ಸಾರಾಂಶ
ಲಕ್ಷ್ಮೇಶ್ವರ: ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ವತಿಯಿಂದ ಸಮಾಜದ ಹರಿಹರ ಮತ್ತು ಕೂಡಲಸಂಗಮ ಉಭಯ ಶ್ರೀಗಳ ಸಾನ್ನಿಧ್ಯದಲ್ಲಿ ಪಟ್ಟಣದ ಸೋಮೇಶ್ವರ ತೇರಿನ ಮನೆ ಆವರಣದಲ್ಲಿ ನವೆಂಬರ್ ತಿಂಗಳಲ್ಲಿ ತಾಲೂಕು ಮಟ್ಟದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮನ ವಿಜಯೋತ್ಸವ ಮತ್ತು ಜಯಂತ್ಯುತ್ಸವ ಸಮಾರಂಭ ಆಯೋಜಿಸಲಾಗುವುದು ಎಂದು ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ ತಿಳಿಸಿದರು.
ಬುಧವಾರ ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಚೆನ್ನಮ್ಮನ ಜಯಂತಿ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿಗೆ ಸಚಿವರು, ಸಂಸದರು, ಶಾಸಕರು, ರಾಜ್ಯ ಸಂಘದ ಎಲ್ಲ ಪದಾಧಿಕಾರಿಗಳು, ಪಂಚಮಸಾಲಿ ಮತ್ತು ಇತರೆ ಸಮಾಜದ ಹಿರಿಯರು, ಗಣ್ಯ ಮಾನ್ಯರು ಸೇರಿ ಜಾತ್ಯತೀತ, ಪಕ್ಷಾತೀತವಾಗಿ ಸಮಾರಂಭಕ್ಕೆ ಆಹ್ವಾನಿಸಲಾಗುವುದು. ಸಮಾರಂಭಕ್ಕೆ ವಿವಿಧ ಜಿಲ್ಲೆ, ತಾಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಮಾಜದವರು ಪಾಲ್ಗೊಳ್ಳಲಿದ್ದಾರೆ ಎಂದರು.
ಪಂಚಮಸಾಲಿ ಸಂಘದ ರೈತ ಘಟಕ, ಯುವ ಘಟಕ, ಮಹಿಳಾ ಘಟಕ, ನಗರ ಘಟಕ, ವಾರ್ಡ್ ಘಟಕ, ಗ್ರಾಮ ಘಟಕಗಳ ಪದಾಧಿಕಾರಿಗಳು, ಗುರು- ಹಿರಿಯರು, ಮಹಿಳೆಯರು, ಯುವಕರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು. ಪಂಚಮಸಾಲಿ ಸೊಸೈಟಿಯ ಅಧ್ಯಕ್ಷ ಎಸ್.ಪಿ. ಪಾಟೀಲ, ಮಾಜಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ವಿಜಯಣ್ಣ ಮಹಾಂತಶೆಟ್ಟರ, ಸೋಮಣ್ಣ ಡಾಣಗಲ್, ಎಂ.ಎಸ್. ದೊಡ್ಡಗೌಡ್ರ, ಡಿ.ಬಿ. ಬಳಿಗಾರ ಮಾತನಾಡಿ, ದೇಶದ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ವೀರರಾಣಿ ಕಿತ್ತೂರು ಚೆನ್ನಮ್ಮ ದೇಶದ ಹೆಮ್ಮೆ ಎಂದರು.ಸಭೆಯಲ್ಲಿ ಸಮಾಜಕ್ಕೆ ೨ಎ ಮೀಸಲಾತಿ ಪಡೆಯುವುದು ಸೇರಿ ವಿವಿಧ ಬೇಡಿಕೆ ಸಲ್ಲಿಸುವ ಬಗ್ಗೆ ಹಾಗೂ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಮಾಡುವ ಕುರಿತು ಚರ್ಚಿಸಲಾಯಿತು.ಸುರೇಶ ರಾಚನಾಯ್ಕರ, ನೀಲಪ್ಪ ಕರ್ಜೆಕಣ್ಣವರ, ಮಹೇಶ ಹೊಗೆಸೊಪ್ಪಿನ, ಪ್ರವೀಣ ಬಾಳಿಕಾಯಿ, ಮಾದೇವಗೌಡ ನರಸಮ್ಮನವರ, ಬಸವರಾಜ ಹೊಗೆಸೊಪ್ಪಿನ, ಶರಣು ಗೋಡಿ, ಮಂಜುನಾಥ ಗೌರಿ, ಚನ್ನಪ್ಪ ಚಿಂಚಲಿ, ಬಂಗಾರಪ್ಪ ಮುಳಗುಂದ, ಬಸಣ್ಣ ಹಂಜಿ, ನಾಗಯ್ಯ ಮಠಪತಿ, ಶಾರದಾ ಮಹಾಂತಶೆಟ್ಟರ, ಪ್ರಕಾಶ ಶಿರಹಟ್ಟಿ, ನಿಂಗಪ್ಪ ಬನ್ನಿ, ಮಾದೇವಪ್ಪ ಅಣ್ಣಿಗೇರಿ, ರಾಜು ಅರಳಿ, ಡಿ.ವೈ. ಹುನಗುಂದ, ಫಕ್ಕಿರೇಶ ಕವಲೂರ, ಎಸ್.ಕೆ. ಪಾಟೀಲ, ಚನ್ನಪ್ಪ ಕರಿಯತ್ತಿನ, ಕಾಶಪ್ಪ ಮುಳಗುಂದ, ಶಿವಪ್ಪ ಕಟಗಿ, ವಿರುಪಾಕ್ಷಪ್ಪ ಮರಳಿಹಳ್ಳಿ, ಜಯಶ್ರೀ ಮೆಳ್ಳಿಗೇರಿ, ಲಕ್ಷ್ಮವ್ವ ಆಚಾರ, ಜಿ.ಎ. ಹುಲಸೂರ, ಪೂರ್ಣಿಮಾ ಬಳಿಗಾರ, ಕಾವ್ಯಾ ದೇಸಾಯಿ, ವಿ.ಬಿ. ಮೇಲ್ಮುರಿ, ಶಿವಾನಂದ ಬನ್ನಿಮಟ್ಟಿ ಸೇರಿ ವಿವಿಧ ಗ್ರಾಮಗಳ ಹಿರಿಯರು ಪಾಲ್ಗೊಂಡಿದ್ದರು. ಚಂದ್ರು ಹಂಪಣ್ಣವರ, ಚಂದ್ರು ಮಾಗಡಿ ನಿರೂಪಿಸಿದರು.
;Resize=(128,128))
;Resize=(128,128))