ಸ್ವಾತಂತ್ರ್ಯ ಹೋರಾಟಗಾರ ಧನವಂತರವ ಶತಮಾನೋತ್ಸವ ದೇಶದ ಕಾರ್ಯಕ್ರಮವಾಗಲಿ

| Published : Mar 28 2025, 01:17 AM IST

ಸ್ವಾತಂತ್ರ್ಯ ಹೋರಾಟಗಾರ ಧನವಂತರವ ಶತಮಾನೋತ್ಸವ ದೇಶದ ಕಾರ್ಯಕ್ರಮವಾಗಲಿ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರೀಟಿಷರ ವಿರುದ್ಧ ತೊಡೆ ತಟ್ಟಿದ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಧನವಂತ ಹಳಿಂಗಳಿ ಶತಮಾನೋತ್ಸವ ಕಾರ್ಯಕ್ರಮ ಗ್ರಾಮಕ್ಕೆ ಸೀಮೀತವಾಗದೇ ದೇಶದ ಕಾರ್ಯಕ್ರಮವಾಗಬೇಕು ಎಂದು ಮಾಜಿ ಶಾಸಕ ಶಹಜಾನ ಡೊಂಗರಗಾಂವ ಹೇಳಿದರು.

ಕನ್ನಡಪ್ರಭ ವಾರ್ತೆ ಐಗಳಿ

ಬ್ರೀಟಿಷರ ವಿರುದ್ಧ ತೊಡೆ ತಟ್ಟಿದ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಧನವಂತ ಹಳಿಂಗಳಿ ಶತಮಾನೋತ್ಸವ ಕಾರ್ಯಕ್ರಮ ಗ್ರಾಮಕ್ಕೆ ಸೀಮೀತವಾಗದೇ ದೇಶದ ಕಾರ್ಯಕ್ರಮವಾಗಬೇಕು ಎಂದು ಮಾಜಿ ಶಾಸಕ ಶಹಜಾನ ಡೊಂಗರಗಾಂವ ಹೇಳಿದರು.ಸಮೀಪದ ತೆಲಸಂಗ ಗ್ರಾಮದ ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಧನವಂತ ಹಳಿಂಗಳಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಭಾರತೀಯರ ಒಗ್ಗಟ್ಟು ಮುರಿಯುವ ಬ್ರಿಟಿಷರ ತಂತ್ರವನ್ನು ಮೆಟ್ಟಿ ನಿಂತು ಸಾಮಾಜಿಕ ಮತ್ತು ಸಾಂಸ್ಕೃತಿಕ ವ್ಯತ್ಯಾಸಗಳ ನಡುವೆ ಏಕತೆಯಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧಿ, ಇಂಚಗೇರಿಯ ಮಾಧವಾನಂದ ಪ್ರಭುಜಿಯವರೊಂದಿಗೆ ತಮ್ಮ ಹೋರಾಟ ಆರಂಭಿಸಿದವರೊಬ್ಬರು ಈಗಲೂ ನಮ್ಮ ಮಧ್ಯ ಇರುವುದು ನಮ್ಮ ಹೆಮ್ಮೆ ಎಂದರು.

ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರು ಯಾರೊಬ್ಬರಿಗೆ ಸೀಮಿತವಾಗಿಲ್ಲ. ಮಹಾತ್ಮ ಗಾಂಧಿಜಿ ಅವರೊಂದಿಗೆ ಜೈಲು ಸೇರಿದ್ದ ಶತಾಯುಷಿಗಳ ಕಾರ್ಯಕ್ರಮಕ್ಕೆ ಮನೆ ಮನೆಗಳಿಂದ ಜನರನ್ನು ತೊಡಗಿಸುವ ಕೆಲಸ ಮಾಡಬೇಕು. ಪಕ್ಷಾತೀತ, ಜಾತ್ಯಾತಿಥ ಕಾರ್ಯಕ್ರಮ ಮಾಡುವ ಮೂಲಕ ಶತಾಯಿಷಿ ಸ್ವಾತಂತ್ರ್ಯ ಹೋರಾಟಗಾರ ಧನವಂತ ಹಳಿಂಗಳಿ ಅವರಿಗೆ ಗೌರವ ಸಲ್ಲಿಸೋಣ ಎಂದರು. ಮುಖ್ಯಮಂತ್ರಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾರ್ಯಕ್ರಮಕ್ಕೆ ಅಹ್ವಾನಿಸಲು, ಮೇ.18 ರಂದು ಗ್ರಾಮದ ಬಿವಿವಿ ಸಂಘದ ಶಾಲಾ ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ತಿರ್ಮಾನಿಸಲಾಯಿತು. ಗ್ರಾಮದ ಹಿರಿಯರು, ಮುಖಂಡರು, ಕನ್ನಾಳ, ಬನ್ನೂರ, ಐಗಳಿ, ಕೊಕಟನೂರ, ಹಾಲಳ್ಳಿ, ಅರಟಾಳ, ನೂರಾರು ಜನರು ಉಪಸ್ಥಿತರಿದ್ದರು.