ತೆರೆಮರೆಯ ಸಾಧಕರಿಗೂ ಗೌರವ ಸಲ್ಲಲಿ

| Published : Mar 25 2024, 12:50 AM IST

ಸಾರಾಂಶ

ಹೊಸಕೋಟೆ: ಪ್ರಚಾರ ಬಯಸದೆ ಎಲೆಮರೆಯಲ್ಲಿರುವ ಕಾಯಿಯಂತೆ ಸೇವೆ ಮಾಡುವವರಿಗೆ ಪ್ರಶಸ್ತಿಗಳು ಗೌರವಗಳು ಲಭಿಸಬೇಕು ಎಂದು ಯುವಚೇತನ ಯುವಜನ ಕೇಂದ್ರದ ರಾಜ್ಯಾಧ್ಯಕ್ಷ ಡಾ.ನಂದಿದುರ್ಗ ಬಾಲುಗೌಡ ಹೇಳಿದರು.

ಹೊಸಕೋಟೆ: ಪ್ರಚಾರ ಬಯಸದೆ ಎಲೆಮರೆಯಲ್ಲಿರುವ ಕಾಯಿಯಂತೆ ಸೇವೆ ಮಾಡುವವರಿಗೆ ಪ್ರಶಸ್ತಿಗಳು ಗೌರವಗಳು ಲಭಿಸಬೇಕು ಎಂದು ಯುವಚೇತನ ಯುವಜನ ಕೇಂದ್ರದ ರಾಜ್ಯಾಧ್ಯಕ್ಷ ಡಾ.ನಂದಿದುರ್ಗ ಬಾಲುಗೌಡ ಹೇಳಿದರು.

ನಗರದ ಜಿಎಸ್ ಕೈಗಾರಿಕಾ ತರಬೇತಿ ಸಂಸ್ಥೆಯ ಸಂಭಾಂಗಣದಲ್ಲಿ ಗೌರವ ಡಾಕ್ಟರೇಟ್ ಪದವಿ ಪಡೆದ ದೇವರಾಜು ಮತ್ತು ರಾಜು ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ದೇವರಾಜು ಶಿಡ್ಲಘಟ್ಟ ತಾಲೂಕಿನ ಕೂತಂಡಹಳ್ಳಿ ಕುಗ್ರಾಮದ ಬಡಕುಂಟುಂಬದಲ್ಲಿ ಜನಿಸಿ ಚಿಕ್ಕಬಳ್ಳಾಪುರದಲ್ಲಿ ವ್ಯಾಸಂಗ ಮುಗಿಸಿದರು. ಹೊಸಕೋಟೆಯಲ್ಲಿ ೩೦ ವರ್ಷಗಳ ಹಿಂದೆ ಪ್ರಥಮ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಥಮ ಶಿಕ್ಷಕರಾಗಿ ವೃತ್ತಿ ಪ್ರಾರಂಭಿಸಿದರು. ಬಳಿಕ ಪ್ರಾಂಶುಪಾಲರಾಗಿ ಬಡ್ತಿ ಪಡೆದು ರಾಜ್ಯದಲ್ಲಿ ೩೨ಕ್ಕೂ ಹೆಚ್ಚು ಕೈಗಾರಿಕಾ ತರಬೇತಿ ಸಂಸ್ಥೆಗಳ ಸ್ಥಾಪನೆಗೆ ಪ್ರೇರೇಪಣೆ ನೀಡಿದವರು. ಅಂಕಣ ಬರಹಗಾರರಾಗಿ, ಹೋರಾಟಗಾರರಾದ ಇವರ ಸೇವೆಯನ್ನು ಗುರುತಿಸಿ ಗ್ಲೋಬಲ್ ಪೀಸ್ ಯುನಿವರ್ಸಿಟಿಯವರು ಗೌರವ ಡಾಕ್ಟರೇಟ್ ನೀಡಿದ್ದಾರೆ. ಅಂತೆಯೇ ಅವರ ಬೆನ್ನಿಗೆ ನಿಂತು ಅವರಂತೆಯೇ ಕೈಗಾರಿಕಾ ತರಬೇತಿ ವಲಯದಲ್ಲಿ ಹೊಸಹೆಜ್ಜೆ ಆರಂಭಿಸಿದ ರಾಜು ಅವರಿಗೂ ಗೌರವ ಡಾಕ್ಟರೇಟ್ ದೊರೆತಿದ್ದು ಇಬ್ಬರನ್ನು ಕೇಂದ್ರದ ಪದಾಧಿಕಾರಿಗಳು, ಸ್ನೇಹಿತರು ಅಭಿನಂದಿಸಿದ್ದು ಶ್ಲಾಘನೀಯ ಎಂದು ಹೇಳಿದರು.

ಪೋಟೋ : 24 ಹೆಚ್‌ಎಸ್‌ಕೆ 2

ಹೊಸಕೋಟೆಯ ಜಿಎಸ್ ಐಟಿಐ ಕಾಲೇಜು ಆವರಣದಲ್ಲಿ ಗ್ಲೋಬಲ್ ಪೀಸ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪಡೆದ ಡಾ.ದೇವರಾಜು ಹಾಗೂ ಡಾ.ರಾಜು ಅವರನ್ನು ಯುವಚೇತನ ಯುವಜನ ಕೇಂದ್ರದ ರಾಜ್ಯಾಧ್ಯಕ್ಷ ಡಾ.ನಂದಿದುರ್ಗ ಬಾಲುಗೌಡ ಅವರು ಅಭಿನಂದಿಸಿದರು. ಕೇಂದ್ರದ ಪದಾಧಿಕಾರಿಗಳು ಹಾಜರಿದ್ದರು.