ಸಾರಾಂಶ
ಕನಕಪುರ: ಸಂಸ್ಕೃತಿ, ಇತಿಹಾಸ, ಪರಂಪರೆಯಿಂದ ಕನ್ನಡ ನಾಡು ಸಂಪತ್ಭರಿತವಾಗಿದೆ. ನಾಡಿಗಾಗಿ ಹೋರಾಡಿದ ಪ್ರತಿಯೊಬ್ಬರನ್ನು ನಾವು ಸ್ಮರಿಸಬೇಕು ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 1905ರಲ್ಲಿ ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರು ಕನ್ನಡ ಏಕೀಕರಣದ ಚಳವಳಿ ಪ್ರಾರಂಭಿಸಿದರು. 1956ರಲ್ಲಿ ಮೈಸೂರು ರಾಜ್ಯವಾಯಿತು. 1973 ನ. 1ರಂದು ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾಗಿ ನಾಮಕರಣಗೊಂಡಿದೆ ಎಂದರು.ಕುಮಾರಸ್ವಾಮಿ ಮಾತನಾಡಿ, ರೈಲ್ವೆ ಹುದ್ದೆಗಳಿಗೆ ಕನ್ನಡಿಗರು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟ ಸಚಿವ ಸೋಮಣ್ಣ ಹಾಗೂ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಎ.ಪಿ. ಕೃಷ್ಣಪ್ಪ ಮಾತನಾಡಿ, ಸ್ವತಂತ್ರ ಪೂರ್ವದಲ್ಲಿ ಭಾಷಾವಾರು ಪ್ರಾಂತ್ಯ ಬೇಕು ಎಂಬ ಧ್ವನಿ ಪ್ರಾರಂಭವಾಗಿತ್ತು. 1953ರಲ್ಲಿ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಅಸಂಖ್ಯಾತ ಕನ್ನಡಿಗರು ಮುತ್ತಿಗೆ ಹಾಕಿದರು. ಆನಂತರ ಕೇಂದ್ರ ಸರ್ಕಾರ ಹರಿದು ಹಂಚು ಹೋಗಿದ್ದ ಕರ್ನಾಟಕ ರಾಜ್ಯವನ್ನು ಒಗ್ಗೂಡಿಸಿ ಕರ್ನಾಟಕ ರಾಜ್ಯ ಉದಯವಾಯಿತು ಎಂದರು.ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಅಪ್ಪಾಜಿ, ಗ್ರೇಟ್ 2 ತಹಸೀಲ್ದಾರ್ ಶಿವಕುಮಾರ್, ತಾಪಂ ಇಒ ಬೈರಪ್ಪ, ಎಡಿ ಮೋಹನ್ ಬಾಬು, ಪಶು ಇಲಾಖೆ ಸಹಾಯಕ ನಿರ್ದೇಶಕ ಯು.ಸಿ.ಕುಮಾರ್, ನಗರಸಭೆ ಎಇಇ ಸಾಗರ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಶಿವಲಿಂಗೇಗೌಡ, ಆಹಾರ ಇಲಾಖೆ ಶಿರಸ್ತೇದಾರ್ ಗಣೇಶ್, ಮನೋಹರ್, ಜಿಲ್ಲಾ ಲೇಖಕರ ವೇದಿಕೆ ಕೂ.ಗಿ. ಗಿರಿಯಪ್ಪ, ನೀಲಿ ರಮೇಶ್, ಕನ್ನಡ ಭಾಸ್ಕರ್, ಮಾನವ ಹಕ್ಕು ಹೋರಾಟಗಾರ ಕೆ.ಆರ್.ಸುರೇಶ್, ರೈತರ ಮುಖಂಡ ಶಿವರಾಜು ಉಪಸ್ಥಿತರಿದ್ದರು.
ಕೆ ಕೆ ಪಿ ಸುದ್ದಿ 02 :ಕನಕಪುರ ತಾಲೂಕು ಕಚೇರಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಾಂಬೆ ಭಾವಚಿತ್ರಕ್ಕೆ ಅಧಿಕಾರಿಗಳು, ಸಂಘ-ಸಂಸ್ಥೆ ಮುಖಂಡರು ಪುಷ್ಪ ನಮನ ಸಲ್ಲಿಸಿದರು.