ಗುಮ್ಮನೂರಿನಲ್ಲಿ ಉಕ್ಕಿ ಹರಿದ ಗಂಗೆ!

| Published : Feb 20 2024, 01:50 AM IST

ಸಾರಾಂಶ

ಗುಮ್ಮನೂರು ಗ್ರಾಮದಲ್ಲಿ ಸೋಮವಾರ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಸಲಾಯಿತು. ಸುಮಾರು 589 ಅಡಿ ಕೊಳವೆ ಬಾವಿ ಕೊರಸುತ್ತಿದ್ದಂತೆ 6 ಇಂಚಿನಷ್ಟು ನೀರು ಸುಮಾರು 30 ಅಡಿಗೂ ಎತ್ತರಕ್ಕೆ ಸುಮಾರು ಹೊತ್ತು ರಭಸದಿಂದ ಕಾರಂಜಿ ಉಕ್ಕಿ ಹರಿಯುತ್ತಿದ್ದುದನ್ನು ಕಂಡ ಗ್ರಾಮಸ್ಥರು ಸಂಭ್ರಮಿಸಿದರು.

ದಾವಣಗೆರೆ: ತೀವ್ರ ಬರದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ತುತ್ತಾಗಿದ್ದ ತಾಲೂಕಿನ ಗುಮ್ಮನೂರು ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಕೊರೆಸಿದ್ದ ಕೊಳವೆಯಲ್ಲಿ ನೀರು ಉಕ್ಕಿ ಹರಿದಿದ್ದು ಗ್ರಾಮಸ್ಥರ ಸಂಭ್ರಮಕ್ಕೆ ಕಾರಣವಾಗಿದೆ.

ಗುಮ್ಮನೂರು ಗ್ರಾಮದಲ್ಲಿ ಸೋಮವಾರ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಸಲಾಯಿತು. ಸುಮಾರು 589 ಅಡಿ ಕೊಳವೆ ಬಾವಿ ಕೊರಸುತ್ತಿದ್ದಂತೆ 6 ಇಂಚಿನಷ್ಟು ನೀರು ಸುಮಾರು 30 ಅಡಿಗೂ ಎತ್ತರಕ್ಕೆ ಸುಮಾರು ಹೊತ್ತು ರಭಸದಿಂದ ಕಾರಂಜಿ ಉಕ್ಕಿ ಹರಿಯುತ್ತಿದ್ದುದನ್ನು ಕಂಡ ಗ್ರಾಮಸ್ಥರು ಸಂಭ್ರಮಿಸಿದರು. ಗ್ರಾಮಸ್ಥರೆ ಸೇರಿ ಕುಡಿಯುವ ನೀರಿಗೆಂದು ಕೊರೆಸಿದ್ದ ಕೊಳವೆ ಬಾವಿಯಲ್ಲಿ ನೋಡ ನೋಡುತ್ತಿದ್ದಂತೆ ಉಕ್ಕಿ ಹರಿದ ನೀರು ಮೇಲಕ್ಕೆ ಚಿಮ್ಮಿ ಬಂದಿದೆ.