ಸಾರಾಂಶ
ಬಾಲ್ಯದಲ್ಲಿಯೇ ದೇಶಾಭಿಮಾನ, ಐಕ್ಯತೆ, ಸ್ನೇಹಪರತೆ, ಸಹಬಾಳ್ವೆಯಂತಹ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಒಳ್ಳೆಯ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಚಿಂತಕಿ ಅನ್ನಪೂರ್ಣಾ ವರವಿ ಹೇಳಿದರು.
ಗದಗ: ವಿದ್ಯಾರ್ಥಿಗಳು ಸ್ಫೂರ್ತಿಯಿಂದ ಕಲಿಕೆಯಲ್ಲಿ ತೊಡಗಬೇಕು. ಬಾಲ್ಯ ಮಕ್ಕಳ ಬದುಕಿಗೆ ಅಡಿಪಾಯದ ಹಂತ. ಸತತ ಓದು, ಶಿಸ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಚಿಂತಕಿ ಅನ್ನಪೂರ್ಣಾ ವರವಿ ಹೇಳಿದರು.
ನಗರದ ಸರಕಾರಿ ಶಾಲೆ ನಂ. 13ರಲ್ಲಿ ಜಿಲ್ಲಾ ಅಕ್ಕಮಹಾದೇವಿ ಕದಳಿಶ್ರೀ ವೇದಿಕೆಯಿಂದ ಜರುಗಿದ ಅಮೃತ ಭೋಜನ ಜ್ಞಾನಸಿಂಚನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಿಸಿ ಮಾತನಾಡಿದರು.ಬಾಲ್ಯದಲ್ಲಿಯೇ ದೇಶಾಭಿಮಾನ, ಐಕ್ಯತೆ, ಸ್ನೇಹಪರತೆ, ಸಹಬಾಳ್ವೆಯಂತಹ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಒಳ್ಳೆಯ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದರು.ನಗರಸಭೆ ಮಾಜಿ ಅಧ್ಯಕ್ಷೆ ಜಯಶ್ರೀ ಉಗಲಾಟ ಮಾತನಾಡಿ, ನಮ್ಮ ಬದುಕು ಸಂಸ್ಕಾರಯುತವಾಗಬೇಕು. ಬಾಲ್ಯದಲ್ಲಿಯೇ ಸಹಕಾರ, ಪ್ರೀತಿ, ಸಂಸ್ಕೃತಿಯನ್ನು ಮಕ್ಕಳು ಜೀವನದಲ್ಲಿ ಅಳವಡಿಸಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದರು.
ಚಿಂತಕಿ ಸುಲೋಚನಾಬಾಯಿ ಕಾಟಗಿ ಮಾತನಾಡಿ, ಶರಣರು ನಮ್ಮೇಲ್ಲರ ಬದುಕನ್ನು ಹಸನುಗೊಳಿಸಿ ಉತ್ತಮ ದಾರಿ ತೋರಲು ಸಹಾಯಕವಾಗುವ ವಚನ ದೀಪ್ತಿಗಳನ್ನು ಕೊಡುಗೆಯಾಗಿ ನೀಡಿದ್ದು ಮಕ್ಕಳು ವಚನಗಳನ್ನು ಹೇಳುವ ರೂಢಿ ಮಾಡಿಕೊಳ್ಳಬೇಕು ಎಂದರು.ಸಂಪನ್ಮೂಲ ವ್ಯಕ್ತಿ ಕೆ.ಎಸ್. ಬೇಲೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಎಸ್.ಎಸ್. ಹುರಕಡ್ಲಿ, ಎಸ್‌ಡಿಎಂಸಿ ಅಧ್ಯಕ್ಷೆ ರತ್ನಾ ಪೂಜಾರ, ಸದಸ್ಯರಾದ ಲಕ್ಷ್ಮೀ ಮೊಕಾಸಿ, ಪ್ರೇಮಾ ಜಾಲವಾಡಗಿ ಇದ್ದರು. ಎಸ್.ವಿ. ಬೇವಿನಮಟ್ಟಿ ಸ್ವಾಗತಿಸಿದರು. ರವಿ ಪೂಜಾರ ನಿರೂಪಿಸಿದರು. ಜಿ.ಎಂ. ದೇವಗಿರಿ ವಂದಿಸಿದರು.