ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ: ಮಕ್ಕಳು ದೇಶದ ಸಂಪತ್ತು ಎಂದು ಹೇಳಿದರೆ ಸಾಲದು ಮಕ್ಕಳು ಎಲ್ಲ ರಂಗದಲ್ಲೂ ಪ್ರತಿನಿಧಿಸುವ ಮೂಲಕ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ಪಟ್ಟಣದ ಹುಡ್ಕೋ ಬಡಾವಣೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಂಪ್ಯೂಟರ್ ಪ್ರಯೋಗಾಲಯ, ಉರ್ದು ವಿಭಾಗ, ಜೆಇಇ, ನೀಟ್, ಸಿಇಟಿ ವಿಭಾಗಗಳ ಆನ್‌ಲೈನ್ ತರಬೇತಿ ಡಿಜಿಟಲ್ ಕೊಠಡಿಗಳನ್ನು ಉದ್ಘಾಟಿಸಿ ಹಾಗೂ ಡೆಸ್ಕ್ ನೀಡಿದ ದಾನಿಗಳನ್ನು ಸನ್ಮಾನಿಸಿ ಮಾತನಾಡಿದರು. ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ. ಅದರಂತೆ ಗುಣಾತ್ಮ ಶಿಕ್ಷಣ ಒದಗಿಸಲು ಮತ್ತು ಎಲ್ಲ ತರಹದ ಸ್ಪಧಾತ್ಮಕ ಪರೀಕ್ಷೆಳನ್ನು ಎದುರಿಸಲು ಪೂರ್ವ ತಯಾರಿಗಾಗಬೇಕು. ಸದ್ಯ ಸರ್ಕಾರ ಸ್ಮಾರ್ಟ್ ಕೊಠಡಿಗಳ ಮೂಲಕ ತರಗತಿ ನೀಡಲು ಮುಂದಾಗಿದೆ. ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಶೃದ್ಧಾಭಕ್ತಿಯಿಂದ ಮುಗಿಸಬೇಕು. ಪ್ರತಿಯೊಂದು ಕೆಲಸಕ್ಕೂ ಕಂಪ್ಯೂಟರ್ ಅವಶ್ಯವಿದ್ದು ಪ್ರತಿಯೊಬ್ಬರೂ ಕಡ್ಡಾಯವಾಗಿ ಕಂಪ್ಯೂಟರ್ ತರಬೇತಿ ಪಡೆದು ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು. ಬಾಲಾಜಿ ಶುಗರ್ಸ್‌ನ ಎಂ.ಡಿ ವೆಂಕಟೇಶಗೌಡ ಪಾಟೀಲ ಮಾತನಾಡಿ, ಬಾಲಾಜಿ ಶುಗರ್ ಕಂಪನಿ ತೆರೆದು ಈ ಭಾಗಗದಲ್ಲಿ ಉದ್ಯೋಗ ಕ್ರಾಂತಿಯನ್ನೇ ಮಾಡಿದ್ದಾರೆ. ಆದರೆ, ಅವರು ಇಷ್ಟು ಬೇಗ ನಮ್ಮನ್ನು ಅಗಲಿರುವ ನೋವು ಎಲ್ಲರನ್ನು ಕಾಡುತ್ತಿದೆ. ಸದ್ಯ ಅವರ ಸ್ಮರಣಾರ್ಥ ಅವರ ಕುಟುಂಬದವರು ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸುಮಾರು ₹ 10 ಲಕ್ಷ ವೆಚ್ಚದಲ್ಲಿ 200 ಉಚಿತ ಡೆಸ್ಕ್‌ಗಳನ್ನು ನೀಡಿ ನಿಜವಾದ ಸಾಮಾಜಿಕ ಬದ್ದತೆ ಮೆರೆದಿದ್ದಾರೆ. ಅವರಿಗೆ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ತಿಳಿಸಿದರು.ಈ ವೇಳೆ ₹ 10 ಲಕ್ಷ ವೆಚ್ಚದಲ್ಲಿ ಸುಮಾರು200 ಉಚಿತ ಡೆಸ್ಕ್‌ಗಳನ್ನು ಕೊಡುಗೆಯಾಗಿ ನೀಡಿದ ಬಾಲಾಜಿ ಶುಗರ್ಸ್ ಕಂಪನಿ ಮುಖ್ಯಸ್ಥರಾದ ಶ್ರೀನಿವಾಸಗೌಡ ಪಾಟೀಲ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.ಈ ವೇಳೆ ತಾಳಿಕೋಟಿ ತಾಲೂಕಿನ ಚಬನೂರ ಹಿರೇಮಠದ ರಾಮಲಿಂಗಯ್ಯಮಠ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಬಾಲಜಿ ಶುಗರ್ಸ್ ಕಂಪನಿಯ ಶ್ರೀನಿವಾಸ ಪಾಟೀಲ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಸರ್ಕಾರಿ ಪಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್.ಅಂಗಡಿ, ಚಿನ್ನು ನಾಡಗೌಡ, ಉಪನ್ಯಾಸಕರಾದ ಐ.ಬಿ.ಹಿರೇಮಠ, ಎಸ್.ವಿ.ಲೊಟಗೇರಿ, ಎಸ್.ಕೆ.ಮಾಳಗೊಂಡ, ಬಿ.ಎ.ನಾಡಗೌಡ, ಎಲ್.ಎಸ್.ಗುರವ, ಎಂ.ಕೆ.ಕುಂಬಾರ, ಸಿ.ಎಸ್.ನಾಲತವಾಡ, ಚಳಿಗೇರಿ ಸೇರಿದಂತೆ ಹಲವರು ಇದ್ದರು.
ಮುದ್ದೇಬಿಹಾಳ ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಂಪ್ಯೂಟರ ಪ್ರಯೋಗಾಲಯ, ಉರ್ಧು ವಿಭಾಗ, ಜೆಇಇ, ನೀಟ್, ಸಿಇಟಿ ವಿಭಾಗಗಳ ಆನ್ ಲೈನ ತರಬೇತಿ ಡಿಜಿಟಲ್‌ಕೋಠಡಿಗಳ ಉದ್ಘಾಟನೆ ಹಾಗೂ ಡೆಸ್ಕ್ ನೀಡಿದ ದಾನಿಗಳಿಗೆ ವಿಶೇಷ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.