ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಶಿಕ್ಷಕ ವೃತ್ತಿ ಸಂತೃಪ್ತಿ ನೀಡಿದ್ದು, ಸರ್ಕಾರಿ ಶಾಲೆಗಳ ಅಭ್ಯುದಯದ ದೃಷ್ಟಿಯಿಂದ ನಾವೆಲ್ಲರೂ ಶ್ರಮವಹಿಸಿ ದುಡಿದು ಮಕ್ಕಳ ಬಾಳಿಗೆ ಬೆಳಕಾಗಬೇಕಿದೆ ಎಂದು ದೇವೂರ್ ಎಲ್.ಟಿ ನಂ.2 ನಿವೃತ್ತ ಶಿಕ್ಷಕ ಶಾಂತಪ್ಪ ತಳವಾರ ಹೇಳಿದರು. ತಾಲೂಕಿನ ದೇವೂರ ಎಲ್.ಟಿ ನಂ.2ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮುಖ್ಯಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಆಯೋಜಿಸಿದ್ದ ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಶಿಕ್ಷಕ ವೃತ್ತಿ ಸಂತೃಪ್ತಿ ನೀಡಿದ್ದು, ಸರ್ಕಾರಿ ಶಾಲೆಗಳ ಅಭ್ಯುದಯದ ದೃಷ್ಟಿಯಿಂದ ನಾವೆಲ್ಲರೂ ಶ್ರಮವಹಿಸಿ ದುಡಿದು ಮಕ್ಕಳ ಬಾಳಿಗೆ ಬೆಳಕಾಗಬೇಕಿದೆ ಎಂದು ದೇವೂರ್ ಎಲ್.ಟಿ ನಂ.2 ನಿವೃತ್ತ ಶಿಕ್ಷಕ ಶಾಂತಪ್ಪ ತಳವಾರ ಹೇಳಿದರು. ತಾಲೂಕಿನ ದೇವೂರ ಎಲ್.ಟಿ ನಂ.2ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮುಖ್ಯಗುರುಗಳು ಹಾಗೂ ಸಿಬ್ಬಂದಿ ವರ್ಗದವರು ಆಯೋಜಿಸಿದ್ದ ಬೀಳ್ಕೊಡುವ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ತಾಲೂಕು ಕಸಾಪ ಅಧ್ಯಕ್ಷ ಜಿ.ಪಿ.ಬಿರಾದಾರ ಮಾತನಾಡಿ, ನಮ್ಮ ಸೇವೆ ಶಾಶ್ವತವಾಗಿರಬೇಕು ಹಾಗೂ ನಿಸ್ವಾರ್ಥತೆಯಿಂದ ಕೂಡಿರಬೇಕು. ಈ ನಿಟ್ಟಿನಲ್ಲಿ ಶಾಂತಪ್ಪ ತಳವಾರ ಗುರುಗಳ ಸೇವೆ ಶ್ಲಾಘನೀಯ ಎಂದು ತಿಳಿಸಿದರು.ಶಾಲೆಯ ಮುಖ್ಯಗುರುಗಳಾದ ಎಸ್.ಎಲ್.ಬಿರಾದಾರ ಅವರು ಶಾಲೆಗೆ ಬಂದ ಅತಿಥಿಗಳಿಗೆ ಸಿದ್ದೇಶ್ವರ ಶ್ರೀಗಳ ಧರ್ಮ ಹಾಗೂ ಕರ್ಮ ಪುಸ್ತಕಗಳನ್ನು ನೀಡಿ, ಸವಿಸ್ತಾರವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಸಿಆರ್‌ಪಿ ಬಿ.ಎಂ.ವಾಲಿಕಾರ, ಶಿಕ್ಷಕ ಸಂಘದ ಖಜಾಂಚಿ ಪಿ.ಸಿ.ತಳಕೇರಿ, ಸಂಘಟನಾ ಕಾರ್ಯದರ್ಶಿ ನಾಗೇಶ ನಾಗೂರ, ಸಹ ಕಾರ್ಯದರ್ಶಿ ಜಯಶ್ರೀ ನಾಯಕ, ಶಿಕ್ಷಕರಾದ ಎಸ್.ಎಂ.ಬೆನಕನಹಳ್ಳಿ, ರಾಘವೇಂದ್ರ ಎಂ.ಎಸ್ ಮಾತನಾಡಿದರು. ಮಕ್ಕಳು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಹೃದಯಸ್ಪರ್ಶಿಯಾಗಿ ಸನ್ಮಾನಿಸಿ, ಸಾಲಾಗಿ ನಿಂತು ಹೂ ಮಳೆಗೆರೆದು ನಿವೃತ್ತ ಶಿಕ್ಷಕ ಶಾಂತಪ್ಪ ತಳವಾರ ಅವರನ್ನು ಬೀಳ್ಕೊಟ್ಟರು.ಇದೇ ಸಂದರ್ಭದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸೀನಾರಾಮ ರಾಠೋಡ, ಸಹಶಿಕ್ಷಕರಾಗಿರುವ ಎಸ್.ಎಂ.ಬೆನಕನಹಳ್ಳಿ, ಸಿದ್ದರಾಮಪ್ಪ ಬಿ.ಕೆ, ಜೆ.ಬಿ.ಗಂಗಶೆಟ್ಟಿ, ರವಿ ರಾಠೋಡ, ಎ.ಎಸ್.ಮೇಟಿ, ಸುರೇಶ ಬೀರನಗಡ್ಡಿ, ಭಜಂತ್ರಿ ,ಅಂಕಲಗಿ, ನದಾಫ್ ಸೇರಿದಂತೆ ಗ್ರಾಮಸ್ಥರು, ಬಿಸಿಯೂಟ ಸಿಬ್ಬಂದಿ ಹಾಗೂ ಮಕ್ಕಳು ಪಾಲ್ಗೊಂಡಿದ್ದರು. ಶಿಕ್ಷಕ ಸಿದ್ದರಾಮಪ್ಪ ಬಿ.ಕೆ ನಿರೂಪಿಸಿ, ವಂದಿಸಿದರು.