ಸಾರಾಂಶ
ಸಿರವಾರ ಪಟ್ಟಣದ ಪ್ರವಾಸಿ ಮಂದಿರ ಹತ್ತಿರವಿರುವ ಛತ್ರಪತಿ ಶಿವಾಜಿ ವೃತ್ತದ ಛತ್ರಪತಿ ಶಿವಾಜಿ ನಾಮಫಲಕ್ಕೆ ಶಿವಾಜಿ ಜಯಂತಿ ಅಂಗವಾಗಿ ಕ್ಷತ್ರಿಯ ಮರಾಠ ಸಮಾಜ ಮತ್ತು ಶಿವಾಜಿ ಅಭಿಮಾನಿಗಳ ಬಳಗದಿಂದ ಶಿವಾಜಿ ನಾಮಫಲಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಸಿರವಾರ
ಚಿಕ್ಕ ವಯಸ್ಸಿನಲ್ಲಿಯೇ ತಾಯಿಯ ಆಸೆಯಂತೆ ಧರ್ಮ ರಕ್ಷಣೆ ಮಾಡಿ ಹಿಂದೂ ಸಾಮ್ರಾಜ್ಯವನ್ನು ಮರು ಸ್ಥಾಪನೆ ಮಾಡಿದ ಛತ್ರಪತಿ ಶಿವಾಜಿ ಮಹಾರಾಜರ ಧರ್ಮಾಭಿಮಾನವನ್ನು ನಾವೆಲ್ಲರೂ ಅಳವಡಿಸಿಕೊಂಡು ಧರ್ಮ ರಕ್ಷಣೆಗೆ ನಿಲ್ಲೋಣ ಎಂದು ಕ್ಷತ್ರಿಯ ಮರಾಠ ಸಮಾಜದ ತಾಲೂಕು ಘಟಕದ ಅಧ್ಯಕ್ಷ ಪ್ರಶಾಂತ ಗಾಯಕವಾಡ ಹೇಳಿದರು.ಶಿವಾಜಿ ಜಯಂತಿ ಅಂಗವಾಗಿ ಕ್ಷತ್ರಿಯ ಮರಾಠ ಸಮಾಜ ಮತ್ತು ಶಿವಾಜಿ ಅಭಿಮಾನಿಗಳ ಬಳಗದಿಂದ ಸೋಮವಾರ ಪಟ್ಟಣದ ಪ್ರವಾಸಿ ಮಂದಿರ ಹತ್ತಿರವಿರುವ ಛತ್ರಪತಿ ಶಿವಾಜಿ ವೃತ್ತದ ಛತ್ರಪತಿ ಶಿವಾಜಿ ನಾಮಫಲಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಪಿಎಸ್ಐ ಎಸ್.ವಿ.ಮಾರುತಿ ಮಾತನಾಡಿದರು.ಶ್ರೀಧರ ಸ್ವಾಮಿ, ಪ.ಪಂ.ಸದಸ್ಯ ಕೃಷ್ಣ ನಾಯಕ, ಕಿರಣ ಕುಮಾರ ಸರೋದೆ, ಮಿಥುನ ಚ್ಯಾಗಿ, ದೇವರಾಜ ವಿಶ್ವಕರ್ಮ, ಅನಿಲ ಕುಮಾರ ಗಾಯಕವಾಡ, ಸುನೀಲ, ಗಡ್ಲ ಚನ್ನಬಸವ, ವೆಂಕಟೇಶ ದೊರೆ, ಯಲ್ಲಪ್ಪ ದೊರೆ, ಕರಿಗೂಳಿ, ಚಂದ್ರಶೇಖರ ಹಡಪದ ಸೇರಿದಂತೆ ಯುವಕರು ಭಾಗವಹಿಸಿದ್ದರು.