ಶಿಕ್ಷಕರು ಶಿಸ್ತುಬದ್ಧವಾಗಿ ಬೋಧಿಸಲಿ: ಕಾಡ್ಲೂರ

| Published : Jun 02 2024, 01:46 AM IST

ಸಾರಾಂಶ

ಸುರಪುರ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಿ ಉಪ ಪ್ರಾಂಶುಪಾಲ ಯಲ್ಲಪ್ಪ ಕಾಡ್ಲೂರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸುರಪುರ

ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಪ್ರಸಕ್ತ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಮಕ್ಕಳಿಗೆ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸುವುದರೊಂದಿಗೆ ಉಪ ಪ್ರಾಂಶುಪಾಲ ಯಲ್ಲಪ್ಪ ಕಾಡ್ಲೂರ ಚಾಲನೆ ನೀಡಿದರು.

ನಂತರ ಮಾತನಾಡಿ ಶಿಕ್ಷಕರು ಪ್ರಸಕ್ತ ಸಾಲಿನಲ್ಲಿ ಶಿಸ್ತು ಬದ್ಧವಾಗಿ ಬೋಧಿಸಿವುದರ ಮೂಲಕ ಮಕ್ಕಳ ದಾಖಲಿಸುವಂತ ಫಲಿತಾಂಶ ಹೆಚ್ಚಿಬೇಕಿದೆ. ಪಾಲಕರು ಸಹಿತ ಮಕ್ಕಳ ಕಲಿಕೆ ಗಮನಿಸಿ ಶಿಕ್ಷಕರೊಂದಿಗೆ ಚರ್ಚಿಸಬೇಕು.

ಇಂದಿನ ಶೈಕ್ಷಣಿಕ ವರ್ಷದ ಫಲಿತಾಂಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅದರ ಸುಧಾರಣೆಯತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇದಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಿಕೊಡಲಾಗುವು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಬಿಸಿಯೂಟದಲ್ಲಿ ಕೇಸರಿಬಾತ್, ಫಲಾವ್ ನೀಡಲಾಯಿತು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಂಗಪ್ಪ ಕಟ್ಟಿಮನಿ, ಬಿಆರ್‌ಪಿ ಖಾದರ್ ಪಟೇಲ, ಶಿಕ್ಷಕರಾದ ಸಹರಾಬಾನು, ಮಂದಾಕಿನಿ, ಸರಸ್ವತಿ, ದ್ಯಾವಪ್ಪ, ಜೈರಾಮ ಚವ್ಹಾಣ, ಶರಣಬಸವ ಗಚ್ಚಿನಮನಿ, ಎಚ್. ರಾಠೋಡ, ಅತಿಥಿ ಶಿಕ್ಷಕರಾದ ಸಂತೋಷಕುಮಾರ ಕಟ್ಟಿಮನಿ, ಯಾಸ್ಮಿನ್ ಬೇಗಂ, ನಾಜ್ಮಾ ಬೇಗಂ, ಶಕೀಲಾ ನಸ್ರೀನ್, ಪೌಜಿಯಾ, ಯಲ್ಲಮ್ಮ, ಈರಮ್ಮ ಹಾಗೂ ಪಾಲಕ ಲಕ್ಷ್ಮಣ ಕನಕಗಿರಿ ಸೇರಿದಂತೆ ಇತರರಿದ್ದರು.