ಬಾಳೆಹೊನ್ನೂರುಗುರು ಇಲ್ಲದೇ ಯಾವುದೇ ಗುರಿ ಮುಟ್ಟಲು ಸಾಧ್ಯವಿಲ್ಲ. ನನ್ನ ಇಡೀ ಬದುಕನ್ನು ರಂಭಾಪುರಿ ವೀರಗಂಗಾಧರ ಅಜ್ಜಯ್ಯನವರು ಬದಲು ಮಾಡಿದ್ದಾರೆ. ನಾವು ನಮ್ಮ ಆತ್ಮಸಾಕ್ಷಿಗನುಗುಣವಾಗಿ ಧರ್ಮ, ಪರಂಪರೆಯನ್ನು ಉಳಿಸಬೇಕಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಜಗದ್ಗುರು ರೇಣುಕಾಚಾರ್ಯ ಜಯಂತಿಯಲ್ಲಿ ಡಿಸಿಎಂ ಡಿಕೆಶಿ ಕರೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು
ಗುರು ಇಲ್ಲದೇ ಯಾವುದೇ ಗುರಿ ಮುಟ್ಟಲು ಸಾಧ್ಯವಿಲ್ಲ. ನನ್ನ ಇಡೀ ಬದುಕನ್ನು ರಂಭಾಪುರಿ ವೀರಗಂಗಾಧರ ಅಜ್ಜಯ್ಯನವರು ಬದಲು ಮಾಡಿದ್ದಾರೆ. ನಾವು ನಮ್ಮ ಆತ್ಮಸಾಕ್ಷಿಗನುಗುಣವಾಗಿ ಧರ್ಮ, ಪರಂಪರೆಯನ್ನು ಉಳಿಸಬೇಕಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಭಾನುವಾರ ನಡೆದ ಶಿವಾದ್ವೈತ ಸಮಾವೇಶ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ ಮರಕ್ಕೆ ಬೇರು ಹೇಗೆ ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ನಾವು ನಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕಬೇಕಿದ್ದು, ದೇವನೊಬ್ಬ ನಾಮ ಹಲವು ಎಂಬ ತತ್ವದಲ್ಲಿ ನಂಬಿಕೆ ಯಿಟ್ಟಿದ್ದೇವೆ. ಭಕ್ತನಿಗೂ, ದೇವರಿಗೂ ವ್ಯವಹಾರ ನಡೆಯುವ ಸ್ಥಳ ದೇವಾಲಯ. ನಾನು ರಂಭಾಪುರಿ ಪೀಠಕ್ಕೆ ಒಬ್ಬ ಭಕ್ತನಾಗಿ ಬಂದಿದ್ದೇನೆಯೇ ವಿನಃ ಡಿಸಿಎಂ ಆಗಿಯೋ, ಪಕ್ಷದ ರಾಜ್ಯಾಧ್ಯಕ್ಷನಾಗಿ ಬಂದಿಲ್ಲ ಎಂದರು.ಯಾವ ಜಾತಿ, ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡಿಲ್ಲ. ಹುಟ್ಟಿದ ಮೇಲೆ ಆ ಧರ್ಮದ ಮೇಲೆ ನಂಬಿಕೆಯಿಂದ ಬದುಕಬೇಕು. ನಮ್ಮ ಮನೆಗಳಂತೆ ಮಠಗಳನ್ನು ಕಾಪಾಡಬೇಕು. ಧರ್ಮ, ಪೂಜೆ, ಭಕ್ತಿ ಪ್ರದರ್ಶದ ವಸ್ತುಗಳಲ್ಲ. ಮನುಷ್ಯನ ಆತ್ಮವಿಶ್ವಾಸಕ್ಕೆ ಇರುವುದೆಂದು ಅರಿಯಬೇಕಿದೆ. ನಮ್ಮ ಸಮುದಾಯದ ಹಲವು ಸ್ವಾಮೀಜಿ ಹಲವು ಬಾರಿ ಪ್ರಶ್ನೆ ಮಾಡಿ ನೀನು ಪ್ರಮಾಣ ವಚನವನ್ನು ವೀರಗಂಗಾಧರ ಅಜ್ಜಯ್ಯನವರ ಹೆಸರಿನಲ್ಲಿ ಸ್ವೀಕರಿಸಿದ್ದೀಯ? ನಮ್ಮ ಸಮುದಾಯದ ಮೇಲೆ ನಿನಗೆ ಗೌರವವಿಲ್ಲವೇ ಎಂದು. ಆದರೆ ನನ್ನ ಪ್ರಮಾಣವಚನ ನನ್ನ ನಂಬಿಕೆ. ಹಲವು ವಿಚಾರ ಮಾತನಾಡಬೇಕು ಎಂದುಕೊಂಡಿದ್ದೆ ಆದರೆ ಈಗ ಸಮಯಾವಕಾಶವಿಲ್ಲ. ಮುಂದೊಂದು ದಿನ ಅವುಗಳನ್ನು ಪುಸ್ತಕ ರೂಪದಲ್ಲಿ ನಿಮ್ಮ ಮುಂದಿಡುತ್ತೇನೆ ಎಂದು ತಿಳಿಸಿದರು.
ರಂಭಾಪುರಿ ಪೀಠದಲ್ಲಿ ಅಪೂರ್ಣಗೊಂಡಿರುವ ಯಾತ್ರಿ ನಿವಾಸ ಕಟ್ಟಡಕ್ಕೆ ಸರ್ಕಾರದಿಂದ ₹೫ ಕೋಟಿ ನೆರವು ನೀಡಲಾಗು ವುದು. ಮುಂದೆ ನಾನೇ ಅದನ್ನು ಉದ್ಘಾಟಿಸಲಿದ್ದೇನೆ. ಶ್ರೀಪೀಠದ ನಿರ್ಮಿಸುತ್ತಿರುವ 51 ಅಡಿ ಎತ್ತರದ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಠಾಪನೆಗೆ ಭೂಮಿ ಪೂಜೆ ನನ್ನ ಕೈಯಲ್ಲಿ ಮಾಡಿಸಿರುವುದು ಅತ್ಯಂತ ಸಂತಸ ತಂದಿದೆ ಎಂದರು.ದೇವರು ನಮಗೆ ವರ, ಶಾಪದ ಬದಲಾಗಿ ಅವಕಾಶ ಕೊಡುತ್ತಾನೆ. ಅದನ್ನು ನಾವು ಹೇಗೆ ಬಳಸಿಕೊಂಡು ಏನು ಮಾಡುತ್ತೇವೆ ಎಂಬುದು ಮಾತ್ರ ಮುಖ್ಯ. ಹುಟ್ಟು-ಸಾವಿನ ಮಧ್ಯ ನಾವು ಏನು ಮಾಡುತ್ತೇವೋ ಅದೇ ಮುಖ್ಯ ಎಂದು ಪ್ರತಿಪಾದಿಸಿದರು. (ಬಾಕ್ಸ್)
ಸಂಸ್ಕೃತಿ ರಕ್ಷಣೆಯಲ್ಲಿ ಮಠ, ಮಂದಿರಗಳ ಪಾತ್ರ ಮಹತ್ವ: ಜೋಷಿಸನಾತನ ಸಂಸ್ಕೃತಿ ರಕ್ಷಣೆಗೆ ಮಠ, ಮಂದಿರಗಳ ಪಾತ್ರ ಮಹತ್ವದ್ದಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವ ಪ್ರಲ್ಹಾದ್ ಜೋಷಿ ಹೇಳಿದರು. ರಂಭಾಪುರಿ ಬೆಳಗು ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಕೆಲವು ಸೆಕ್ಯುಲರ್‌ವಾದಿಗಳು ಸನಾತನ ಧರ್ಮದ ಮೇಲೆ ಆಕ್ರಮಣ ಮಾಡುತ್ತಿರುವ ಸಂದರ್ಭದಲ್ಲಿ ಮಠ, ಮಂದಿರಗಳು ಧಾರ್ಮಿಕ ಪರಂಪರೆ ಎತ್ತಿ ಹಿಡಿಯುವ ಕಾರ್ಯಕ್ರಮದಲ್ಲಿ ನಾವು ಭಾಗಹಿಸಬೇಕು. ಸಾಂಸ್ಕೃತಿಕ ಪುನರುತ್ಥಾನವನ್ನು ಪ್ರಧಾನಿ ಮೋದಿಯವರು ದೇಶದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಕೈಗೊಂಡಿದ್ದಾರೆ. ರಾಮ ಮಂದಿರ ನಿರ್ಮಾಣ, ಕಾಶಿ ವಿಶ್ವನಾಥ ಕಾರಿಡಾರ್, ಚಾರ್‌ದಾಮ್ ಇಂತಹ ಅನೇಕ ಅಭಿವೃದ್ಧಿ ಇದೇ ಕಾರಣದಿಂದ ನಡೆಯುತ್ತಿವೆ. ಭಾರತ ವಿಶ್ವದಲ್ಲೇ ಶಾಂತಿಯುತ ದೇಶವಾಗಿ ಹೊರಹೊಮ್ಮಿದ್ದು, ಜಗತ್ತಿನಲ್ಲಿ ಶಾಂತಿ ಬಯಸಿ ಹಲವರು ಭಾರತಕ್ಕೆ ಬರುತ್ತಿದ್ದಾರೆ ಎಂದರು.
(ಬಾಕ್ಸ್)ಬಿಎಸ್‌ವೈ ಅವಧಿಯಲ್ಲಿ ಮಠ ಮಂದಿರಗಳಿಗೆ ನೂರಾರು ಕೋಟಿ ಅನುದಾನ ಈ ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿ ಬಿ.ಎಸ್.ಯಡಿಯೂರಪ್ಪ ಸಿಎಂಆಗಿದ್ದಾಗ ನಾಡಿನ ಹಲವಾರು ಮಠ, ಮಂದಿರಗಳಿಗೆ ನೂರಾರು ಕೋಟಿ ಅನುದಾನ ನೀಡಿ ಅಭಿವೃದ್ಧಿಗೊಳಿಸುವ ಕೆಲಸ ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.ಸಮಾಜದಲ್ಲಿ ಜಾಗೃತಿ ಮೂಡಿಸುವ, ತಿದ್ದಿ ತೀಡಿ ಸರಿದಾರಿಗೆ ಕೊಂಡುಹೋಗುವ ಕೆಲಸವನ್ನು ರಂಭಾಪುರಿ ಶ್ರೀಗಳು ಮಾಡುತ್ತಿದ್ದಾರೆ. ರಂಭಾಪುರಿ ಪರಿಸರದಲ್ಲಿ 51 ಅಡಿ ಎತ್ತರದ ರೇಣುಕಾಚಾರ್ಯರ ಮೂರ್ತಿ ನಿರ್ಮಾಣಕ್ಕೆ ಬಿಎಸ್‌ವೈ ಸಿಎಂ ಆಗಿದ್ದಾಗ ₹೫ ಕೋಟಿ ಅನುದಾನ ನೀಡಿದ್ದರು. ಅನ್ನ, ಅಕ್ಷರ, ಜ್ಞಾನ ದಾಸೋಹವನ್ನು ರಾಜಕಾರಣಿಗಳು ಮಾಡುತ್ತಿಲ್ಲ. ಬದಲಾಗಿ ಮಠ ಮಂದಿರಗಳು ಮಾಡುತ್ತಿವೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ರಾಜ್ಯಸರ್ಕಾರ ಮನಸ್ಸು ಮಾಡಿ ಶ್ರೀಪೀಠದ ಅಭಿವೃದ್ಧಿಗೆ ಕೈಜೋಡಿಸಿ ಅನುದಾನ ನೀಡುವಂತೆ ಈ ಸಂದರ್ಭದಲ್ಲಿ ಮನವಿ ಮಾಡುತ್ತೇನೆ ಎಂದರು. ನಮ್ಮ ಸಮಾಜ ಜಾಗೃತಗೊಂಡು, ನಮ್ಮನ್ನು ಬೇರೆ ಮಾಡಲು ಪ್ರಯತ್ನಿಸುತ್ತಿರುವ ಕೆಲವು ದುಷ್ಟಶಕ್ತಿಗಳ ಮುಂದೆ ನಾವು ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.ರಾಜಕೀಯ ಏಳುಬೀಳುಗಳ ಸಂದರ್ಭದಲ್ಲಿ ಬಿಎಸ್‌ವೈ ಅವರಿಗೆ ಧೈರ್ಯ ನೀಡಿದವರು ರಂಭಾಪುರಿ ಜಗದ್ಗುರು. ರಾಜಕೀಯ ದಲ್ಲಿ ಪ್ರಸ್ತುತ ನಾನು ಸಹ ಅಂಬೆಗಾಲು ಇಡುತ್ತಿದ್ದು, ನನಗೂ ಜಗದ್ಗುರುಗಳ ಆಶೀರ್ವಾದ ಬೇಕಿದೆ ಎಂದು ಹೇಳಿದರು.(ಬಾಕ್ಸ್)
ರೇಣುಕಾಚಾರ್ಯ ಮೂರ್ತಿ ಪ್ರತಿಷ್ಠೆಗೆ ಅಗತ್ಯ ನೆರವು ರಂಭಾಪುರಿ ಪೀಠದಲ್ಲಿ ಜಗದ್ಗುರು ರೇಣುಕಾಚಾರ್ಯ ಮೂರ್ತಿ ಪ್ರತಿಷ್ಠಾಪನೆಯಂತಹ ಜಗದ್ಗುರುಗಳ ಸಮಯೋಚಿತ ಕಾರ್ಯಕ್ಕೆ ಸರ್ಕಾರದಿಂದ ನಾನು ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಒಗ್ಗೂಡಿ ಅಗತ್ಯ ನೆರವು ಮಾಡಿಸಿಕೊಡುತ್ತೇವೆ ಎಂದು ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.ರಂಭಾಪುರಿ ಜಗದ್ಗುರು ರಾಜ್ಯಾದ್ಯಂತ ಪ್ರವಾಸ ಮಾಡುತ್ತ ಧರ್ಮ ಪ್ರಸಾರ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ. ಈ ಹಿಂದೆ ದಾವಣಗೆರೆಯಲ್ಲಿ ಪಂಚಪೀಠದ ಜಗದ್ಗುರುಗಳನ್ನು ಒಗ್ಗೂಡಿಸಿ ಅಡ್ಡಪಲ್ಲಕ್ಕಿ ಮಹೋತ್ಸವ ನಡೆಸಿ,ವೀರಶೈವ-ಲಿಂಗಾಯತ ಒಂದೇ ಎಂಬ ಐತಿಹಾಸಿಕ ನಿರ್ಣಯ ಕೈಗೊಂಡು ನಮ್ಮ ಒಗ್ಗಟ್ಟು ಪ್ರದರ್ಶಿಸಲಾಗಿತ್ತು ಎಂದು ಹೇಳಿದರು.೦೧ಬಿಹೆಚ್‌ಆರ್ ೪:ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ನಡೆದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದಲ್ಲಿ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸ ಸಮಾರಂಭವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಇದ್ದರು.೦೧ಬಿಹೆಚ್‌ಆರ್ ೫: ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವದಲ್ಲಿ ರಂಭಾಪುರಿ ಬೆಳಗು ಮಾಸ ಪತ್ರಿಕೆಯನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಬಿಡುಗಡೆಗೊಳಿಸಿದರು.೦೧ಬಿಹೆಚ್‌ಆರ್ ೬:
ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಆಶೀರ್ವದಿಸಿದ ರಂಭಾಪುರಿ ಜಗದ್ಗುರು.೦೧ಬಿಹೆಚ್‌ಆರ್ ೭: ಸಮಾರಂಭದಲ್ಲಿ ಭಾಗವಹಿಸಿದ್ದ ವಿವಿಧೆಡೆಯ ಭಕ್ತರು.೦೧ಬಿಹೆಚ್‌ಆರ್ ೮: ಜಗದ್ಗುರು ರೇಣುಕಾಚಾರ್ಯರ ಮಂಗಲ ಮೂರ್ತಿ ನಿರ್ಮಾಣಕ್ಕೆ ಶಿಲಾನ್ಯಾಸ ಭೂಮಿ ಪೂಜೆ ನೆರವೇರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಗಣ್ಯರು.೦೧ಬಿಹೆಚ್‌ಆರ್ ೯: ರಂಭಾಪುರಿ ಪೀಠದ ಕ್ಷೇತ್ರನಾಥ ವೀರಭದ್ರಸ್ವಾಮಿ ದೇವಾಲಯದಲ್ಲಿ ಡಿಕೆಶಿ ಪ್ರಾರ್ಥನೆ.