ತಾರತಮ್ಯವಿಲ್ಲದೆ ಸಾಮರಸ್ಯದಿಂದ ಹಬ್ಬ ಆಚರಿಸೋಣ: ಬಾಬಾಸಾಹೇಬ ಪಾಟೀಲ

| Published : Sep 20 2024, 01:35 AM IST

ತಾರತಮ್ಯವಿಲ್ಲದೆ ಸಾಮರಸ್ಯದಿಂದ ಹಬ್ಬ ಆಚರಿಸೋಣ: ಬಾಬಾಸಾಹೇಬ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಹಬ್ಬ ಹರಿದಿನಗಳನ್ನು ಪಕ್ಷಭೇದ ಹಾಗೂ ಜಾತಿ ಭೇದ ಮರೆತು ಸಾಮರಸ್ಯದಿಂದ ಆಚರಿಸಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಹಬ್ಬ ಹರಿದಿನಗಳನ್ನು ಪಕ್ಷಭೇದ ಹಾಗೂ ಜಾತಿ ಭೇದ ಮರೆತು ಸಾಮರಸ್ಯದಿಂದ ಆಚರಿಸಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಸಲಹೆ ನೀಡಿದರು.

ಗಣೇಶೋತ್ಸವ ನಿಮಿತ್ತ ಮಂಗಳವಾರ ಪಟ್ಟಣದ ಅರಳಿಕಟ್ಟೆ ವೃತ್ತದಲ್ಲಿ ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯತಿ ಸಹಯೋಗದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರ ಸಹಕಾರದಿಂದ ಗಣೇಶ ಉತ್ಸವ ಯಶಸ್ವಿಯಾಗಿದೆ. ಎಲ್ಲ ಮಂಡಳಿಗಳು ಅಚ್ಚುಕಟ್ಟಾಗಿ ವ್ಯವಸ್ಥೆ ಕೈಗೊಂಡು ಸಾಮರಸ್ಯದಿಂದ ಗಣೇಶೋತ್ಸವ ಆಚರಣೆ ಮಾಡಿರುವುದು ಮಾದರಿಯಾಗಿದೆ. ಮುಂಬರುವ ಐತಿಹಾಸಿಕ ೨೦೦ನೇ ಚನ್ನಮ್ಮನ ವಿಜಯೋತ್ಸವವನ್ನು ನಿಮ್ಮೆಲ್ಲರ ಸಲಹೆ ಮೇರೆಗೆ ಎಲ್ಲರೂ ಒಗ್ಗೂಡಿ ಅದ್ಧೂರಿಯಿಂದ ಆಚರಿಸೋಣ ಎಂದು ಹೇಳಿದರು.

ಕೆಎಂಎಫ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಬಸವರಾಜ ಪರವಣ್ಣವರ, ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಯಾವುದೇ ಕೆಲಸ ಮಾಡಿದರೂ ಅದು ಯಶಸ್ಸು ಕಾಣಲು ಸಾಧ್ಯ ಎಂಬುವುದಕ್ಕೆ ಗಣೇಶ ಉತ್ಸವವೇ ನಿದರ್ಶನ. ಅಭಿವೃದ್ಧಿ ವಿಷಯದಲ್ಲಿ ಪಕ್ಷಭೇದ ಮರೆತು ಕೆಲಸ ಮಾಡಬೇಕು. ಇದು ಯಾವ ಪಕ್ಷದ ಉತ್ಸವವೂ ಅಲ್ಲ, ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಹಾಲಿ ಶಾಸಕರು ಉತ್ಸವಕ್ಕೆ ಶಕ್ತಿ ಮೀರಿ ಅನುದಾನ ತಂದರೆ ವಿಜೃಂಭಣೆಯ ಆಚರಣೆಗೆ ಆನುಕೂಲ ಆಗುತ್ತದೆ ಎಂದು ಹೇಳಿದರು.

ಸಿಪಿಐ ಶಿವಾನಂದ ಗುಡಗನಟ್ಟಿ ಮಾತನಾಡಿದರು.

ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿಯ ಶ್ರೀಗುರು ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ಬೈಲೂರಿನ ಬಾವುದ್ದೀನ್‌ (ಮೌಲಾನಾ) ಮಕಾನದಾರ ವೇದಿಕೆ ಮೇಲಿದ್ದರು.

ಗಣೇಶ ಮಂಡಳಿಗಳ ಪ್ರಮುಖರಿಗೆ ಸನ್ಮಾನಿಸಲಾಯಿತು‌. ನಂತರ ಪಿ.ಕೆ. ತಂಡದವರಿಂದ ರಸಮಂಜರಿ ನಡೆಯಿತು.

ಡಿವೈಎಸ್ಪಿ ರವಿ ನಾಯಕ, ಪಿಎಸ್ಐ ಪ್ರವೀಣ ಗಂಗೋಳ, ಪಪಂ ಮುಖ್ಯಾಧಿಕಾರಿ ಮಲ್ಲಯ್ಯಾ ಹಿರೇಮಠ, ಕೆಇಬಿ ಎಇಇ ಮಹೇಶ್ವರ ಹಿರೇಮಠ, ಮುಸ್ತಾಕ್‌ ಸುತಗಟ್ಟಿ, ಎಫ್.ಎಂ. ಜಕಾತಿ, ಅಶ್ಪಾಕ್‌ ಹವಾಲ್ದಾರ, ಸುನೀಲ್ ಘೀವಾರಿ, ಕೃಷ್ಣಾ ಬಾಳೇಕುಂದರಗಿ, ಸಿದ್ದು ಮಾರಿಹಾಳ, ಉಮೇಶ ಹುಂಬಿ, ಪರ್ವೇಜ್‌ ಹವಾಲ್ದಾರ, ರಮೇಶ ಮೊಕಾಶಿ, ಕಿರಣ ವಾಳದ, ಸೇರಿದಂತೆ ಸಾರೆ. ರ್ವಜನಿಕರು ಇದ್ದರು.