ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಈ ಹಿನ್ನಲೆಯಲ್ಲಿ ಮಕ್ಕಳು ಸಣ್ಣವರಿರುವಾಗಲೇ ಅವರಲ್ಲಿ ಸ್ವಚ್ಛತೆಯ ಅರಿವು ಮತ್ತು ಜಾಗೃತಿಯನ್ನು ಮೂಡಿಸುವುದು ಅತ್ಯಂತ ಅವಶ್ಯ ಹಾಗೂ ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ನಿರ್ಣಾಯಕ ಹಾಗೂ ಮಹತ್ವವಾದದ್ದು ಎಂದು ವಿಶ್ವಕರ್ಮ ಬ್ಯಾಂಕಿನ ನಿರ್ದೇಶಕ ಜಗದೀಶ್ ಆಚಾರ್ಯ ಕಪ್ಪೆಟ್ಟು ಹೇಳಿದರು.
ಉಡುಪಿ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಈ ಹಿನ್ನಲೆಯಲ್ಲಿ ಮಕ್ಕಳು ಸಣ್ಣವರಿರುವಾಗಲೇ ಅವರಲ್ಲಿ ಸ್ವಚ್ಛತೆಯ ಅರಿವು ಮತ್ತು ಜಾಗೃತಿಯನ್ನು ಮೂಡಿಸುವುದು ಅತ್ಯಂತ ಅವಶ್ಯ ಹಾಗೂ ಈ ನಿಟ್ಟಿನಲ್ಲಿ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ನಿರ್ಣಾಯಕ ಹಾಗೂ ಮಹತ್ವವಾದದ್ದು ಎಂದು ವಿಶ್ವಕರ್ಮ ಬ್ಯಾಂಕಿನ ನಿರ್ದೇಶಕ ಜಗದೀಶ್ ಆಚಾರ್ಯ ಕಪ್ಪೆಟ್ಟು ಹೇಳಿದರು.
ಅವರು ವಿಶ್ವಕರ್ಮ ಬ್ಯಾಂಕಿನ ಉಡುಪಿ ಶಾಖೆಯ ವತಿಯಿಂದ ಸ್ವಚ್ಛತಾ ಹೀ ಸೇವಾ ಎಂಬ ಧ್ಯೇಯದೊಂದಿಗೆ ಉಡುಪಿಯಲ್ಲಿ ನಡೆದ 38ನೇ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಗವಹಿಸಿದ ಸ್ವಯಂ ಸೇವಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಯುವಕ ವೃಂದ ಮಠದಬೆಟ್ಟು ಇದರ ಅಧ್ಯಕ್ಷ ಆನಂದ್ ಸುವರ್ಣ ಹಾಗೂ ಸರಸ್ವತಿ ಅನುಧಾನಿತಾ ಶಾಲೆ ಬನ್ನಂಜೆ ಇದರ ಶಿಕ್ಷಕಿ ಶ್ರೀಮತಿ ಶಾಂತಿಲತಾ ಹಸಿರು ನಿಶಾನೆಯನ್ನು ತೋರಿಸಿ ಶ್ರಮದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಉಡುಪಿಯ ಬನ್ನಂಜೆ ಮಠದಬೆಟ್ಟು ಪರಿಸರದಲ್ಲಿ ಸ್ವಚ್ಛತೆಯ ಜಾಗೃತಿಯ ನಿಟ್ಟಿನಲ್ಲಿ ಶ್ರಮದಾನ ಕಾರ್ಯಕ್ರಮವು ನಡೆಯಿತು.
ವಿಶ್ವಕರ್ಮ ಬ್ಯಾಂಕಿನ ಉಪಾಧ್ಯಾಕ್ಷ ಜಗದೀಶ್ ಪಡುಪಣಂಬೂರು, ನಿರ್ದೇಶಕ ಜಗದೀಶ ಆಚಾರ್ಯ ಕಪ್ಪೆಟ್ಟು , ಮಠದಬೆಟ್ಟು ಯುವಕ ವೃಂದದ ಪ್ರಮುಖರಾದ ತಾರಾ ಸತೀಶ್, ಪವನ್, ಸ್ಥಳೀಯರಾದ ಜಯಕರ ಶೆಟ್ಟಿ, ಅನಂತ್ ಶೆಣೈ, ಮೋಹನ್, ಶ್ರೀಕಾಂತ್, ಸರಸ್ವತಿ ಅನುಧಾನಿತಾ ಶಾಲೆ ಬನ್ನಂಜೆ ಶಾಲೆಯ ಶಿಕ್ಷಕಿ ಸುಜಾತಾ, ಅಂಗನವಾಡಿ ಶಿಕ್ಷಕಿ ಹರೀಣಾಕ್ಷಿ, ವಿಶ್ವಕರ್ಮ ಸಹಕಾರ ಬ್ಯಾಂಕಿನ ಉಡುಪಿ ಶಾಖಾಧಿಕಾರಿ ಸುದೇಶ್ ಹಾಗೂ ಸಿಬ್ಬಂದಿಗಳು ಶ್ರಮದಾನದಲ್ಲಿ ಕೈ ಜೋಡಿಸಿ ಸಹಕರಿಸಿದರು.