ಕೇವಲ ಸಾಂಪ್ರದಾಯಿಕ ಶಿಕ್ಷಣದಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳಬೇಕು.
ಗುರು ಸುಧೀಂದ್ರ ಕಾಲೇಜಿನಲ್ಲಿ ರೋಟರಾಕ್ಟ್ ಕ್ಲಬ್‌ನ ಪದಾಧಿಕಾರಿಗಳ ಪದಗ್ರಹಣ
ಕನ್ನಡಪ್ರಭ ವಾರ್ತೆ ಭಟ್ಕಳಕೇವಲ ಸಾಂಪ್ರದಾಯಿಕ ಶಿಕ್ಷಣದಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳಬೇಕು ಎಂದು ರೋಟರಿ ಜಿಲ್ಲೆ ೩೧೭೦ ಸಹ ಗವರ್ನರ್ ರೋಟರಿಯನ್ ಜೈವಿಠಲ್ ಕುಬಾಲ್ ಹೇಳಿದರು.
ಪಟ್ಟಣದ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನ ಘಟಕವಾದ ರೋಟರಾಕ್ಟ್ ಕ್ಲಬ್‌ನ ೨೦೨೬-೨೭ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.ಪ್ರಪಂಚದ ೧೮೦ ದೇಶಗಳಲ್ಲಿ ಸುಮಾರು ಹನ್ನೊಂದು ಸಾವಿರ ರೋಟರಾಕ್ಟ್ ಕ್ಲಬ್‌ಗಳಿದ್ದು ಅವು ಎರಡು ಲಕ್ಷ ಸದಸ್ಯರನ್ನು ಹೊಂದಿವೆ ಮತ್ತು ಅವರೆಲ್ಲರೂ ತಮ್ಮ ಸೇವೆಯ ಮೂಲಕ ಇತರರ ಜೀವನದಲ್ಲಿ ಬದಲಾವಣೆಯನ್ನು ತರಲು ಪರಿಶ್ರಮಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರೋಟರಾಕ್ಟರ್ ಚಂದನ್ ಕುಬಾಲ್ ಮಾತನಾಡಿ, ರೋಟರಾಕ್ಟ್ ಮಹತ್ವದ ಕುರಿತು ನೂತನ ಪದಾಧಿಕಾರಿಗಳಿಗೆ ಮಾಹಿತಿ ನೀಡಿದರು. ರೋಟರಿ ಭಟ್ಕಳ ಪ್ರಮುಖರಾದ ರೋ. ನಜಿರ್ ಖಾಶಿಮಜೀ, ರೋ. ಶಾಕಿರ್, ರೋ. ಶ್ರೀನಿವಾಸ್ ಪಡಿಯಾರ್, ರೋಟರಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಭಟ್ಕಳ ರೋಟರಿ ಅಧ್ಯಕ್ಷ ರೋ. ಡಾ. ಶ್ರೀನಾಥ್ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರೋಟರಾಕ್ಟ್ ನಿಕಟಪೂರ್ವ ಅಧ್ಯಕ್ಷೆ ನೇಹಾ ಭಂಡಾರಿ ಸ್ವಾಗತಿಸಿ ೨೦೨೫-೨೬ನೇ ಸಾಲಿನಲ್ಲಿ ಜರುಗಿದ ರೋಟರಾಕ್ಟ್ ಚಟುವಟಿಕೆಗಳ ಕುರಿತು ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕಿ ಸಿಸಿಲಿಯ ಪಿಂಟೋ ನಿರೂಪಿಸಿ ವ೦ದಿಸಿದರು. ಈ ಸಂದರ್ಭ ರೋಟರಾಕ್ಟ್ ಮಾರ್ಗದರ್ಶಕ ಫಣಿಯಪ್ಪಯ್ಯ ಹೆಬ್ಬಾರ್, ಕ್ಲಬ್ ಸಂಯೋಜಕ ದೇವೇಂದ್ರ ಕಿಣಿ, ರೋಟರಿ ಮತ್ತು ರೋಟರಾಕ್ಟ್ ಸದಸ್ಯರು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.