೆ ಅಕ್ಕಪಡೆ ಜಾರಿಗೆ ತಂದಿದ್ದು ಇದು ಪೊಲೀಸರ ರೀತಿ ಕೆಲಸ ಮಾಡುತ್ತದೆ.ಈವರೆಗೆ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಚುಡಾಯಿಸುವುದು, ಪೋಕ್ಸೋ ಕಾಯ್ದೆ ಕೇಸುಗಳನ್ನು ಸಿಡಿಪಿಒ ಇಲಾಖೆ ನಿರ್ವಹಿಸುತ್ತಿತ್ತು. ಇನ್ನು ಮುಂದೆ ಅಕ್ಕ ಪಡೆಗೆ ಮಾಹಿತಿ ನೀಡಿದರೆ ತಕ್ಷಣ ಅಲ್ಲಿಗೆ ಬಂದು ವಿಚಾರಣೆ ನಡೆಸಿ ರಕ್ಷಣೆ ನೀಡುತ್ತಾರೆ
1975 ರ ಅ. 2 ರಂದು ಪ್ರಾರಂಭವಾದ ಅಂಗನವಾಡಿಗೆ 50 ವರ್ಷ ತುಂಬಿದ್ದು ನ.19 ರಂದು ಬೆಂಗಳೂರಿನಲ್ಲಿ ಸುವರ್ಣ ಸಂಭ್ರಮ ನಡೆಯಲಿದೆ. ಆದ್ದರಿಂದ ರಾಜ್ಯಾದ್ಯಂತ ನ.19 ರಂದು ಅಂಗನವಾಡಿ ತೆರೆಯುವುದಿಲ್ಲ. ಎಲ್ಲಾ ಕಾರ್ಯಕರ್ತರು ಬೆಂಗಳೂರಿಗೆ ಹೋಗಬೇಕಾಗಿದೆ ಎಂದರು.ಪೇಟೆ ಶಾಲೆ ಮಕ್ಕಳು ನಾಡಗೀತೆ ಹಾಡಿದರು. ಕಸಾಪ ಸದಸ್ಯರು ಕನ್ನಡ ಗೀತೆಗಳನ್ನು ಹಾಡಿದರು. ಅತಿಥಿಗಳು ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಅಂಗನವಾಡಿ ಪುಟಾಣಿ ಮಕ್ಕಳು ಕುವೆಂಪು, ಸ್ವಾಮಿ ವಿವೇಕಾನಂದ, ಕಿತ್ತೂರು ರಾಣಿ ಚೆನ್ನಮ್ಮ, ತಾಯಿ ಭುವನೇಶ್ವರಿ,ಬಸವಣ್ಣ ಮುಂತಾದವರ ವೇಷ ತೊಟ್ಟು ಸಂಭ್ರಮಿಸಿದರು.
ಸಭೆಯಲ್ಲಿ ಪಪಂ ಉಪಾಧ್ಯಕ್ಷೆ ಉಮಾ ಕೇಶವ್, ಸದಸ್ಯೆ ಸುರೈಯಾ ಭಾನು, ತಾಲೂಕು ಬಂಟರ ಸಂಘದ ಮಹಿಳಾ ಘಟಕದ ಉಪಾಧ್ಯಕ್ಷೆ ಸುಜಾತಾ, ತಾಲೂಕು ಕಜಾಪ ಸದಸ್ಯರಾದ ಸುಲೋಚನಾ, ಸುನೀತಾ, ಲಲಿತಮ್ಮ, ಚಂದ್ರಾವತಿ, ನ.ರಾ.ಪುರ ಅಂಗನವಾಡಿ -2 ರ ಅಂಗನವಾಡಿ ಕಾರ್ಯಕರ್ತೆ ಅನಿತಾ, ಸಹಾಯಕಿ ಆಶಾ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))