ಮಹರ್ಷಿ ವಾಲ್ಮೀಕಿ ಅವರ ಜೀವನ ಮತ್ತು ಆದರ್ಶಗಳು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತವೆ. ಸಮುದಾಯದ ಮಕ್ಕಳು ವಾಲ್ಮೀಕಿಯವರನ್ನು ಆದರ್ಶವಾಗಿಟ್ಟುಕೊಂಡು ಉತ್ತಮ ಶಿಕ್ಷಣ ಪಡೆಯುವಂತೆ ಪೋಷಕರು ಗಮನಹರಿಸಬೇಕು ಎಂದು ಪ್ರಾಧ್ಯಾಪಕ ಡಾ. ಅರುಣ ಜೋಳದ ಕೂಡ್ಲಿಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಸುರಪುರ
ಮಹರ್ಷಿ ವಾಲ್ಮೀಕಿ ಅವರ ಜೀವನ ಮತ್ತು ಆದರ್ಶಗಳು ಸಮಾಜಕ್ಕೆ ಮಾರ್ಗದರ್ಶನ ನೀಡುತ್ತವೆ. ಸಮುದಾಯದ ಮಕ್ಕಳು ವಾಲ್ಮೀಕಿಯವರನ್ನು ಆದರ್ಶವಾಗಿಟ್ಟುಕೊಂಡು ಉತ್ತಮ ಶಿಕ್ಷಣ ಪಡೆಯುವಂತೆ ಪೋಷಕರು ಗಮನಹರಿಸಬೇಕು ಎಂದು ಪ್ರಾಧ್ಯಾಪಕ ಡಾ. ಅರುಣ ಜೋಳದ ಕೂಡ್ಲಿಗಿ ಹೇಳಿದರು.ನಗರದ ಪ್ರಜಾಸೌಧದ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಾಲ್ಮೀಕಿಯವರ ಜೀವನ, ಬುಡಕಟ್ಟು ಸಮುದಾಯಗಳ ಇತಿಹಾಸ ಹಾಗೂ ರಾಮಾಯಣದ ಸಾಂಸ್ಕೃತಿಕ ಪ್ರಭಾವದ ಕುರಿತು ವಿಶೇಷ ಉಸನ್ಯಾಸ ನೀಡಿದರು.
ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಸದೆ, ಸಮುದಾಯದ ಐತಿಹಾಸಿಕ ಹಿನ್ನಲೆ, ಸಾಂಸ್ಕೃತಿಕ ಪರಂಪರೆ ಹಾಗೂ ಪ್ರಸುತ್ತ ಸಮಸ್ಯೆಗಳ ಕುರಿತು ಚರ್ಚಿಸುವ ವೇದಿಕೆಯನ್ನಾಗಿ ರೂಪಿಸಬೇಕು. ಸಮುದಾಯದ ಸಮಸ್ಯೆಗಳನ್ನು ಗಂಭೀರವಾಗಿ ಚರ್ಚಿಸಿ, ಬೇಡಿಕೆಗಳ ಈಡೇರಿಕೆಗಾಗಿ ಸಮುದಾಯದ ಜನಪ್ರತಿನಿಧಿಗಳು ವಿಧಾನಸೌಧದ ಕಲಾಪಗಳಲ್ಲಿ ಧ್ವನಿ ಎತ್ತಬೇಕು ಎಂದರು.* ಒಳಮೀಸಲಾತಿಗೆ ಒಗ್ಗಟ್ಟಿನ ಹೋರಾಟ: ಪರಿಶಿಷ್ಟ ಪಂಗಡದ ಬೇಡ, ವಾಲ್ಮೀಕಿ ಸಮುದಾಯದ ಹಕ್ಕುಗಳು ಹಾಗೂ ಒಳಮೀಸಲಾತಿ ಸಹಿತ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ಸಂಘಟಿತ ಹೋರಾಟ ಅಗತ್ಯ. ಸುರಪುರ ತಾಲೂಕಿನಲ್ಲಿ ವಾಲ್ಮೀಕಿ ಸಮುದಾಯದವರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಪರಿಹರಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಸಮುದಾಯದ ಹಕ್ಕೊತ್ತಾಯದ ಮನವಿ ಪತ್ರಗಳನ್ನು ಸಂಗ್ರಹಿಸಿ, ಸಂಬಂಧಿಸಿದ ಎಲ್ಲ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ತಹಸೀಲ್ದಾರರಿಗೆ ಮನವಿ ಮಾಡಿದರು. ಸಮುದಾಯದ ಹಕ್ಕುಗಳ ರಕ್ಷಣೆ ಮತ್ತು ಬೇಡಿಕೆಗಳ ಈಡೇರಿಕೆಗೆ ಆದ್ಯತೆ ನೀಡಬೇಕು ಎಂದು ಡಾ.ಅರುಣ ಹೇಳಿದರು.
ನಿವೃತ್ತ ಉಪನ್ಯಾಸಕ ವೇಣುಗೋಪಾಲನಾಯಕ ಜೇವರ್ಗಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ಆದರ್ಶ, ತತ್ವ ಮತ್ತು ಸಿದ್ಧಾಂತಗಳು ಸಮಾಜಕ್ಕೆ ದಾರಿದೀಪವಾಗಿವೆ. ವಾಲ್ಮೀಕಿರವರು ಆದಿಕವಿ, ತತ್ವಜ್ಞಾನಿ ಹಾಗೂ ಸಮಾಜದ ಸುಧಾಕರಾಗಿದ್ದಾರೆ. ಸಮಾಜದಲ್ಲಿ ಅನ್ಯಾಯಕ್ಕೊಳಗಾದವರ ರಕ್ಷಣೆಗೆ ನಿಲ್ಲುವ ಪರಂಪರೆ ನಮ್ಮ ಸಮಾಜಕ್ಕಿದೆ. ವಾಲ್ಮೀಕಿ ಮತ್ತು ಬೇಡ ಸಮುದಾಯದವರು ಶಿಕ್ಷಣವಂತರಾಗಿ, ಅಸೂಯೆ ತೊರೆದು ಒಗಟ್ಟಿನಿಂದ ಬದುಕಬೇಕು. ಮಹಿಳೆಯರನ್ನು ಗೌರವಿಸಿ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಪರಸ್ಪರ ಬಾಂಧವ್ಯ, ಸಮಾನತೆ, ಒಗ್ಗಟ್ಟು ಮತ್ತು ಸಾಮರಸ್ಯ ಬೆಳೆಸುವ ಮೂಲಕ ಸಮಾಜದ ಪ್ರಗತಿಗೆ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.ತಹಸೀಲ್ದಾರ್ ಎಚ್.ಎ.ಸರಕಾವಸ್ ಅವರು ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ರಾಜಾ ವೆಂಕಪ್ಪನಾಯಕ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್, ನಗರಸಭೆ ಪೌರಾಯುಕ್ತ ಬಸವರಾಜ ಟಣಕೆದಾರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹ್ಮದ್ ಸಲೀಂಸಾಬ್, ಪೊಲೀಸ್ ಇನ್ಸ್ಪೆಕ್ಟರ್ ಉಮೇಶ ಎಂ. ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಭೀಮನಗೌಡ ಲಕ್ಷ್ಮೀ ನಾಯಕ, ಬಿಇಓ ಡಾ.ನಿಂಗರಾಜ ಮೂಲಿಮನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಅಧಿಕಾರಿಗಳಾದ ರಾಮನಗೌಡ ಪಾಟೀಲ, ಭೀಮರಾಯ ಗೋನಾಲ, ಯಲ್ಲಪ್ಪ ನಾಯಕ, ಪಿಎಸ್ಐ ಕೃಷ್ಣ ವ್ಹಿ. ಸುಬೇದಾರ, ಸಿದ್ದಣ್ಣ ಯಡ್ರಾಮಿ, ಮರೆಪ್ಪ ನಾಯಕ ಗುಡ್ಡಕಾಯಿ, ಕೋಂಡ¯ನಾಯಕ ಸಮುದಾಯದ ಮಖಂಡರಾದ ರಾಜಾ ಪಿಡ್ಡನಾಯಕ, ವೆಂಕಟೇಶನಾಯಕ ಬೈರಿಮಡ್ಡಿ, ನಾಗರಾಜನಾಯಕ ಪ್ಯಾಪ್ಲಿ, ವೆಂಕಟೇಶ ಬೇಟೆಗಾರ, ಶರಣುನಾಯಕ, ಕುಮಾರಗೌಡ ನಾಯಕ, ಮೋನಯ್ಯ ಗೋನಾಲ, ರವಿನಾಯಕ ಬೈರಿಮಡ್ಡಿ, ಶ್ರವಣಕುಮಾರನಾಯಕ ಡೊಣ್ಣೆಗೇರಾ, ಭೀಮು ಎಚ್.ನಾಯಕ ಮಲ್ಲಿಭಾವಿ, ಚಂದ್ರಶೇಖರನಾಯಕ ದೊರೆ, ಗೋಪಾಲನಾಯಕ ಗುಡ್ಡಕಾಯಿ, ಶ್ರೀನಿವಾಸ ನಾಯಕ ಬೊಮ್ಮನಹಳ್ಳಿ, ದಾನಪ್ಪ ಲಕ್ಷ್ಮಿಪುರ, ರಾಮಪ್ಪನಾಯಕ, ಭೀಮರಾಯ ದೇವತ್ಕಲ್ ಸೇರಿದಂತೆ ಸಮುದಾಯದ ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರವಿ ಬೆನಕನಹಳ್ಳಿ ಸ್ವಾಗತಿಸಿದರು. ಮಹಾದೇವಪ್ಪ ಗುತ್ತೇದಾರ ನಿರೂಪಿಸಿ, ವಂದಿಸಿದರು.
-----ಬಾಕ್ಸ್----ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ನಗರದ ಡೊಣ್ಣಗೇರಿಯಲ್ಲಿರುವ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ತಹಸೀಲ್ದಾರ್ ಕಚೇರಿಯಲ್ಲಿ ಗಣ್ಯರು ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪರ್ಚಾನೆ ಸಲ್ಲಿಸಿ ಜಯಂತಿ ಆಚರಿಸಿದರು. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ದತ್ತುನಾಯಕ ಗುತ್ತೇದಾರ (ಸಾಮಾಜಿ ಕಕ್ಷೇತ್ರ), ಭೀಮರಾಯ ಡೊಣ್ಣೆಗೇರಿ (ಸಾಹಿತ್ಯ), ವಿಜಯಕುಮಾರ ನಾಯಕ ತಿಮ್ಮಾಪುರ (ಕೃಷಿ), ಲಕ್ಷ್ಮಿ ಹಾಗೂ ರೂಪಾ (ಕ್ರೀಡೆ), ಸೃಷ್ಟಿ ಮತ್ತು ಬಸವರಾಜ (ಶಿಕ್ಷಣ), ಚಂದ್ರಶೇಖರನಾಯಕ ಗುಡ್ಡಕಾಯಿ (ಪತ್ರಿಕೋದ್ಯಮ) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.----ಫೋಟೊ---
26ವೈಡಿಆರ್8 :ಸುರಪುರದ ಪ್ರಜಾಸೌಧದ ಸಭಾಂಗಣದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಿ ಗೌರವಿಸಲಾಯಿತು.