ಶರಣರ ಸಾಮಾಜಿಕ ಕ್ರಾಂತಿ ಇಂದಿನ ಪೀಳಿಗೆಗೆ ದಾರಿದೀಪವಾಗಲಿ

| Published : Jul 26 2024, 01:37 AM IST

ಸಾರಾಂಶ

ಹಳಕಟ್ಟೆ ತಮ್ಮ ಜೀವನವನ್ನು ವಚನ ರಕ್ಷಣೆಗಾಗಿ ಮೀಸಲಿಟ್ಟರು.

ಹರಪನಹಳ್ಳಿ: ಶರಣರ ಕಾಲದಲ್ಲಿ ನಡೆದ ಸಾಮಾಜಿಕ ಕ್ರಾಂತಿ, ಕಾಯಕದ ಬದುಕು ಇಂದಿನ ಪೀಳಿಗೆಗೆ ದಾರಿದೀಪವಾಗಬೇಕಿದೆ ಎಂದು ನಿವೃತ್ತ ಶಿಕ್ಷಕ ಕಲಿವೀರ ಕಳ್ಳಿಮನಿ ತಿಳಿಸಿದರು.

ತಾಲೂಕಿನ ತೆಲಿಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ವತಿಯಿಂದ ವಚನ ಪಿತಾಮಹ ಫ.ಗು. ಹಳಕಟ್ಟೆ ಅವರ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಚನ ಸಂರಕ್ಷಣಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹಳಕಟ್ಟೆ ತಮ್ಮ ಜೀವನವನ್ನು ವಚನ ರಕ್ಷಣೆಗಾಗಿ ಮೀಸಲಿಟ್ಟರು. ವಕೀಲ ವೃತ್ತಿ ತೊರೆದು, ಸ್ವಂತ ಮನೆಯನ್ನೇ ಮಾರಿ ಮುದ್ರಣಾಲಯ ಸ್ಥಾಪಿಸಿ ವಚನ ಪುಸ್ತಕಗಳನ್ನು ಮುದ್ರಿಸಿ ಸಾಹಿತ್ಯ ಪ್ರಸಾರ ಮಾಡಿದರು ಎಂದು ಸ್ಮರಿಸಿದರು.

ಅಧ್ಯಕ್ಷತೆ ವಹಿಸಿದ್ದ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪೂಜಾರ ಷಣ್ಮುಖಪ್ಪ ಅವರು ವಚನ ಸಂರಕ್ಷಣಾ ದಿನದ ಮಹತ್ವ ಕುರಿತು ಮಾತನಾಡಿದರು.

ಶರಣ ಸಾಹಿತ್ಯ ಪರಿಷತ್ ಸಂಘಟನಾ ಕಾರ್ಯದರ್ಶಿ ಐ. ಬಸವರಾಜಪ್ಪ ಅವರು ಮತ್ತಿಹಳ್ಳಿ ಶರಣ ಮಂಟಪದ ಶರಣ ಶತಾಯುಷಿ ಶ್ರೀಸಿದ್ದರಾಮಣ್ಣ ರಚಿಸಿದ ಫ.ಗು. ಹಳಕಟ್ಟೆ ಅವರ ಬಗ್ಗೆ ಕವನ ವಾಚನ ಮಾಡಿದರು.

ಚಿತ್ರಕಲಾ ಶಿಕ್ಷಕ ಟಿ. ಹನುಮಂತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕನ್ನಡ ಶಿಕ್ಷಕ ದಿಳ್ಳೆಪ್ಪ ಸ್ವಾಗತಿಸಿದರು. ಕನ್ನಡ ಶಿಕ್ಷಕ ಜಯಪ್ಪ ಕಾರ್ಯಕ್ರಮ ನಿರೂಪಿಸಿದರು. ಗಣಿತ ಶಿಕ್ಷಕಿ ಶಾಲಿನಿ ವಂದಿಸಿದರು.

ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಬಣಕಾರ ರಾಜಶೇಖರ, ಶರಣ ಸಾಹಿತ್ಯ ಪರಿಷತ್ತು ಗೌರವ ಅಧ್ಯಕ್ಷ ಸಿ. ಸಿದ್ದಪ್ಪ, ಕರವೇ ಅಧ್ಯಕ್ಷ ಜಿ. ನಾಗರಾಜ, ಮುಖ್ಯ ಶಿಕ್ಷಕ ಮೊಹಮ್ಮದ್ ನಾಸಿರ್, ಶರಣ ಸಾಹಿತ್ಯ ಪರಿಷತ್‌ನ ಕೆ.ಎಸ್. ವೀರಭದ್ರಪ್ಪ, ಶೇಖರಗೌಡ ಪಾಟೀಲ್, ಎಂ. ಕೊಟ್ರಯ್ಯ, ಕೆ.ಉಮಾಪತಿ, ಎಸ್.ಎಚ್. ವಿಠೋಬ, ನಾಗರಾಜ ಪಾಟೀಲ, ಬಿ. ಶೇಖರಪ್ಪ, ಹೂಗಾರ ಹನುಮಂತಪ್ಪ ಇತರರು ಇದ್ದರು.