ಸಾರಾಂಶ
- ಜಗಳೂರಲ್ಲಿ ನೂತನ ಮಂಡಲ ಅಧ್ಯಕ್ಷ ಎ.ಮರುಳಾರಾಧ್ಯ ಪದಗ್ರಹಣ ಸಮಾರಂಭ
- - -ಕನ್ನಡಪ್ರಭ ವಾರ್ತೆ ಜಗಳೂರು
ಕನಕ ಜಯಂತಿ ದಿನದಂದು ಅಧಿಕಾರ ಸ್ವೀಕರಿಸಿದ ಮರುಳಾರಾಧ್ಯ ಒಳ್ಳೆಯ ಕೆಲಸ ಮಾಡಲಿ. ಸವಾಲುಗಲಿವೆ, ಜಯಿಸಿ ಸಮರ್ಥವಾಗಿ ಕೆಲಸ ಮಾಡಲು ನಮ್ಮ ಸಹಕಾರವಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲೇ ಬೇಕು. ಆ ನಿಟ್ಟಿನಲ್ಲಿ ಒಂದಾಗಿ ಕೆಲಸ ಮಾಡೋಣ ಎಂದು ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.ಪಟ್ಟಣದ ವಾಲ್ಮೀಕಿ ಭವನದಲ್ಲಿ ಶನಿವಾರ ಬಿಜೆಪಿ ಮಂಡಲ ನೂತನ ಅಧ್ಯಕ್ಷ ಎ.ಮರುಳಾರಾಧ್ಯ ಪದಗ್ರಹಣ ಸಮಾರಂಭದಲ್ಲಿ ಬಿಜೆಪಿ ಧ್ವಜ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾಜಿ ಶಾಸಕ ಎಚ್.ಪಿ.ರಾಜೇಶ್, ರಸ್ತೆ ತೆರವು ವಿಚಾರದಲ್ಲಿ ಶಾಸಕ ಬಿ.ದೇವೇಂದ್ರ ವರ್ತಕರೊಬ್ಬರಿಗೆ ಅಮಾನವೀಯವಾಗಿ ನಡೆದು ಕೊಂಡಿದ್ದಾರೆ. ''ಲೇ ಮುದಿಯಾ, ನಿನ್ನ ಅಂಗಡಿಗೆ ಬೆಂಕಿ ಹಚ್ಚುತ್ತೇನೆ'' ಎಂದು ಮನಸ್ಸಿಗೆ ನೋವಾಗುವಂತೆ ಹೇಳಿರುವುದು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಜನಸೇವೆ ಮಾಡುವವರು ಜನರಿಗೆ ಅವಮಾನ ಮಾಡಿದ್ದಾರೆ. ಪಟ್ಟಣದಲ್ಲಿ ಎರಡು ಮೂರು ಕ್ಲಬ್‌ಗಳು ಆಗಿ ಜನ ಇಸ್ಪೀಟ್ ದಂಧೆಗೆ ಇಳಿದು ಹಾಳಾಗಿ ಹೋಗುತ್ತಿದ್ದಾರೆ ಎಂದರು.ಕಾಮಗಾರಿಗಳಲ್ಲಿ ಗುಣಮಟ್ಟವಿಲ್ಲ. ಪಟ್ಟಣದಲ್ಲಿನ ಸರ್ಕಾರಿ ಮಳಿಗೆಗಳ ಹರಾಜಿನಲ್ಲಿ ಒಳಸಂಚು ನಡೆಯುತ್ತಿದೆ. ಮೆಕ್ಕೆಜೋಳ ಬೆಳೆದ ರೈತರು ಬೀದಿಗೆ ಬಂದಿದ್ದಾರೆ. ಇವುಗಳನ್ನು ಗಮನಿಸದ ಶಾಸಕರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಅಭಿವೃದ್ಧಿ ಮಾಡಲಿ. ಆದರೆ ಮಾನವೀಯತೆ ನೆಲಗಟ್ಟಿನಲ್ಲಿ ವರ್ತಿಸಲಿ ಎಂದರು.
ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಕೊರತೆಯಿಲ್ಲ. ಪಕ್ಷ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಪಕ್ಷ ಸಂಘಟಿಸಿ ಜಿಪಂ, ತಾಪಂ ಸೇರಿದಂತೆ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನೂತನ ಮಂಡಲ ಅಧ್ಯಕ್ಷ ಎ.ಮರುಳಾರಾಧ್ಯ ಸಾರಥ್ಯದಲ್ಲಿ ಸಂಘಟಿತರಾಗಬೇಕು ಎಂದು ತಿಳಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಮಾತನಾಡಿ, ರಸ್ತೆಗಳು ಗುಂಡಿ ಬಿದ್ದಿವೆ. ಜಗಳೂರು ಶಾಸಕರು ಹಿರಿಯರಿಗೆ ಗೌರವ ಕೊಡದೇ ಮಾತನಾಡಿದ್ದಾರೆ. ಶ್ರೀರಾಮಚಂದ್ರನ ಅಪರಾವತಾರದಂತೆ ಮಾತನಾಡುವ ಅವರು ಮತದಾರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂದು ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು. ಕಾರ್ಯಕರ್ತರು ದುರಂಹಕಾರಿ ಶಾಸಕ ದರ್ಪ ಮಟ್ಟ ಹಾಕಲಿ ಸಂಘಟಿತರಾಗಿ ಎಂದರು.
ಗಾಯಿತ್ರಿ ಸಿದ್ದೇಶ್ವರ್, ಅನಿತ್‌ಕುಮಾರ್, ಚುನಾವಣಾಧಿಕಾರಿ ಗುಬ್ಬಿ ಭೈರಪ್ಪ, ಬಿಜೆಪಿ ಮುಖಂಡರಾದ ವೇಣುಗೋಪಾಲ ರೆಡ್ಡಿ, ಅನಿಲಕುಮಾರ್ ನಾಯ್ಕ್, ನಿಕಟಪೂರ್ವ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್, ಎಸ್.ಕೆ. ಮಂಜುನಾಥ್, ಧನಂಜಯ ಕಡ್ಲೇಬಾಳು, ಎನ್.ವೈ. ಮಂಜುನಾಥ್, ಸಿದ್ದಪ್ಪ, ಕೆ.ಎಸ್. ನವೀನ್ ಕುಮಾರ್, ಕೊಟ್ರೇಶ್ ಸೊಕ್ಕೆ ನಾಗರಾಜ್ ಇತರರು ಇದ್ದರು.- - -
(ಟಾಪ್ ಕೋಟ್)ಈ ಹಿಂದೆ ಅನೇಕರು ಬಿಜೆಪಿ ಮಂಡಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅವರೆಲ್ಲರ ಸಹಕಾರ ಪಡೆದು ಪಕ್ಷವನ್ನು ಬಲ ಪಡಿಸುತ್ತೇನೆ. ಬಿಜೆಪಿ ಗುರುತಿಸಿ ಸ್ಥಾನ ನೀಡಿದೆ. ಬೂತ್ ಮಟ್ಟದಲ್ಲಿ ಸಂಚಾರ ಮಾಡಿ ಸಂಘಟಿಸುತ್ತೇನೆ. ಮಾಜಿ ಶಾಸಕರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವ ಮೂಲಕ ಪಕ್ಷ ಬಲ ಪಡಿಸುತ್ತೇನೆ.
- ಎ.ಎಂ. ಮರುಳಾರಾಧ್ಯ, ಅಧ್ಯಕ್ಷ, ಬಿಜೆಪಿ ಮಂಡಲ.- - -
-೮ಜೆಎಲ್ಆರ್ಚಿತ್ರ೧ಎ:ಜಗಳೂರು ಪಟ್ಟಣದ ವಾಲ್ಮೀಕಿ ಭವನದಲ್ಲಿ ಬಿಜೆಪಿ ಮಂಡಲ ನೂತನ ಅಧ್ಯಕ್ಷ ಎ.ಮರುಳಾರಾಧ್ಯ ಅವರಿಗೆ ಮಾಜಿ ಅಧ್ಯಕ್ಷ ಎಚ್.ಸಿ.ಮಹೇಶ್ ಧ್ವಜ ಹಸ್ತಾಂತರಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))