ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪಕ್ಷ ಸ್ವಚ್ಛ ಮಾಡಿಕೊಳ್ಳಲಿ: ಬೇಳೂರು ಗೋಪಾಲಕೃಷ್ಣ

| Published : Oct 28 2024, 01:14 AM IST / Updated: Oct 28 2024, 01:25 PM IST

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪಕ್ಷ ಸ್ವಚ್ಛ ಮಾಡಿಕೊಳ್ಳಲಿ: ಬೇಳೂರು ಗೋಪಾಲಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೊದಲು ಸರಿಯಾಗಿ ಪಕ್ಷ ಸ್ವಚ್ಛ ಮಾಡಿಕೊಳ್ಳಲಿ. ಅದು ಬಿಟ್ಟು ಕಾಂಗ್ರೆಸ್ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಸಾಗರ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಬೇಳೂರ ಗೋಪಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದರು

ಶಿರಸಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮೊದಲು ಸರಿಯಾಗಿ ಪಕ್ಷ ಸ್ವಚ್ಛ ಮಾಡಿಕೊಳ್ಳಲಿ. ಅದು ಬಿಟ್ಟು ಕಾಂಗ್ರೆಸ್ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಸಾಗರ ಶಾಸಕ ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಬೇಳೂರ ಗೋಪಾಲಕೃಷ್ಣ ತೀವ್ರ ವಾಗ್ದಾಳಿ ನಡೆಸಿದರು.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಯಡಿಯೂರಪ್ಪ ಮೇಲೆ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಆ ಬಗ್ಗೆ ಮಾತನಾಡದ ವಿಜಯೇಂದ್ರ ಸಿದ್ದರಾಮಯ್ಯ ಬಗ್ಗೆ ಯಾವ ನೈತಿಕತೆ ಇಟ್ಟುಕೊಂಡು ಮಾತನಾಡುತ್ತಾರೆ ಎಂದರು.

ಶೀಘ್ರದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಹೇಳುವ ವಿಜಯೇಂದ್ರ ಅವರು ಭವಿಷ್ಯಗಾರರೇ ಎಂದು ಪ್ರಶ್ನಿಸಿದ ಅವರು, ಅವರ ರಾಜ್ಯಾಧ್ಯಕ್ಷ ಸ್ಥಾನವೇ ಅಲ್ಲಾಡುತ್ತಿದೆ. ಅವರ ಪಕ್ಷದವರೇ ಆ ಬಗ್ಗೆ ಧ್ವನಿ ಹೊರಹಾಕಿದ್ದಾರೆ. ತಮ್ಮ ಸ್ಥಾನ ಉಳಿಸಿಕೊಳ್ಳಲು ಮೊದಲು ಗಮನ ನೀಡಲಿ. ಅದರ ಬದಲು ಸಿದ್ದರಾಮಯ್ಯ ವಿರುದ್ಧ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದರು.

 ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರನ್ನು ತನಿಖೆ ಮಾಡಿದರೆ ಅವರು ಆರೋಪಿ ಆಗುತ್ತಾರಾ? ಯಾಕೆ ಅವರು ರಾಜೀನಾಮೆ ನೀಡಬೇಕು? ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ದುರ್ಬಲ ಮಾಡಬೇಕು ಎಂದು ಕೇಂದ್ರದ ಪ್ರಭಾವಿ ನಾಯಕರೆಲ್ಲರೂ ರಾಜ್ಯಪಾಲರ ಮೇಲೆ ಒತ್ತಡ ಹಾಕಿದ್ದಾರೆ. ಸರ್ಕಾರ ಅಸ್ಥಿರಗೊಳಿಸಬೇಕೆಂಬುದು ಇದರ ಉದ್ದೇಶವಾಗಿದೆ. ಸಮಾಜವಾದಿ ಹಿನ್ನೆಲೆಯ ನಾಯಕನಿಗೆ ಅನ್ಯಾಯವಾಗಬಾರದು ಎಂಬ ಬಲವಾದ ಧ್ವನಿ ಇರುವಾಗ ಯಾಕೆ ಮುಖ್ಯಮಂತ್ರಿ ರಾಜೀನಾಮೆ ವಿಷಯ ಪ್ರಸ್ತಾಪಿಸುತ್ತೀರಿ? ಎಂದರು.

ಶಾಸಕ ಸತೀಶ ಸೈಲ್ ಅವರಿಗೆ ಜನಪ್ರತಿನಿಧಿ ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾಗಿದೆ. ಯಾವುದೇ ವ್ಯಕ್ತಿ ತಪ್ಪು ಮಾಡಿದರೂ ಕಾನೂನಿನಲ್ಲಿ ಇರುವ ಶಿಕ್ಷೆ ಅನುಭವಿಸಲೇಬೇಕು ಎಂದ ಅವರು, ಶರಾವತಿ ನದಿ ನೀರು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆ ಬಗ್ಗೆ ಮಾತುಕತೆ ನಡೆದಿತ್ತಾದರೂ ಪ್ರಸ್ತುತ ಯಾವುದೇ ನೀರು ಕೊಂಡೊಯ್ಯುತ್ತಿಲ್ಲ. ಈ ಬಗ್ಗೆ ಜನರಲ್ಲಿ ಗೊಂದಲ ಬೇಡ ಎಂದರು.ಈ ವೇಳೆ ಕಾಂಗ್ರೆಸ್ ಮುಖಂಡರಾದ ವಸಂತ ನಾಯ್ಕ ಮನ್ಮನೆ ಮತ್ತಿತರರು ಇದ್ದರು. 

.ಸ್ವಾಮೀಜಿ ರಾಜಕೀಯ ಮಾಡುವುದನ್ನು ಮೊದಲು ಬಿಡಲಿ: ಬೇಳೂರು

ಶಿರಸಿ: ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗೌರವ ಸ್ಥಾನದಲ್ಲಿರುವ ಸ್ವಾಮೀಜಿ ರಾಜಕೀಯ ಮಾತನಾಡಬಾರದು ಎಂದು ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.ಜಾತಿಗಣತಿ ಕುರಿತು ಉಡುಪಿ ಪೇಜಾವರ ಶ್ರೀಗಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಜಾತಿ ಗಣತಿಗೆ ಸರ್ಕಾರ ₹೧೮೦ ಕೋಟಿ ಮೀಸಲಿಟ್ಟಿದೆ. ಜಾತಿ ಗಣತಿ ಮಾಡುವುದರಲ್ಲಿ ತಪ್ಪಿಲ್ಲ. ೫೦- ೬೦ ಲಕ್ಷ ಇರುವ ಈಡಿಗರು ಕೇವಲ ೩೦ ಲಕ್ಷ ಮಾತ್ರ ಜನಸಂಖ್ಯೆ ಇದ್ದಾರೆ ಎಂದು ಹೇಳುತ್ತಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗುವುದಿಲ್ಲವೇ? ಗೌರವಯುತ ಸ್ಥಾನದಲ್ಲಿರುವ ಸ್ವಾಮೀಜಿಯವರು ಇಂತಹ ಹೇಳಿಕೆ ನೀಡಬಾರದು ಎಂದು ಹೇಳಿದರು.