ಬೀರೂರು. ‘ನಮ್ಮ ದೇಶ ಭಾರತ ಸಾವಿರಾರು ವರ್ಷಗಳಿಂದ ಗುಲಾಮಗಿರಿಯಲ್ಲಿ ಸಾಗುತ್ತಾ ಅತಂತ್ರದಿಂದ ಸ್ವಾತಂತ್ರ್ಯ ಬಂದು ಗಣರಾಜ್ಯವಾಗಿ ಇಂದಿಗೆ 77 ವರ್ಷಗಳಾಯಿತು. ರಾಷ್ಟ್ರೀಯ ಹಬ್ಬಗಳ ಸಂಭ್ರಮ ಮತ್ತು ವೈಭವದ ಆಚರಣೆಗಳ ಮೂಲಕ ಆತ್ಮವಿಶ್ವಾಸದಿಂದ ಆದರ್ಶ ಭಾರತ ನಿರ್ಮಾಣದಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಹೇಳಿದರು.

- ಕೆ.ಎಲ್.ಕೆ. ಕಾಲೇಜು ಮೈದಾನದಲ್ಲಿ 77ನೇ ಅದ್ದೂರಿ ಗಣರಾಜ್ಯೋತ್ಸವ ಆಚರಣೆ

ಕನ್ನಡಪ್ರಭ ವಾರ್ತೆ,ಬೀರೂರು. ‘ನಮ್ಮ ದೇಶ ಭಾರತ ಸಾವಿರಾರು ವರ್ಷಗಳಿಂದ ಗುಲಾಮಗಿರಿಯಲ್ಲಿ ಸಾಗುತ್ತಾ ಅತಂತ್ರದಿಂದ ಸ್ವಾತಂತ್ರ್ಯ ಬಂದು ಗಣರಾಜ್ಯವಾಗಿ ಇಂದಿಗೆ 77 ವರ್ಷಗಳಾಯಿತು. ರಾಷ್ಟ್ರೀಯ ಹಬ್ಬಗಳ ಸಂಭ್ರಮ ಮತ್ತು ವೈಭವದ ಆಚರಣೆಗಳ ಮೂಲಕ ಆತ್ಮವಿಶ್ವಾಸದಿಂದ ಆದರ್ಶ ಭಾರತ ನಿರ್ಮಾಣದಲ್ಲಿ ನಮ್ಮನ್ನು ತೊಡಗಿಸಿಕೊಳ್ಳೋಣ ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಹೇಳಿದರು. ಸೋಮವಾರ ಕೆ.ಎಲ್.ಕೆ.ಕಾಲೇಜು ಮೈದಾನದಲ್ಲಿ ನಡೆದ 77ನೇ ಗಣರಾಜ್ಯೋತ್ಸವದ ಆಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. 1950 ಜ. 26 ಭಾರತದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿ ಪ್ರಜಾಪ್ರಭುತ್ವದ ನ್ಯಾಯಾಂಗ ಶಾಸಕಾಂಗ ಮತ್ತು ಕಾರ್ಯಾಂಗಗಳ ಸಿದ್ದಾಂತಗಳು ಹೇಗಿರಬೇಕೆಂಬುದನ್ನು ತಿಳಿಸಿದಂತಹ ನಮ್ಮ ಸಂವಿಧಾನ ಸಮಗ್ರ ಮಾಹಿತಿ ಭಂಡಾರವಾಗಿದೆ. ಸಂವಿಧಾನ ಜಾರಿಗೆ ಬಂದ ನಂತರದಲ್ಲಿ ಪ್ರಜಾಪ್ರಭುತ್ವದ ಪ್ರಜೆ ಗಳದ್ದೇ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಭಾರತೀಯರಾದ ನಾವುಗಳು ಈ ಸಂದರ್ಭದಲ್ಲಿ ತಮ್ಮ ತ್ಯಾಗ ಬಲಿದಾನಗಳಿಂದ ನಿತ್ಯದ ಹಗಲಿರುಳು ನಮ್ಮ ಕಾಯುತ್ತಿರುವ ನಮ್ಮ ವೀರ ಯೋಧರಿಗೆ ನಮನ ಸಲ್ಲಿಸುವ ಮೂಲಕ ಉತ್ಸಾಹ, ಸಂಭ್ರಮ ಸಡಗರದಿಂದ ಆಚರಿಸೋಣ ಎಂದು ಹೇಳಿದರು.

ಸರ್ದಾರ್‌ವಲ್ಲಭ ಬಾಯಿ ಪಟೇಲ್, ಮಹಾತ್ಮಗಾಂಧಿ, ಸುಭಾಷ್‌ಚಂದ್ರöಬೋಸ್, ಅಬ್ದುಲ್‌ಕಲಾಂನಂತಹ ಮಹಾನ್ ನಾಯಕರು ಜನ್ಮತಳೆದಂತಹ ನಮ್ಮ ಭಾರತ ದೇಶದಲ್ಲಿ ನಮ್ಮ ತಾಯಿ ನಮ್ಮ ದೇಶವೆಂಬ ಅಭಿಮಾನ ನಮ್ಮಲ್ಲಿ ಮೊಳಗು ವಂತಾಗಬೇಕು. 29 ರಾಜ್ಯಗಳ 6400 ಜಾತಿಗಳಿರುವ ನಮ್ಮ ದೇಶದಲ್ಲಿ 22 ಪ್ರಮುಖ ಭಾಷೆಗಳಿರುವ ನಮ್ಮ ದೇಶದಲ್ಲಿ ಒಂದೇ ಸಂವಿಧಾನವಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿಯಾಗಿದೆ. ದೇಶ, ಭಾಷೆ ಮತ್ತು ನಾಡು ನುಡಿಯ ಬಗ್ಗೆ ಯಾವುದೆ ಸಣ್ಣ ತೊಡಕುಗಳು ಬಂದರೂ ನಾವೆಲ್ಲರೂ ಜಾತಿ ಮತ ಬೇದ ಮರೆತು ನಮ್ಮ ನಾಡು ಸಂರಕ್ಷಿಸುವ ಬಗ್ಗೆ ಒಂದಾಗೋಣ ಎಂದು ತಿಳಿಸಿದರು.ಶಾಸಕ ಕೆ.ಎಸ್.ಆನಂದ್ ಬೀರೂರು ಪಟ್ಟಣದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಈಗಾಗಲೇ ಕಾರ್ಯರೂಪಕ್ಕೆ ತಂದು ಉದ್ಘಾಟನೆ ಮಾಡಿರುವುದು ಜನತೆಗೆ ಸಂತಸ ತಂದಿದೆ. ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ಗಿಡ ನೆಟ್ಟು ಪರಿಸರ ಸಂರಕ್ಷಿಸಿರಿ. ಕಸವನ್ನು ವಿಂಗಡಿಸಿ ಪುರಸಭೆಯಿಂದ ಬರುವ ಕಸದ ವಾಹನಗಳಿಗೆ ನೀಡಲು ಕೋರಿದ ಅವರು, ಈ ದಿನಗಳಲ್ಲಿ ಅತಿ ಹೆಚ್ಚು ಮಾರಕವಾಗಿರುವ ಪ್ಲಾಸ್ಟಿಕ್‌ನ್ನು ತ್ಯಜಿಸಿ ಬಟ್ಟೆ ಕೈಚೀಲಗಳನ್ನು ಬಳಸಿ ಸ್ವಚ್ಚತೆ ಕಾಪಾಡಿರಿ ಎಂದರು.ಪುರಸಭೆ ಆಶ್ರಯ ಕಮಿಟಿ ಸದಸ್ಯ ಎನ್.ಮುಬಾರಕ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ದೇ ಶದ ಏಳಿಗೆ ಕನಸು ಹೊತ್ತು ಸಂವಿಧಾನವನ್ನು ನೀಡಿದ್ದಾರೆ. ನಮ್ಮ ಸಂವಿಧಾನ ಜಗತ್ತಿನಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನ. . ಈ ನಮ್ಮ ಸಂವಿಧಾನದ ರಚನೆಗೆ ಒಟ್ಟು 2 ವರ್ಷ 11 ತಿಂಗಳು, 18 ದಿನ ಬೇಕಾಯಿತು. ಇದು ನಮಗೆ ಪ್ರಮುಖವಾಗಿ ಸಮಾನತೆ, ಭ್ರಾತೃತ್ವ ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯವನ್ನು ನೀಡಿದೆ. ಪ್ರತಿಯೊಬ್ಬ ಭಾರತೀಯನೂ ಗೌರವದಿಂದ ಬಾಳಲು ಸಂವಿಧಾನವೇ ರಕ್ಷಾಕವಚವಾಗಿದ್ದು, ಇದರಿಂದಾಗಿ ನಾವೆಲ್ಲ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ ಎಂದರು. ಆಕರ್ಷಕ ಮಕ್ಕಳ ಪಥಸಂಚಲನಕ್ಕೆ ಪುರಸಭೆ ಮತ್ತು ಪೊಲೀಸ್ ಇಲಾಖೆಯಿಂದ ಬಹುಮಾನ ನೀಡಲಾಯಿತು. ಪುಟಾಣಿ ಮಕ್ಕಳಿಂದ ರಾಷ್ಟಿçÃಯ ಭಾವೈಕ್ಯತೆ ಸಾರುವ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ನಡೆಸಿಕೊಟ್ಟು ಪ್ರೀತಿಗೆ ಪಾತ್ರರಾದರು.ವೇದಿಕೆಯಲ್ಲಿ ಬೀರೂರು ದೇವರಾಜ್ ಸಿಪಿಐ ಶ್ರೀಕಾಂತ್ ಪಿಎಸ್‌ಐ ಡಿ.ವಿ.ತಿಪ್ಪೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರ‍್ಹನುದ್ದೀನ್ ಚೋಪ್ದಾರ್, ಆಶ್ರಯ ಕಮಿಟಿ ಸದಸ್ಯರಾದ ಬಿ.ಟಿ.ಚಂದ್ರಶೇಖರ್, ಬಿ.ಜಿ.ಮೈಲಾರಪ್ಪ, ಪುರಸಭೆ ಮಾಜಿ ಸದಸ್ಯರಾದ ಮಾನಿಕ್ ಭಾಷ, ಆರೋಗ್ಯ ನಿರೀಕ್ಷಕ ಲಕ್ಷö್ಮಣ್, ಇಂಜಿನಿಯರ್ ವೀಣಾ, ಗಿರಿರಾಜ್, ಜಯಮ್ಮ, ಬಿ.ಆರ್.ಸಿ ಶೇಖರಪ್ಪ, ವಸಂತ್, ಇಸಿಒ ಜಯದೇವಪ್ಪ ಸೇರಿದಂತೆ ಪುರಸಭೆ ಸಿಬ್ಬಂದಿಗಳು, ಸಾರ್ವಜನಿಕರು ಸೇರಿದಂತೆ ಮತ್ತಿತರರು ಇದ್ದರು.ಇದಕ್ಕು ಮುಂಚೆ ಪುರಸಭಾ ಕಚೇರಿ ಮುಂಭಾಗದಲ್ಲಿ ಪರಿಸರ ಅಭಿಯಂತರ ಮೊಹಮ್ಮದ್ ನೂರುದ್ದೀನ್ ಧ್ವಜಾರೋಹಣ ನೇರವೇರಸಿ, ಗಣರಾಜ್ಯೋತ್ಸವಕ್ಕೆ ಆಗಮಿಸಿದ ಸರ್ವರಿಗು ಶುಭಕೋರಿದರು. 26 ಬೀರೂರು1ಬೀರೂರಿನ ಕೆಎಲ್‌ಕೆ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಭಾನುವಾರ ನಡೆದ 77 ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ನೆರವೇರಿಸಿದರು. ಸಿಪಿಐ ಶ್ರೀಕಾಂತ್, ಬಿಇಒ ರ‍್ಹನುದ್ದೀನ್ ಚೋಪ್ದಾರ್ ಇದ್ದರು.26 ಬೀರೂರು 2ಬೀರೂರಿನ ಕೆಎಲ್‌ಕೆ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ನಡೆದ 77ನೇ ಗಣರಾಜ್ಯೋತ್ಸವದ ಸಮಾರಂಭದಲ್ಲಿ ಪೊಲೀಸ್ ತಂಡದಿಂದಾ ಧ್ವಜಾವಂದನೆ ನಡೆಯಿತು.