ಸಾರಾಂಶ
ಕನ್ನಡಪ್ರಭ ವಾರ್ತ ಬಾದಾಮಿ
ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಮುಖಂಡ ಮಹಾಂತೇಶ ಮಮದಾಪೂರ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಮಾರಗೌಡ ಜನಾಲಿ ಇವರ ಜೊತೆಗೆ ನಡೆಸಿದ ಸಂಧಾನ ಯಶಸ್ವಿಯಾಗಿದೆ. ಇವರು ಸಂಸದ ಗದ್ದಿಗೌಡರ ಪರ ಪ್ರಚಾರ ನಡೆಸಲಿದ್ದಾರೆ ಎಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಬಾಂಡಗೆ ಮತ್ತು ತೇರದಾಳ ಶಾಸಕ ಸಿದ್ದು ಸವದಿ ತಿಳಿಸಿದರು.ಅವರು ಇತ್ತೀಚೆಗೆ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಕ್ಷದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುವುದು ಸಹಜ. ಎಲ್ಲ ಉಹಾಪೋಹಗಳಿಗೆ ಕಿವಿಗೊಡದೇ ಸಮಸ್ಯೆಗಳನ್ನು ಪರಿಹರಿಸಲು ಒಪ್ಪಿಕೊಂಡಿದ್ದು, ಮಾಜಿ ಶಾಸಕರು ಸಹಿತ ಎಲ್ಲ ಮುಖಂಡರು ಬಾದಾಮಿ ವಿಧಾನಸಭಾ ಮತಕ್ಷೇತ್ರದಲ್ಲಿ ಸಂಸದ ಗದ್ದಿಗೌಡರ ಪರ ಪ್ರಚಾರಕ್ಕೆ ತೆರಳಲಿದ್ದಾರೆ ಎಂದರು.ಗದ್ದಿಗೌಡರು ಕಳೆದ ನಾಲ್ಕು ಬಾರಿ ಸಂಸದರಾಗಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಸಾವಿರಾರು ಕೋಟಿ ಅನುದಾನ ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ತಂದು ಅಭಿವೃದ್ಧಿ ಮಾಡಿದ್ದಾರೆ. ಪ್ರಚಾರ ಬಯಸದೇ ಕೆಲಸ ಮಾಡುವ ಉತ್ತಮ ಸಂಸದರು ಎಂದು ಶ್ಲಾಘಿಸಿದ ಅವರು, ಚುನಾವಣೆಯಿಂದ ಚುನಾವಣೆಗೆ ಗೆಲುವಿನ ಮತಗಳ ಅಂತರ ಹೆಚ್ಚಾಗಲಿದೆ. ಈ ಬಾರಿ ಸುಮಾರು ಎರಡು ಲಕ್ಷ ಮತಗಳ ಅಂತರದಿಂದ ಜಯಶಾಲಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಮುಖಂಡ ಮಹಾಂತೇಶ ಮಮದಾಪೂರ, ಕುಮಾರಗೌಡ ಜನಾಲಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ಸಿದ್ದಣ್ಣ ಶಿವನಗುತ್ತಿ, ಬಸವರಾಜ ಪಾಟೀಲ(ನಸಬಿ). ಬಿ.ಪಿ.ಹಳ್ಳೂರ, ನಾಗರಾಜ ಕಾಚೆಟ್ಟಿ, ಮುತ್ತು ಉಳಾಗಡ್ಡಿ, ಶಿವನಗೌಡ ಸುಂಕದ, ಎಫ್.ಆರ್.ಪಾಟೀಲ, ಮಹಾಂತೇಶ ಮೆಣಸಗಿ ಹಾಜರಿದ್ದರು.--------
ಕೋಟ್..ನಾವು ಪಕ್ಷ ಆದೇಶಕ್ಕೆ ಬದ್ಧರಿದ್ದೇವೆ. ಹಿರಿಯರು, ಪಕ್ಷದ ಮುಖಂಡರು ನಮ್ಮ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ನಾಳೆಯಿಂದಲೇ ಬಾದಾಮಿ ಮತಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಪ್ರಚಾರ ಮಾಡಿ, ಗದ್ದಿಗೌಡರ ಐದನೇ ಬಾರಿಗೆ ಗೆಲ್ಲಿಸಿ ಪ್ರಧಾನಿ ಮೋದಿಜಿ ಕೈ ಬಲಪಡಿಸುತ್ತೇವೆ.
- ಎಂ.ಕೆ.ಪಟ್ಟಣಶೆಟ್ಟಿ, ಮಾಜಿ ಶಾಸಕರು ಬಾದಾಮಿ.ನಾನು ಮತ್ತು ಪಟ್ಟಣಶೆಟ್ಟಿ ಇಬ್ಬರೂ ಕೂಡಿ ರಾಜಕಾರಣ ಮಾಡಿದವರು. ಪಕ್ಷದಲ್ಲಿ ಸಣ್ಣಪುಟ್ಟ ವೈಮನಸ್ಸುಗಳು ಇದ್ದು, ಇದನ್ನು ವರಿಷ್ಠರು ಬಗೆಹರಿಸಿದ್ದಾರೆ. ಇದು ನನ್ನ ಕೊನೆಯ ಚುನಾವಣೆ. ಎಲ್ಲರೂ ಕೂಡಿ ಕೆಲಸ ಮಾಡುತ್ತೇವೆ-ಪಿ.ಸಿ.ಗದ್ದಿಗೌಡರ, ಸಂಸದರು ಬಾಗಲಕೋಟೆ.ಬರುವ ಏ.18 ರಂದು ಸಂಸದ ಪಿ.ಸಿ.ಗದ್ದಿಗೌಡರ ಅವರು ನಾಮಪಪತ್ರ ಸಲ್ಲಿಸಲಿದ್ದು, ಮಾಜಿ ಸಿಎಂ ಜಗದೀಶ ಶೆಟ್ಟರ, ಶಾಸಕ ಬಾಲಚಂದ್ರ ಜಾರಕಿಹೊಳಿ, ಬಸನಗೌಡ ಯತ್ನಾಳ ಸೇರಿದಂತೆ ಶಾಸಕರು, ಮಾಜಿ ಶಾಸಕರು ಭಾಗವಹಿಸಲಿದ್ದಾರೆ
-ಶಾಂತಗೌಡ ಪಾಟೀಲ, ಜಿಲ್ಲಾಧ್ಯಕ್ಷರು ಬಿಜೆಪಿ ಬಾಗಲಕೋಟೆ.---------