ಸಿದ್ದರಾಮಯ್ಯರಿದ್ದಾಗಲೇ ಜಾತಿಗಣತಿ ಜಾರಿಯಾಗಲಿ

| Published : Dec 26 2024, 01:01 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮೇಲ: ಎಚ್.ಕಾಂತರಾಜ್ ವರದಿ (ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ)ಯಂತೆ ಪೂರ್ಣಗೊಂಡ ಜಾತಿ ಗಣತಿ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಜಿಲ್ಲೆಯ ಹಿಂದುಳಿದ ಶೋಷಿತ ವರ್ಗಗಳ ಜನಜಾಗೃತಿ ಸಭೆಯ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗುವುದು ಮಾಜಿ ಶಾಸಕ ರಾಜು ಆಲಗೂರ ಹೇಳಿದರು.

ಕನ್ನಡಪ್ರಭ ವಾರ್ತೆ ಆಲಮೇಲ:

ಎಚ್.ಕಾಂತರಾಜ್ ವರದಿ (ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ)ಯಂತೆ ಪೂರ್ಣಗೊಂಡ ಜಾತಿ ಗಣತಿ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಜಿಲ್ಲೆಯ ಹಿಂದುಳಿದ ಶೋಷಿತ ವರ್ಗಗಳ ಜನಜಾಗೃತಿ ಸಭೆಯ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗುವುದು ಮಾಜಿ ಶಾಸಕ ರಾಜು ಆಲಗೂರ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಾಯಿಸಿ ಜಿಲ್ಲೆಯ ಶೋಷಿತ ವರ್ಗಗಳ ಜನ ಜಾಗೃತಿ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಹಿಂದುಳಿದ ವರ್ಗದ ಜನರಿಗೆ ಸರ್ಕಾರದ ಮೀಸಲಾತಿ ಪಡೆದುಕೊಳ್ಳಲು ಜಾತಿಗಣತಿ ಜಾರಿಗೊಳಿಸಬೇಕು. ಈ ಜಾತಿಗಣತಿ ವರದಿ ಜಾರಿಗೊಳಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ. ಅದಕ್ಕೆ ಅವರ ಅವಧಿಯಲ್ಲೆ ಜಾತಿಗಣತಿ ವರದಿ ಜಾರಿಗೊಳಿಸಿ ಎಂದು ಒತ್ತಾಯಿಸಿ ಜಿಲ್ಲಾ ಕೇಂದ್ರದಲ್ಲಿ ಹಿಂದುಳಿದ ಶೋಷಿತ ವರ್ಗಗಳ ಹಾಗೂ ಅಹಿಂದ ಸಂಘಟನೆ ಮತ್ತು ಕಾಂಗ್ರೆಸ್‌ ಪಕ್ಷದಿಂದ ಲಕ್ಷಾಂತರ ಜನರ ಬೃಹತ್‌ ಜನ ಜಾಗೃತಿ ಸಭೆಯ ಮೂಲಕ ಮುಖ್ಯಮಂತ್ರಿಗಳಿಗೆ ಒತ್ತಾಯಿಸಲಾಗುವುದು ಎಂದರು.

ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಹಿಂದುಳಿದ ವರ್ಗಗಳ ಗಣತಿ ನಡೆಸಿ ಸಲ್ಲಿಸಲಾಗಿರುವ ಎಚ್.ಕಾಂತರಾಜ್ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕು. ಏನೇ ವಿರೋಧಗಳಿದ್ದರೂ ವರದಿ ಮಂಡನೆ ಮಾಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಮುಖಂಡರಾದ ಚಂದ್ರಶೇಖರ ಕೊಡಬಾಗಿ, ವಕೀಲ ಕಲ್ಲಪ್ಪ ಬಳೂಂಡಗಿ, ಡಾ.ಸಂದೀಪ ಪಾಟೀಲ, ಅಹಿಂದ ತಾಲ್ಲೂಕಾಧ್ಯಕ್ಷ ಅಯೂಬ್ ದೇವರಮನಿ, ಪ.ಪಂ ಅಧ್ಯಕ್ಷ ಸಾಧಿಕ್‌ ಸುಂಬಡ, ರಮೇಶ ಭಂಟನೂರ, ಪ್ರಭು ವಾಲೀಕಾರ, ಹರೀಶ ಎಂಟಮಾನ ಸೇರಿದಂತೆ ಅನೇಕರು ಇದ್ದರು.