ವಿಜಯಪುರ: ನೂತನ ದೇವಾಲಯಗಳ ನಿರ್ಮಾಣಕ್ಕಿಂತಲೂ, ಇತಿಹಾಸ ಸಾರುವ ಪುರಾತನ ದೇಗುಲಗಳು ಹಾಗೂ ಅಶ್ವತ್ಥ ಕಟ್ಟೆಗಳನ್ನು ಜೀರ್ಣೋದ್ಧಾರಗೊಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುಬೇಕಿದೆ ಎಂದು ಶ್ರೀ ನಗರೇಶ್ವರಸ್ವಾಮಿ ದೇವಾಲಯದ ಅಪ್ಪೇ ಶಾಮಪ್ಪನವರ ಕುಟುಂಬದ ಕೆ.ಉದಯಕುಮಾರ್ ತಿಳಿಸಿದರು

ವಿಜಯಪುರ: ನೂತನ ದೇವಾಲಯಗಳ ನಿರ್ಮಾಣಕ್ಕಿಂತಲೂ, ಇತಿಹಾಸ ಸಾರುವ ಪುರಾತನ ದೇಗುಲಗಳು ಹಾಗೂ ಅಶ್ವತ್ಥ ಕಟ್ಟೆಗಳನ್ನು ಜೀರ್ಣೋದ್ಧಾರಗೊಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುಬೇಕಿದೆ ಎಂದು ಶ್ರೀ ನಗರೇಶ್ವರಸ್ವಾಮಿ ದೇವಾಲಯದ ಅಪ್ಪೇ ಶಾಮಪ್ಪನವರ ಕುಟುಂಬದ ಕೆ.ಉದಯಕುಮಾರ್ ತಿಳಿಸಿದರು.

ಪಟ್ಟಣದ ಹಳೆ ಪುರಸಭಾ ಕಚೇರಿ ಮುಂದೆ ಶಿಥಿಲಗೊಂಡಿದ್ದ ಅಶ್ವತ್ಥ ಕಟ್ಟೆಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಶ್ವತ್ಥ ಕಟ್ಟೆಯಲ್ಲಿನ ಅರಳಿ ಮತ್ತು ಬೇವಿನ ಮರಗಳು ಸಂಪೂರ್ಣ ಶಿಥಿಲಗೊಂಡು ಉರುಳಿ ಬೀಳುವ ಸ್ಥಿತಿಯಲ್ಲಿದ್ದವು. ಅಲ್ಲದೆ ನಾಗರಕಟ್ಟೆಯಲ್ಲಿನ ನಾಗದೇವರ ವಿಗ್ರಹಗಳು ಶಿಥಿಲಗೊಂಡಿದ್ದವು. ನಮ್ಮ ಸಂಸ್ಕಾರ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿ. ಆ ನಿಟ್ಟಿನಲ್ಲಿ ಅಶ್ವತ್ಥ ಕಟ್ಟೆ ಅಭಿವೃದ್ಧಿಗೆ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು. ಈ ವೇಳೆ ಕೆ.ಮುರಳಿಧರ್, ಉಮಾದೇವಿ, ಪ್ರಮೀಳಾ, ಲಲಿತಾ, ನಾಗಾರ್ಜುನ್, ಪುರಸಭಾ ಸದಸ್ಯೆ ಶಿಲ್ಪಾ ಅಜಿತ್, ಮಾಜಿ ಸದಸ್ಯ ಕೆಬಿಎಸ್ ಭಾಸ್ಕರ್, ಮಹಂತಿನ ಮಠದ ಅಧ್ಯಕ್ಷ ಪುನೀತ್ ಕುಮಾರ್, ಕಾರ್ಯದರ್ಶಿ ವಿ.ವಿಶ್ವನಾಥ್, ಸಿ.ಸುರೇಶ್, ಮುಖ್ಯಶಿಕ್ಷಕ ಬಸವರಾಜ್, ಮಹಿಳಾ ಸಂಘದ ಅಧ್ಯಕ್ಷೆ ದೀಪಾಮುರಳೀಧರ್, ಮಾಜಿ ಅಧ್ಯಕ್ಷರಾದ ಭಾರತಿ, ಸುವರ್ಣ ಇತರರು ಉಪಸ್ಥಿತರಿದ್ದರು.

(ಫೋಟೋ ಕ್ಯಾಪ್ಷನ್‌)

ವಿಜಯಪುರದ ಹಳೆ ಪುರಸಭಾ ಕಚೇರಿ ಮುಂದೆ ಶಿಥಿಲಗೊಂಡಿದ್ದ ಅಶ್ವತ್ಥ ಕಟ್ಟೆಯ ಜೀರ್ಣೋದ್ಧಾರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶ್ರೀ ನಗರೇಶ್ವರ ಸ್ವಾಮಿ ದೇವಾಲಯದ ಅಪ್ಪೇ ಶಾಮಪ್ಪನವರ ಕುಟುಂಬದ ಕೆ. ಉದಯಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.