ಸಾರಾಂಶ
ಮಾಗಡಿ: ಅಯೋಧ್ಯದಲ್ಲಿ ಪ್ರತಿಷ್ಠಾಪಿಸಿರುವ ಬಾಲರಾಮನಿಗೆ 45 ದಿನಗಳ ಕಾಲ ಮಂಡಲ ಪೂಜೆ ನೆರವೇರಿಸಲಾಗುವುದು, ದೇಶದ ಸಾಧು, ಸಂತರು, ಅರ್ಚಕರು, ಪುರೋಹಿತರು ಮತ್ತು ಎಲ್ಲಾ ದೇವಸ್ಥಾನದ ಪೂಜಾರಿಗಳು ಪ್ರತಿನಿತ್ಯ ತಮ್ಮ ಪೂಜಾ ವಿಧಿ ವಿಧಾನಗಳ ಜೊತೆ ಸಹಸ್ರಕೋಟಿ ರಾಮ ಜಪ ಮಾಡುವ ಮೂಲಕ ಬಾಲರಾಮನಿಗೆ ಶಕ್ತಿ ತುಂಬಬೇಕಿದೆ ಎಂದು ಜಿಲ್ಲಾ ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷ ರಾಘವೇಂದ್ರಮಯ್ಯ ಹೇಳಿದರು.

ಪಟ್ಟಣದ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆದಾಯ ತೆರಿಗೆ ಇಲಾಖೆ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಎಸ್.ಆರ್.ರಘುನಾಥ್ ಅವರ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, 500 ವರ್ಷಗಳ ಕನಸು ನನಸಾದ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಮಸ್ಮರಣೆ ಮಾಡಲಾಗುತ್ತಿದೆ. ಬ್ರಾಹ್ಮಣ ಸಮುದಾಯದ ಅರ್ಚಕರು ಪುರೋಹಿತರು 45 ದಿನಗಳ ಕಾಲ ರಾಮಜಪ ಮಾಡಿ ದೇವರಿಗೆ ಶಕ್ತಿ ತುಂಬಿದಾಗ ರಾಮನಿಂದ ಮತ್ತೆ ದೇಶದಲ್ಲಿ ರಾಮ ರಾಜ್ಯವನ್ನು ಕಾಣಬಹುದು. ರಘುನಾಥ್ ರವರು ಉನ್ನತ ಅಧಿಕಾರ ಸ್ವೀಕರಿಸುತ್ತಿದ್ದು ಅವರಿಗೆ ಒಳಿತಾಗಲೇ ಎಂದು ಹಾರೈಸಿದರು.ಆದಾಯ ತೆರಿಗೆ ಇಲಾಖೆ ನೂತನ ನ್ಯಾಯಾಧೀಶರಾದ ಎಸ್.ಆರ್. ರಘುನಾಥ್ ಮಾತನಾಡಿ, ನನಗೆ ದೊಡ್ಡ ಜವಾಬ್ದಾರಿ ಸಿಕ್ಕಿದ್ದು ಈ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ. ಯಾವುದೇ ರೀತಿಯ ಅಮಿಷಗಳಿಗೆ ಒಳಗಾಗದೆ ನ್ಯಾಯಯುತವಾಗಿ ನಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅರ್ಚಕ ಮತ್ತು ಪುರೋಹಿತ್ ಪರಿಷತ್ತಿನ ಜಿಲ್ಲಾ ಉಪಾಧ್ಯಕ್ಷ ಕಿರಣ್ ದೀಕ್ಷಿತ್, ತಾಲೂಕು ಅಧ್ಯಕ್ಷ ರಂಗನಾಥ್, ಕಾರ್ಯದರ್ಶಿ ವಿನಯ್ ಕುಮಾರ್ ನಿರ್ದೇಶಕರಾದ ರಮೇಶ್, ಕೃಷ್ಣಮೂರ್ತಿ, ದೀಪಕ್, ಮಾಗಡಿ ತಾಲೂಕು ಬ್ರಾಹ್ಮಣ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ವೆಂಕಟೇಶ್ ಮೂರ್ತಿ ಇತರರಿದ್ದರು. ಪೋಟೋ 25ಮಾಗಡಿ1:ಮಾಗಡಿಯ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಆದಾಯ ತೆರಿಗೆ ಇಲಾಖೆ ನ್ಯಾಯಾಧೀಶರಾಗಿ ಆಯ್ಕೆಯಾದ ರಘುನಾಥ್ ಅವರನ್ನು ತಾಲೂಕು ಅರ್ಚಕ ಮತ್ತು ಪುರೋಹಿತ ಪರಿಷತ್ ಸನ್ಮಾನಿಸಲಾಯಿತು.