ಸಾರಾಂಶ
ಸಮಾಜ ಪರಿವರ್ತನಾ ವೇದಿಕೆಯ ಪದಾಧಿಕಾರಿಗಳ ಆಯ್ಕೆ
ಕನ್ನಡಪ್ರಭ ವಾರ್ತೆ ಮೊಳಕಾಲ್ಮೂರು
ಹಳ್ಳಿಗಳಲ್ಲಿರುವ ಜಾತಿ ಪದ್ಧತಿ, ಬಾಲ್ಯ ವಿವಾಹ, ದೇವದಾಸಿ ಪದ್ಧತಿ ಸೇರಿದಂತೆ ಅನಿಷ್ಟ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯವಾಗಬೇಕೆಂದು ನಿವೃತ್ತ ಖಜನೆ ಅಧಿಕಾರಿ ಭಂಗಿ ನಾಗರಾಜ್ ಹೇಳಿದರು.ತಾಲೂಕಿನ ಹಾನಗಲ್ ಪ್ರವಾಸಿ ಮಂದಿರದಲ್ಲಿ ಸಮಾಜ ಪರಿವರ್ತನಾ ವೇದಿಕೆಯ ವತಿಯಿಂದ ಆಯೋಜಿಸಿದ್ದ ಪದಾಧಿಕಾರಿಗಳ ಆಯ್ಕೆಯ ಸಭೆಯಲ್ಲಿ ಮಾತನಾಡಿದರು.
ಸಮಾಜದಲ್ಲಿರುವ ಬಹುದೊಡ್ಡ ಪಿಡುಗಾಗಿರುವ ಜಾತಿ ಪದ್ಧತಿ ಬಾಲ್ಯ ವಿವಾಹದಂತ ಅನಿಷ್ಟ ಪದ್ಧತಿಗಳಿಂದ ಸಮಾಜದಲ್ಲಿ ಅಸಮಾನತೆಗೆ ಕಾರಣವಾಗುತ್ತಿದೆ. ಮೂಡ ನಂಬಿಕೆ, ಹಳೆಯ ಕಂದಾಚಾರಗಳಿಂದ ಹೊರ ಬರಬೇಕು. ಡಾ.ಬಾಬಾ ಸಾಹೇಬರ ಆದರ್ಶ ಮತ್ತು ಆಶಯಗಳನ್ನು ಅರಿತುಕೊಂಡು ಬಾಳಬೇಕು. ಮಕ್ಕಳಿಗೆ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿಸಬೇಕು ಎಂದರು.ಈ ಸಂದರ್ಭದಲ್ಲಿ ಸಮಾಜ ಪರಿವರ್ತನಾ ವೇದಿಕೆಯ ವಿವಿಧ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಅಧ್ಯಕ್ಷ ಎಂ. ರುದ್ರಯ್ಯ ಸಂಸ್ಥಾಪಕ ಅಧ್ಯಕ್ಷ ನಾಗಸಮುದ್ರ ಮರಿಸ್ವಾಮಿ, ಪರಿವರ್ತನಾ ವೇದಿಕೆಯ ತಾಲೂಕು ಅಧ್ಯಕ್ಷ ಜಿ.ಬಸವರಾಜ್ ವಡೇರಹಳ್ಳಿ, ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ತಮ್ಮೇನಹಳ್ಳಿ ತಿಪ್ಪೇಸ್ವಾಮಿ, ಉಪಾಧ್ಯಕ್ಷರಾಗಿ ಮೊಗಳಹಳ್ಳಿ ತಿಪ್ಪೇಸ್ವಾಮಿ, ನಾಗೇಶ್ ನೇರ್ಲಹಳ್ಳಿ, ಭಟ್ರಹಳ್ಳಿ ಚಂದ್ರಣ್ಣ, ನಾಗರಾಜ್ ಬಿಜಿಕೆರೆ, ಯರ್ರಿಸ್ವಾಮಿ, ಗೌರವ ಅಧ್ಯಕ್ಷ ಭಂಗಿ ನಾಗರಾಜ್ ಹಾಗೂ ಟಿ.ಶಿವಣ್ಣ ಸಂಚಾಲಕರಾಗಿ ಶಿವಣ್ಣ, ತಿಮ್ಮಪ್ಪ, ಯಲ್ಲಪ್ಪ ಹಾಗೂ ವೇದಿಕೆಯ ಮಹಾ ಪೋಷಕರಾಗಿ ವಕೀಲರಾದ ತಿಪ್ಪೇರುದ್ರಪ್ಪ ಶಿಕ್ಷಕರಾದ ಎಸ್.ಟಿ,ಬಸವರಾಜ್, ಆನಂದ್, ಕರಿಯಣ್ಣ ಮುರುಳಿ ಹಾಗೂ ನಾಗಣ್ಣ ಮೊದಲಾದವರನ್ನು ಆಯ್ಕೆ ಮಾಡಲಾಯಿತು.