ಶಿರೂರು ಪರ್ಯಾಯ ಯಶಸ್ವಿಗೊಳಿಸೋಣ: ಶಾಸಕ ಸುರೇಶ್ ಶೆಟ್ಟಿ

| Published : Nov 06 2025, 03:00 AM IST

ಸಾರಾಂಶ

ಶಿರೂರು ಮಠದ ಪರ್ಯಾಯ ಸಲುವಾಗಿ ನಡೆಯುವ ಹೊರೆ ಕಾಣಿಕೆಯ ಪೂರ್ವಭಾವಿ ಸಭೆ ಭಾನುವಾರ ಕಾಪು ಹೊಸ ಮಾರಿಗುಡಿಯ ಸಭಾಭವನದಲ್ಲಿ ನಡೆಯಿತು.

ಕಾಪು: ಉಡುಪಿ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಪರ್ಯಾಯ ಸಲುವಾಗಿ ನಡೆಯುವ ಹೊರೆ ಕಾಣಿಕೆಯ ಪೂರ್ವಭಾವಿ ಸಭೆ ಭಾನುವಾರ ಕಾಪು ಹೊಸ ಮಾರಿಗುಡಿಯ ಸಭಾಭವನದಲ್ಲಿ ನಡೆಯಿತು.ಸಭೆಯಲ್ಲಿ ಶಾಸಕ ಸುರೇಶ್‌ ಶೆಟ್ಟಿ ಮಾತನಾಡಿ, 2 ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಉಡುಪಿಗರಿಗೆ ಬಹಳ ವಿಶೇಷವಾದದ್ದು ಹಾಗೂ ಹೊರ ಜಿಲ್ಲೆ ಹೊರ ರಾಜ್ಯಗಳಿಂದ ಜನರು ಇದನ್ನು ನೊಡಲು ಬರುತ್ತಾರೆ. ಈ ಬಾರಿ ನಡೆಯುವ ಶಿರೂರು ಮಠದ ಪರ್ಯಾಯ ದಲ್ಲಿ ನಾವೆಲ್ಲರೂ ಭಾಗವಹಿಸಿ ತನು ಮನ ಧನ ಸಹಾಯ ಮಾಡುವ ಮೂಲಕ ಪೊಡವಿಗೊಡೆಯನ ಕೃಪೆಗೆ ಪಾತ್ರರಾಗೋಣ ಎಂದರು.

ಮಾಜಿ ಶಾಸಕ ಲಾಲಾಜಿ, ಕಾಪು ಪುರಸಭೆಯ ಅಧ್ಯಕ್ಷೆ ಹರೀಣಾಕ್ಷಿ ದೇವಾಡಿಗ, ಶಿರೂರು ಪರ್ಯಾಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ್ ಹೆಗ್ಡೆ, ಕಾರ್ಯದರ್ಶಿ ಮೋಹನ್ ಭಟ್, ಜೊತೆ ಕಾರ್ಯದರ್ಶಿಗಳಾದ ಶ್ರೀಕಾಂತ್ ನಾಯಕ್, ವಿಷ್ಣುಪ್ರಸಾದ್ ಪಾಡಿಗಾರ, ಶಿರೂರು ಮಠದ ದಿವಾನ ಉದಯ ಸರಳತ್ತಾಯ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಹೆಗ್ಡೆ, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಾಸುದೇವ ಶೆಟ್ಟಿ ಹಾಗೂ ಬಾಲಾಜಿ ಯೋಗೀಶ್ ಶೆಟ್ಟಿ, ಮಾಧವ ಪಾಲನ್ ಹಾಗೂ ಗಣ್ಯರು ಉಪಸ್ಥಿತರಿದ್ದರು.