ಸಾರಾಂಶ
ಜೇವರ್ಗಿಯಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಜೇವರ್ಗಿ
ರಾಜ್ಯ ಸರ್ಕಾರ ಬಸವಣ್ಣನವರು ಸಾಂಸ್ಕೃತಿಕ ನಾಯಕ ಎಂಬುದಾಗಿ ಘೋಷಣೆ ಮಾಡಿರುವುದು ಇಡಿ ಕರುನಾಡು ಹೆಮ್ಮೆ ಪಡುವಂತಾಗಿದೆ ಎಂದರಲ್ಲದೆ, ನಾವೆಲ್ಲರೂ ಬಸವ ತತ್ವ ಮನೆ-ಮನೆ ಮುಟ್ಟಿಸೋಣ ಎಂದು ಕೆಕೆಆರ್‌ಡಿಬಿ ಅಧ್ಯಕ್ಷರು ಹಾಗೂ ಜೇವರ್ಗಿ ಶಾಸಕರಾದ ಡಾ. ಅಜಯ್ ಸಿಂಗ್ ಕರೆ ನೀಡಿದರು.ಜೇವರ್ಗಿಯಲ್ಲಿ ತಾಲೂಕು ಆಡಳಿತ ವತಿಯಿಂದ ಶನಿವಾರ ಆಯೋಜಿಸಿದ ಸಮಾರಂಭದಲ್ಲಿ ವಿಶ್ವ ಗುರುಬಸವಣ್ಣ ಸಾಂಸ್ಕೃತಿಕ ನಾಯಕ ಭಾವಚಿತ್ರ ಅನಾವರಣ ಮಾಡಿ ಮಾತನಾಡಿದ ಅವರು, ಜಗಜ್ಯೋತಿ ಬಸವಣ್ಣನವರು ಯಾವುದೇ ಜಾತಿ ಹಾಗೂ ವರ್ಗಕ್ಕೆ ಸಿಮೀತವಾಗಿಲ್ಲ. ಸಮಾನತೆಯ. ಕಾಯಕ, ತತ್ವ ಮೂಲಕ ಬಸವಣ್ಣನವರು ತೋರಿಸಿ ಕೊಟ್ಟಿರುವ ಸಿದ್ಧಾಂತ ವ್ಯಾಪಕ ಪ್ರಚಾರಗೊಳಿಸಲು ನಾವೆಲ್ಲರು ಇಂದು ಕೆಲಸ ಮಾಡಬೇಕಾಗಿದೆ. ಬಸವಣ್ಣನವರ ವಚನ ಸಾಹಿತ್ಯ ಅಧಾರದ ಮೇಲೆ ಸಂವಿಧಾನ ರೂಪುಗೊಂಡಿರುವುದನ್ನು ನಾವು ಕಾಣಬಹುದಾಗಿದೆ ಎಂದು ಡಾ. ಅಜಯ್ ಸಿಂಗ್ ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮಲ್ಲಮ್ಣ ಯಲಗೋಡ್, ಡಾ. ಸಿದ್ದು ಪಾಟೀಲ್, ಜೇವರ್ಗಿ ತಾಪಂ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಮುಖಂಡರಾದ ರಾಜಶೇಖರ ಸಿರಿ, ಗುರುಲಿಂಗಪ್ಪಗೌಡ ಪಾಟೀಲ್ ಆಂದೋಲಾ, ಎಸ್ಕೆ ಬಿರಾದಾರ್, ನೀಲಕಂಠ ಆವಟಿ, ರವಿ ಕೋಳಕೂರ್, ಚನ್ನಮಲ್ಲಯ್ಯ ಹಿರೇಮಠ ಸೇರಿದಂತೆ ಅನೇಕರಿದ್ದರು.